Advertisement
ನಗರದ ಹೋಟೆಲ್‌ವೊಂದರಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ “ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ “ಅತಿಯಾದ ರಾಷ್ಟ್ರೀಯವಾದ ವರ್ಸಸ್ ದೇಶಭಕ್ತಿ ‘ ಕುರಿತ ಚಿಂತನಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಸೀಮಿತ ಪರಿಧಿ ಹಾಕಿಕೊಳ್ಳುತ್ತಿದೆ.
Related Articles
Advertisement
ನೆರೆಯ ಬಾಂಗ್ಲಾದೇಶದ ಮಾದರಿಯಲ್ಲಿಯೇ ನಮ್ಮಲ್ಲೂ ಉಗ್ರ ರಾಷ್ಟ್ರೀಯವಾದ ಹುಟ್ಟಿದೆ ಎಂದು ಆರೋಪಿಸಿದ ಅವರು, ಹಿಂದಿ ರಾಷ್ಟ್ರದ ಭಾಷೆ, ಅದನ್ನು ದೇಶದ ಪ್ರತಿಯೊಬ್ಬರೂ ಕಲಿಯಬೇಕು ಎಂಬುದರಿಂದ ಆರಂಭಗೊಂಡು, ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ ಎಂಬುವವರೆಗೂ ಮುಂದುವರೆದಿದೆ ಎಂದರು.
ದೇಶದಲ್ಲಿ ಬಲಪಂಥೀಯ ಚಿಂತನೆಗಳು ಆರೋಗ್ಯಕರವಾಗಿಲ್ಲ. ಇಂತಹ ಸ್ಥಾಪಿತ ಹಿತಾಸಕ್ತಿಗಳಿಂದಾಗಿ ದೇಶದಲ್ಲಿ ಉಗ್ರ ರಾಷ್ಟ್ರೀಯವಾದ ಬಲಗೊಳ್ಳುತ್ತಿದೆ. ಜಾತ್ಯಾತೀಯ ನಿಲುವು, ಮೌಢಾಚರಣೆ ಸೇರಿದಂತೆ ದೇಶದಲ್ಲಿರುವ ಹಳೆಯ ಚಿಂತನೆಗಳನ್ನು ಪ್ರಶ್ನಿಸುವವರು ರಾಷ್ಟ್ರದ್ರೋಹಿಗಳು ಎಂಬಂತೆ ಕಾಣುವ ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ಬಿತ್ತುವ ಕೆಲಸವಾಗುತ್ತಿದೆ.
ಜಾತ್ಯಾತೀತ ರಾಷ್ಟ್ರದಲ್ಲಿ ಎಲ್ಲರೂ ಸಮಾನರೆಂಬ ಐಕ್ಯತೆಯ ಬದಲಾಗಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಕಾಣಲಾಗುತ್ತಿದೆ. ಇದು ದೇಶದ ಸೌಹಾರ್ದಯುತ ಬದುಕಿಗೆ ಮಾರಕ ಎಂದು ಹೇಳಿದರು.
ಗೌರಿ ಲಂಕೇಶ್ ಅವರಿಗೆ ಶ್ರದ್ಧಾಂಜಲಿ“ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ಗೌರಿ ಕುರಿತ ವಿಡಿಯೋ ಪ್ರದರ್ಶಿಸಲಾಯಿತು. “ಸ್ಪೀಕ್ ಅಪ್’, “ಸ್ಪೀಕ್ ಔಟ್’, “ದಿ ರೆಡ್ ಕೌಚ್’, “ಸಿಲಿಫ್’ ಎಂಬ 4 ವೇದಿಕೆಗಳಲ್ಲಿ ಉತ್ಸವದ ವಿವಿಧ ಗೋಷ್ಠಿಗಳು ನಡೆದವು. ಕನ್ನಡ ಹಸ್ತಾಕ್ಷರ ಮತ್ತು ಭಾಷೆ ಇತಿಹಾಸ ಕುರಿತು ಎಸ್.ಶೆಟ್ಟರ್, ಅಂತರಗಂಗೆ ಕುರಿತು ಭಾರ್ಗವಿ ನಾರಾಯಣ್, ಇಂದಿರಾ ಲಂಕೇಶ್, ಡಾ.ವಿಜಯ, ಆಶಾದೇವಿ, ಟಿ20 ವಿಶ್ವಕಪ್ ಗೆದಿದ್ದು ಹೇಗೆ ಎಂಬ ವಿಷಯದ ಕುರಿತು ಅನಿಲ್‌ಕುಂಬ್ಳೆ, ಗಿಡಿಯೋನ್, ರಾಜ್‌ದೀಪ್ ಸರ್‌ದೇಸಾಯಿ ಗೋಷ್ಠಿ ನಡೆಸಿದರು. ಮೊದಲ ದಿನವಾದ ಶನಿವಾರ ಸುಮಾರು 45 ವಿಷಯಗಳ ಕುರಿತು ಗೋಷ್ಠಿಗಳು ನಡೆದವು.