Advertisement

ಪ್ರಜಾಪ್ರಭುತ್ವದ ಸೂತ್ರ ಸಂವಿಧಾನ

09:38 AM Jan 28, 2019 | |

ಕಮಲನಗರ: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಶನಿವಾರ ನಡೆದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ರಮೇಶ ಪೆದ್ದೆ ಧ್ವಜಾರೋಹಣ ನೇರವೇರಿಸಿದರು.

Advertisement

ನಂತರ ಮಾತನಾಡಿದ ಅವರು, ನಮ್ಮ ದೇಶದ ಜನರನ್ನು ಆಳುವ ಸೂತ್ರ ರೂಪದ ಗ್ರಂಥವೇ ಸಂವಿಧಾನ. ಪ್ರಜೆಗಳಿಂದ, ಪ್ರಜೆಗಳಿಗಾಗಿ ಸರ್ಕಾರ ನಡೆಸುವ ಮೂಲ ತತ್ವ ಸಂವಿಧಾನದಲ್ಲಿ ಇದೆ ಎಂದರು. ಜಿಪಂ ಸದಸ್ಯ ಬಾಬುಸಿಂಗ್‌ ಹಜಾರಿ, ಉಪ ತಹಶೀಲ್ದಾರ್‌ ಗೋಪಾಲಕೃಷ್ಣ, ಪ್ರಭಾರಿ ಕಂದಾಯ ನಿರೀಕ್ಷಕ ಪ್ರವೀಣ ಬಿರಾದಾರ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕಾಂತ ಹಣಮಶೇಟ್ಟೆ, ಗ್ರಾಮದ ಗಣ್ಯರಾದ ವೈಜಿನಾಥ ವಡ್ಡೆ, ಬಸವರಾಜ ಪಾಟೀಲ, ಬಸವರಾಜ ಚಿಕಮುರ್ಗೆ, ಸಂಗ್ರಾಮಪ್ಪಾ ರಾಂಪೂರೆ, ಅಮೂಲ ಸೂರ್ಯವಂಶಿ, ರಾಮರಾವ್‌ ಜಾಧವ, ನವಾಜ ಮಸ್ತಾನಸಾಬ್‌, ಓಂಕಾರ ಸೊಲ್ಲಾಪುರೆ, ಶಿವರಾಜ ಬಿರಾದಾರ ಹಾಗೂ ದ್ಯಾರ್ಥಿಗಳು ಹಾಜರಿದ್ದರು.

ಸಹಕಾರ ಬ್ಯಾಂಕ್‌: ಪಟ್ಟಣದ ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಅಶೋಕ ಪಾಟೀಲ್‌ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕ್ಷೇತ್ರ ಸಹಾಯಕ ಕೈಲಾಸ ಪೀಟ್ರೆ, ಸಿಬ್ಬಂದಿಗಳಾದ ಮಹೇಶ ಬೇಲ್ಲೆ, ಸುನೀಲ್‌, ಸತ್ಯಜೀತ ಜಾಧವ, ಗ್ಯಾನೋಬಾ ಹಾಗೂ ಇನ್ನಿತರರು ಇದ್ದರು.

ಗ್ರಾಮ ಪಂಚಾಯತ, ಗುರಪ್ಪಾ ಟೊಣ್ಣೆ ಹಾಗೂ ಡಾ| ಚನ್ನಬಸವ ಪಟ್ಟದೇವರ ಪ್ರೌಢಶಾಲೆ, ಸಮುದಾಯ ಆರೋಗ್ಯ ಕೇಂದ್ರ, ರೈತ ಸಂಪರ್ಕ ಕೇಂದ್ರ, ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯ, ಲತಾ ಮಂಗೇಶ್ಕರ ಕನ್ಯಾ ಪ್ರೌಢಶಾಲೆ, ಬಿಸಿಎಂ ಹಾಸ್ಟೇಲ್‌ ಹಾಗೂ ಎಸ್‌ಸಿ-ಎಸ್‌ಟಿ ಹಾಸ್ಟೇಲ್‌ನಲ್ಲಿ ಗಣರಾಜ್ಯೋತ್ಸವ ರಾಷ್ಟ್ರ ಧ್ವಜಾರೋಹಣ ನೇರವೇರಿಸಲಾಯಿತು.

Advertisement

ಮುರುಗ(ಕೆ): ಮುರುಗ(ಕೆ) ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಸಚಿನ ಜಾಧವ ಧ್ವಜಾರೋಹಣ ನೇರವೇರಿಸಿದರು.

ಸಂಜುಕುಮಾರ ಗಾಯಕವಾಡ, ಮನೋಹರ ಕಾಂಬಳೆ ಮಾತನಾಡಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸೈನಿಕರಾದ ಅನುಷ ಘಾಗರೆ, ಜಗದೀಶ ಘಾಗರೆ, ಗೋವಿಂದ ಜಾಧವ, ಮಾಜಿ ಸೈನಿಕರಾದ ನಾಮದೇವ ಘಾಗರೆ, ಬಾಬುರಾವ್‌ ರಾಜನಾಳೆ, ಗ್ರಾಮದ ಮುಖಂಡರಾದ ನೇತಾಜಿ ರಾಜನಾಳೆ, ತ್ರಿಂಬಕ ಕಾಲೇಕರ, ವಿಲಾಸ ಬಿರಾದಾರ, ರಾಜಕುಮಾರ ಕಾಲೇಕರ, ಬಾಲಾಜಿ ಬಿರಾದಾರ, ರಾಜಕುಮಾರ, ಪ್ರಭಾರಿ ಮುಖ್ಯ ಶಿಕ್ಷಕ ಶ್ರೀನಿವಾಸ, ಶಿಕ್ಷಕರಾದ ಲಲಿತಾ ಚಾಂಡೇಶ್ವರೆ, ಲತಾ ಢಗೆ, ಮಹಾದೇವ ಬಿರಾದಾರ, ವಿಶಾಲ ಜಾಧವ ಇನ್ನಿತರರು ಇದ್ದರು.

ತೋರಣಾ: ತೋರಣಾ ಗ್ರಾಮದ ಸ್ವಾಮಿ ವಿವೇಕಾನಂದ ಪಬ್ಲಿಕ್‌ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಬಾಲಾಜಿ ಫಿರಂಗೆ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಬಾಲಾಜಿ ಡೊಂಗರೆ, ಮುಖಂಡರಾದ ಸುರೇಶ ಭೋಸ್ಲೆ, ಸುಖದೇವ ಭೋಸ್ಲೆ, ವಿಜಯಕುಮಾರ ಕೋಟಿವಾಲೆ, ಸಂತೋಷ ದಿಂಡೆ, ದತ್ತಾ ಭೋಸ್ಲೆ, ರಾಜು ಪಾಟೀಲ, ಶಾಲೆಯ ಶಿಕ್ಷಕರಾದ ಸರೋಜಾ ಬಿರಾದಾರ, ಸಪ್ನಾ, ರಂಜಿತ ಬಿರಾದಾರ, ಕಾವೇರಿ, ಮೀನಾಕ್ಷಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next