ಮಾತನಾಡಿದರು.
Advertisement
ದಶಕಗಳ ಕನಸು ನನಸಾಗುವ ದಿನಗಳು ಹತ್ತಿರ ಬರುತ್ತಿದ್ದು, ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಪ್ರತಿಯೊಂದು ಮನೆ-ಮನೆಯಿಂದ ಅಲ್ಪಸ್ವಲ್ಪ ಕಾಣಿಕೆ ಸಲ್ಲಬೇಕು. ಆಗ ಮಾತ್ರ ನಮ್ಮ ಜನ್ಮ ಧನ್ಯವಾಗುತ್ತದೆ ಎಂದರು.
Related Articles
ನರಸಿಂಹನಾಯಕ (ರಾಜುಗೌಡ) ಚಾಲನೆ ನೀಡಿ ಕೃಷಿಯಿಂದ ಬಂದ ಆದಾಯದಲ್ಲಿ 5 ಲಕ್ಷ ರೂ. ಚೆಕ್ ನೀಡುವ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ
ದೇಣಿಗೆ ವಿತರಿಸಿದರು.
Advertisement
ನಂತರ ಮಾತನಾಡಿದ ಅವರು, ಶ್ರೀರಾಮ ಮಂದಿರ ಸರ್ವ ಜನಾಂಗದ ಸ್ವತ್ತು. ಹಿಂದೂಪರ ಹಾಗೂ ಭಕ್ತರು ತಮಗೆ ತಿಳಿದಷ್ಟು, ಶಕ್ತಗನುಸಾರ ದೇಣಿಗೆ ನೀಡಬಹುದು ಎಂದರು. ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣ ಅಭಿಯಾನ ಹಿಂದೂಪರ ಸಂಘಟನೆಗಳಿಂದ ದೇಶಾದ್ಯಂತ ನಡೆದಿದೆ. ಈ ಅಭಿಯಾನ ಯಾವುದೇ ಜಾತಿ, ಜನಾಂಗ ಹಾಗೂ ಪಕ್ಷದ ಪರವಾಗಿಲ್ಲ. ಇದೊಂದು ದೇಶಾಭಿಮಾನ ಎಂದರು.
ನಂತರ ಅಭಿಯಾನ ಪಟ್ಟಣದ ವಿವಿಧ ಬೀದಿಗಳ ಮೂಲಕ ಬಸ್ ನಿಲ್ದಾಣ ಹತ್ತಿರದ ಶ್ರೀರಾಮ ಮಂದಿರ ನಿರ್ಮಾಣ ನಿ ಧಿ ಸಮರ್ಪಣಾ ಕಾರ್ಯಾಲಯಕ್ಕೆಬಂದು ತಲುಪಿತು. ಈ ವೇಳೆ ಶಾಸಕ ರಾಜುಗೌಡ ಕಾರ್ಯಾಲಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮರಿಹುಚ್ಚೇಶ್ವರ ಸ್ವಾಮೀಜಿ, ಚೆನ್ನಬಸವ ಶಿವಚಾರ್ಯರು, ಸಿದ್ದಲಿಂಗಯ್ಯ ಶಾಸ್ತ್ರಿ, ಜಿಪಂ ಸದಸ್ಯ ಬಸವರಾಜ ಸ್ಥಾವರಮಠ, ಎಪಿಎಂಸಿ
ಅಧ್ಯಕ್ಷ ದೇವಣ್ಣ ಮಲಗಲದಿನ್ನಿ, ಹಿಂದೂಪರ ಸಂಘಟನೆ ಮುಖಂಡರಾದ ಬಸವರಾಜ ಮೇಲಿನಮನಿ, ಆನಂದ ಬಾರಗೀಡದ, ರಮೇಶ ಮಿರಜಕರ್, ಮಹೇಶ
ಸ್ಥಾವರಮಠ, ದೇವು ಬೈಚಬಾಳ, ಮಲ್ಲಿಕಾರ್ಜುನ ದೇಸಾಯಿ ಇತರರಿದ್ದರು.