Advertisement

ಸಮಾಜಕ್ಕೆ ಮುರುಘಾಮಠ ಶ್ರೀಗಳ ಕೊಡುಗೆ ಅಪಾರ

10:13 AM Aug 30, 2018 | |

ಆನಂದಪುರ: ಮಲೆನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಡಾ| ಮಲ್ಲಿಕಾರ್ಜುನ ಮಹಾಸ್ವಾಮಿಗಳ ಕೊಡುಗೆ ಅವಿಸ್ಮರಣೀಯವಾದುದು. ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭೂಮಿಕೆ ಶ್ರೀಗಳದ್ದಾಗಿದೆ ಎಂದು ಮೂಲೆಗದ್ದೆಯ ಶಿವಯೋಗಾನಂದ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

Advertisement

ಅವರು ಪಟ್ಟಣದ ಮುರುಘರಾಜೇಂದ್ರಮಠಕ್ಕೆ ಪೀಠಾಧ್ಯಕ್ಷ ಡಾ| ಮಲ್ಲಿಕಾರ್ಜುನ ಮಹಾಸ್ವಾಮಿಗಳವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಲು ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದರು. ವಸತಿ ನಿಲಯ, ಪ್ರಸಾದ ನಿಲಯ,
ಸಂಸ್ಕೃತ ಪಾಠಶಾಲೆ, ಎಲ್ಲಾ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ, ಊಟದ ವ್ಯವಸ್ಥೆ, ಇತಿಹಾಸ ಪರಂಪರೆಯ ಸಂರಕ್ಷಣೆಗೆ ಶಿವಪ್ಪನಾಯಕ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಪ್ರತಿಷ್ಠಾನ, ಗುರುಬಸವ ಅಧ್ಯಯನ ಪೀಠದಿಂದ ಹಲವಾರು ಪುಸ್ತಕ ಪ್ರಕಟಣೆ, ಕ್ರೀಡಾ ಕ್ಷೇತ್ರದಲ್ಲಿ ಸಹ್ಯಾದ್ರಿ ಜೂಡೋ ಅಕಾಡೆಮಿ, ಕೃಷಿ ಮತ್ತು ಆರೋಗ್ಯ ಶಿಬಿರಗಳ ಆಯೋಜನೆ ಇತ್ಯಾದಿ ಕ್ಷೇತ್ರಗಳ ಮೂಲಕ ಸಾಮಾಜಿಕ ಕಳಕಳಿಯನ್ನು ಹೊಂದಿ ಯೋಜನಾಬದ್ಧವಾಗಿ
ಕಾರ್ಯನಿರ್ವಹಿಸುತ್ತಿರುವುದು ಮಲೆನಾಡ ಸೃಷ್ಟಿ ಸೊಬಗಿನ ಮಧ್ಯೆ ಮಠದ ಮೆರುಗನ್ನು ವೃದ್ಧಿಸಿದಂತಾಗಿದೆ ಎಂದರು.

ಶ್ರೀ ಗುರುಬಸವಸ್ವಾಮೀಜಿ ಅವರ ಕಾಲದಲ್ಲಿ ಶಿವಮೊಗ್ಗದಲ್ಲಿ ಮಠದ ಶಾಖೆಯನ್ನು ಪ್ರಾರಂಭಿಸಲಾಯಿತು. ಕಳೆದ
ಹಲವಾರು ವರ್ಷಗಳಿಂದ ನಿರಂತರವಾಗಿ ಧರ್ಮ ಜಾಗೃತಿಗಾಗಿ ಪ್ರತಿ ತಿಂಗಳ ಅಮಾವಾಸ್ಯೆಯಂದು ಮಾಸಿಕ ಶಿವಾನುಭವ ಗೋಷ್ಠಿ, ನಿತ್ಯ ದಾಸೋಹ, ಶಿಕ್ಷಣ ಕ್ಷೇತ್ರದಲ್ಲಿ ಗುರು ಬಸವೇಶ್ವರ ವಿದ್ಯಾಪೀಠದ ಪ್ರಾಥಮಿಕ, ಪ್ರೌಢಶಾಲೆ, ಬಿಇಡಿ ಕಾಲೇಜು ಸೇರಿದಂತೆ 17 ಶಾಲಾ ಕಾಲೇಜುಗಳು, ಸಂಸ್ಕೃತ ಪಾಠಶಾಲೆ, ಶಿಶುವಿಹಾರ, ಪ್ರಸಾದ ನಿಲಯ,
ಅನಾಥಾಲಯ, ವಿದ್ಯಾರ್ಥಿ ನಿಲಯ, ಮಠದ ಪ್ರಾಂಗಣದಲ್ಲಿ ವಿವಿಧ ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಪ್ರದರ್ಶನ, ಧಾರ್ಮಿಕ ಗೋಷ್ಠಿ, ಶರಣ ಸಾಹಿತ್ಯ ಸಮ್ಮೇಳನ ಮತ್ತು ಭಾವೈಕ್ಯ ಸಮ್ಮೇಳನ ಹಾಗೂ ಕಂಚಿನ ದೀಪ ರಥೋತ್ಸವ ಇತ್ಯಾದಿ ವೈವಿಧ್ಯಮಯ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರುತ್ತಿರುವುದು ಶ್ರೀಗಳ ಆಡಳಿತದ ಶ್ರೇಷ್ಠತೆಯನ್ನು ಬಿಂಬಿಸುತ್ತದೆ ಎಂದರು. ಜೈಶೀಲಪ್ಪ ಗೌಡ, ಜಗನ್ನಾಥ್‌, ರವಿಕುಮಾರ್‌, ಮಲ್ಲಿಕಾರ್ಜುನ್‌, ಚಂದ್ರಶೇಖರ್‌ ಮತ್ತಿತರರು ಇದ್ದರು.

ಆಯಸ್ಸು ಸಾಗುತ್ತಾ ಹೋಗುತ್ತದೆ. ಎಷ್ಟು ಕಾಲ ಬದುಕಿದ್ದೇವೆ ಎಂಬುದಕ್ಕಿಂತ ಸಾಧನೆಗಳು ಪ್ರಧಾನವಾದುದು. ಬದುಕಿನ ಸಾರ್ಥಕತೆ ಮುಖ್ಯ. ಹುಟ್ಟು ಹಬ್ಬ ಎನ್ನುವುದು ನಮ್ಮ ಪೂರ್ವಾಶ್ರಮದ್ದಾಗಿದೆ. ನಾವುಗಳು ಪೀಠಾಧ್ಯಕ್ಷರಾದ ದಿನ ನಮ್ಮ ನಿಜವಾದ ಜನ್ಮದಿನವಾಗಿದೆ.
 ಡಾ| ಶ್ರೀಮಲ್ಲಿಕಾರ್ಜುನ ಮಹಾಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next