Advertisement

ಸಂವಿಧಾನವೇ ದಾರಿದೀಪ: ಪ್ರಧಾನಿ ಮೋದಿ

02:14 AM Jun 28, 2020 | Sriram |

ಹೊಸದಿಲ್ಲಿ: ಸಂವಿಧಾನವೇ ನಮಗೆ ದಾರಿದೀಪ. ಕೇಂದ್ರ ಸರಕಾರವು ನಂಬಿಕೆ, ಲಿಂಗ, ಜಾತಿ, ಮತ ಅಥವಾ ಭಾಷೆಗಳ ನಡುವೆ ತಾರತಮ್ಯ ಮಾಡುವುದಿಲ್ಲ. 130 ಕೋಟಿ ಭಾರತೀಯರನ್ನು ಸಶಕ್ತೀಕರಣ ಗೊಳಿಸುವ ಮಹತ್ತರ ಉದ್ದೇಶವನ್ನು ಸರಕಾರ ಹೊಂದಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.

Advertisement

ಕೇರಳದ ಪತ್ತನಂತಿಟ್ಟ ಚರ್ಚ್‌ನ ರೆವರೆಂಡ್‌ ಡಾ| ಮಾರ್‌ ಥೋಮಾಅವರ 90ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪ್ರಧಾನಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಾತಾಡಿದರು. ನಾವು ಯಾವುದೇ ನಿರ್ಧಾರಗಳನ್ನು ದಿಲ್ಲಿಯ ಆರಾಮದಾಯಕ ಸರಕಾರಿ ಕಚೇರಿಗಳಿಂದ ತೆಗೆದುಕೊಳ್ಳುವುದಿಲ್ಲ. ಸ್ಥಳೀಯ ಜನರ ಸಲಹೆಗಳನ್ನು ಹೆಚ್ಚು ಪರಿಗಣಿಸುತ್ತೇವೆ ಎಂದರು.

ಕೋವಿಡ್ ತಡೆ ಯಶಸ್ವಿ
ಆರಂಭದಲ್ಲಿ ಕೋವಿಡ್ ದಾಳಿ ನಡೆಸಿದಾಗ ಭಾರತ ಅಪಾಯಕ್ಕೆ ಸಿಲುಕಲಿದೆ ಎಂದೇ ಅನೇಕರು ಭಾವಿ ಸಿದ್ದರು. ಆದರೆ ಇಂದು ಕೋವಿಡ್ ನಿಯಂತ್ರಣದಲ್ಲಿ ಭಾರತ ಇತರ ರಾಷ್ಟ್ರಗಳಿಗಿಂತ ಉತ್ತಮ ಸಾಧನೆಗೈದಿದೆ. ಲಾಕ್‌ಡೌನ್‌ ಜಾರಿ, ಸರಕಾರವು ಸಮ ಯೋಚಿತವಾಗಿ ಕೈಗೊಂಡ ಕ್ರಮ ಗಳಿಂದಾಗಿ ಮತ್ತು ಜನರ ಪರಿಶ್ರಮದ ಫ‌ಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಎಚ್ಚರ ವಹಿಸೋಣ
ಪ್ರಸ್ತುತ ದೇಶದಲ್ಲಿ ಚೇತರಿಸಿಕೊಳ್ಳು ವವರ ಪ್ರಮಾಣ ಅಧಿಕವಿದೆ. ಆದರೂ ನಾವು ಇನ್ನಷ್ಟು ಮುಂಜಾಗ್ರತೆ ವಹಿಸುವ ಅಗತ್ಯವಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು, ಜನದಟ್ಟಣೆ ಸ್ಥಳಗಳಿಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಬಡತನ ನಿರ್ಮೂಲನೆ, ಮಹಿಳೆ ಯರ ಸಶಕ್ತೀಕರಣಕ್ಕೆ ಬಹುವಾಗಿ ಶ್ರಮಿಸಿರುವ ರೆವರೆಂಡ್‌ ಡಾ| ಮಾರ್‌ ಥೋಮಾ ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲಿ ಎಂದು ಪ್ರಧಾನಿ ಹಾರೈಸಿದರು. ವರ್ಚುವಲ್‌ ಸಭೆಯಲ್ಲಿ ವಿಶ್ವದ ಹಲವು ಕ್ರೈಸ್ತ ಬಾಂಧವರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next