Advertisement

ಕಟೀಲು ಎಪಿಎಂಸಿ ಕಟ್ಟಡಕ್ಕೆ ಶಿಲಾನ್ಯಾಸ 

10:17 AM Jan 12, 2018 | Team Udayavani |

ಕಟೀಲು: ಗ್ರಾಮೀಣ ಪ್ರದೇಶದ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕು. ಈ ನಿಟ್ಟನಲ್ಲಿ ಎಪಿಎಂಸಿ ವತಿಯಿಂದ ಕಟೀಲಿನಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣವಾಗಲಿದೆ ಎಂದು ಶಾಸಕ ಅಭಯಚಂದ್ರ ಜೈನ್‌ ಹೇಳಿದರು.

Advertisement

ಜ. 11ರಂದು ಕಟೀಲು ಗ್ರಾ.ಪಂ. ವ್ಯಾಪ್ತಿಯಲ್ಲಿನ ಮಾಂಜದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಎಪಿಎಂಸಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ, ಅವರು ಮಾತನಾಡಿದರು. ಕೃಷಿ ಚಟುವಟಿಕೆಗಳಿಗಾಗಿ ಇಲ್ಲಿನ ರೈತರು ಕಿನ್ನಿಗೋಳಿ ಅಥವಾ ಬಜಪೆ ಕೃಷಿ ಮಾರುಕಟ್ಟೆಗಳನ್ನು ಅವಲಂಬಿಸಬೇಕಾಗಿತ್ತು. ಈ ಕಟ್ಟಡವು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಾಚರಿಸಲಿದೆ ಎಂದರು.

ಎಪಿಎಂಸಿ ಅಧ್ಯಕ್ಷ ಪ್ರಮೋದ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯ ಸುಕುಮಾರ್‌ ಸನಿಲ್‌, ಕಟೀಲು ಗ್ರಾ. ಪಂ. ಅಧ್ಯಕ್ಷೆ ಗೀತಾ ಪೂಜಾರಿ, ಉಪಾಧ್ಯಕ್ಷ ಕಿರಣ್‌ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಜೋಯಲ್‌ ಡಿ’ಸೋಜಾ, ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್‌ ಪಿಂಟೋ, ಜಿ.ಪಂ. ಮಾಜಿ ಸದಸ್ಯೆ ಶೈಲಾ ಸಿಕ್ವೇರಾ, ನಿತನ್‌ ಹೆಗ್ಡೆ ಕಾವರ ಮನೆ, ಯಾಧವ ಕೋಟ್ಯಾನ್‌ ಪೆರ್ಮುದೆ, ವಿಕ್ರಂ ಮಾಡ, ಗ್ರಾ. ಪಂ. ಸದಸ್ಯ ರಮಾನಂದ ಪೂಜಾರಿ, ಡೋಲ್ಫಿ ಸಂತುಮಾಯೋರ್‌, ಪ್ರಕಾಶ್‌, ದಯಾನಂದ ಶೆಟ್ಟಿ, ಕೃಷಿ ಇಲಾಖೆ ಕಾರ್ಯದರ್ಶಿ ಕುಬೇರ್‌ ನಾಯಕ್‌, ಅಶೋಕ್‌ ಕುಮಾರ್‌, ಶ್ರೀನಿವಾಸ ಮೂರ್ತಿ, ಜಯಲಕ್ಷ್ಮೀ ಮತ್ತಿತರರಿದ್ದರು.

ಕೋಟಿ ರೂ. ವೆಚದಲ್ಲಿ ರಸ್ತೆ
ನಬಾರ್ಡ್‌ನಿಂದ 1 ಕೋ. ರೂ. ವೆಚ್ಚದಲ್ಲಿ ಕಟೀಲು- ಮಲ್ಲಿಗೆಯಂಗಡಿ -ನಡುಗೋಡು – ಶಿಬರೂರು ಸಂರ್ಪಕಿಸುವ ರಸ್ತೆ ನಿರ್ಮಾಣ ಮಾಡಲಾಗುವುದು. ಈಗಾಗಲೇ ಸರ್ವೆ ಕಾರ್ಯ ಮುಗಿದಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭ ವಾಗಲಿದೆ. ಈ ರಸ್ತೆಯ ಬಗ್ಗೆ ಉದಯವಾಣಿಯ ಸುದಿನದಲ್ಲಿ ರಸ್ತೆ ಅಗತ್ಯದ ಬಗ್ಗೆ ವರದಿ ಮಾಡಲಾಗಿತ್ತು.

ಕಾಮಗಾರಿ ನಡೆಯಲಿದೆ
ಕಿನ್ನಿಗೋಳಿ -ಕಟೀಲು -ಉಲ್ಲಂಜೆ ರಸ್ತೆಗೆ ಎರಡು ಕೋಟಿ ರೂ. ವೆಚ್ಚದಲ್ಲಿ 2 ಸೇತುವೆ ಸಹಿತ ರಸ್ತೆಗೆ ಡಾಮರು ಕಾಮಗಾರಿ ನಡೆಯಲಿದೆ. ಕೆಲವೊಂದು ಕಡೆಗಳಲ್ಲಿ ದಾನಿಗಳು ರಸ್ತೆಗೆ ಸ್ಥಳ ಬಿಟ್ಟರೆ, ಅಗಲಗೊಳಿಸುವ ಕೆಲಸವು ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next