Advertisement

ಕೊರೊನಾ ಭೀತಿ; 4 ಸಾವಿರ ಕೋಳಿಮರಿಗಳ ಸಮಾಧಿ

11:14 PM Mar 11, 2020 | Lakshmi GovindaRaj |

ಶಿವಮೊಗ್ಗ: ಕೊರೊನಾ ವೈರಸ್‌ ಹಾಗೂ ಹಕ್ಕಿಜ್ವರದ ಭೀತಿಯಿಂದ ಕುಕ್ಕುಟೋದ್ಯಮಕ್ಕೆ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಇಲ್ಲಿನ ಕೋಳಿ ಫಾರ್ಮ್ ಮಾಲೀಕರೊಬ್ಬರು ನಾಲ್ಕು ಸಾವಿರ ಕೋಳಿ ಮರಿಗಳನ್ನು ಜೀವಂತ ಸಮಾ ಧಿ ಮಾಡಿದ್ದಾರೆ. ಸಂತೇಕಡೂರಿನ ಕೋಳಿಫಾರ್ಮ್ ಮಾಲೀಕ ಶ್ರೀನಿವಾಸ್‌ ಈ ಕೋಳಿ ಮರಿಗಳನ್ನು ಗುಂಡಿ ತೆಗೆದು ಹೂತಿದ್ದಾರೆ.

Advertisement

ಕೋಳಿಗೆ ಕೊರೊನಾ ವೈರಸ್‌ ಹರಡಿದೆ ಹಾಗೂ ಹಕ್ಕಿಜ್ವರ ಬಂದಿದೆ ಎಂಬ ವದಂತಿ ಹೆಚ್ಚಾದ ಹಿನ್ನೆಲೆಯಲ್ಲಿ ಚಿಕನ್‌ ತಿನ್ನುವವರ ಪ್ರಮಾಣ ದಿಢೀರ್‌ ಕುಸಿದಿದೆ. ಇದರಿಂದ ಚಿಕನ್‌ನ ಹೋಲ್‌ಸೇಲ್‌ ದರ ಕೆ.ಜಿ.ಗೆ 16 ರೂ.ಆಗಿದೆ. ಇದರಿಂದ ಮರಿಗಳನ್ನು ಸಾಕಿದ ವೆಚ್ಚವೂ ಸಿಗದ ಕಾರಣ ಕೋಳಿಮರಿಗಳನ್ನು ಗುಂಡಿಯಲ್ಲಿ ಹಾಕಿ ನಂತರ ಮಣ್ಣು ಮುಚ್ಚಿದ್ದಾರೆ. 1 ಮರಿಗೆ 50 ರೂ.ನಷ್ಟ ಹಾಗೂ ದೊಡ್ಡ ಕೋಳಿಗೆ 150ರೂ. ನಷ್ಟವಾಗುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next