Advertisement

ಸಮೂಹ ಸಾರಿಗೆಗೆ ಕನೆಕ್ಟಿವಿಟಿ ಸವಾಲು

12:51 AM Mar 12, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಮೆಟ್ರೋ ಸೇರಿದಂತೆ ಸಮೂಹ ಸಾರಿಗೆಯನ್ನು ಬಳಸುವುದಕ್ಕೂ ಶೇ.18ರಷ್ಟು ಜನ ತಮ್ಮ ವೈಯಕ್ತಿಕ ವಾಹನವನ್ನೇ ಅವಲಂಬಿಸಿ ರುವ ಅಂಶ ಉಬರ್‌ ಮತ್ತು ಬಿ.ಪ್ಯಾಕ್‌ ಸಂಸ್ಥೆ ಸುಸ್ಥಿರ ಸಂಚಾರಕ್ಕಾಗಿ ನಡೆಸಿದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ ಎಂದು ಬಿ.ಪ್ಯಾಕ್‌ನ ವ್ಯವಸ್ಥಾಪಕ ಟ್ರಸ್ಟಿ ರೇವತಿ ಅಶೋಕ್‌ ತಿಳಿಸಿದರು.

Advertisement

ಬಿ.ಪ್ಯಾಕ್‌ ಮತ್ತು ಉಬರ್‌ ಸಂಸ್ಥೆಯು ನಗರ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ “ಸುಸ್ಥಿರ ಬೆಂಗಳೂರು’ ವರದಿ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ ಸಮಸ್ಯೆಯಿಂದ ಜನ ಸಮೂಹ ಸಾರಿಗೆಗೆ ಸಂಪರ್ಕ ಸಾಧಿಸುವುದಕ್ಕೆ ತಮ್ಮ ವೈಯಕ್ತಿಕ ವಾಹನ ಬಳಸಬೇಕಾದ ಪರಿಸ್ಥಿತಿ ಇದೆ ಎಂದರು.

ಬಿ.ಪ್ಯಾಕ್‌ ಮತ್ತು ಉಬರ್‌ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನ ಸುಸ್ಥಿರ ಸಂಚಾರದ ಬಗ್ಗೆ ಕಳೆದ 9 ತಿಂಗಳಲ್ಲಿ ನಡೆಸಿದ ಸಮೀಕ್ಷೆ ನಡೆಸಿದ್ದು, ಇದರಲ್ಲಿ ನಗರದ ಹಲವು ಪ್ರದೇಶದಲ್ಲಿ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿಯಲ್ಲಿ ಲೋಪವಿರು ವುದು ಕಂಡು ಬಂದಿದೆ.

ಅಲ್ಲದೆ, ನಗರದ ಸಂಚಾರ ದಟ್ಟಣೆ ಸುಧಾರಣೆಗೆ ಹಾಗೂ ಲಾಸ್ಟ್‌ ಮೇಲ್‌ ಕನೆಕ್ಟಿವಿಟಿ ಸುಧಾರಿಸುವಲ್ಲಿ ಸಾರ್ವ ಜನಿಕ-ಖಾಸಗಿ ಸಹಭಾಗಿತ್ವ ಅತ್ಯಂತ ಮುಖ್ಯ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟರು. ಕಳೆದ 9ತಿಂಗಳ ಕಾಲಾವಧಿಯಲ್ಲಿ ಸಾರ್ವಜನಿಕರು, ಜನಪ್ರತಿನಿಧಿಗಳು, ತಜ್ಞರ ಅಭಿಪ್ರಾಯ ಕೂಡೀಕರಿಸಿ ವರದಿ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಎಲೆಕ್ಟ್ರಾನಿಕ್‌ ವಾಹನ ಬಳಕೆ ಉತ್ತೇಜನ ನೀಡಬೇಕು: ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಎಲೆಕ್ಟ್ರಾನಿಕ್‌ ವಾಹನ ಬಳಕೆಗೆ ಉತ್ತೇಜನ ನೀಡುವಲ್ಲಿ ನಾವು ಹಿಂದುಳಿದಿದ್ದೇವೆ ಎಂದು ಬಯೋಕಾನ್‌ ಸಂಸ್ಥೆಯ ಮುಖ್ಯಸ್ಥೆ ಕಿರಣ್‌ ಮಜೂಂದಾರ್‌ಶಾ ಅಭಿಪ್ರಾಯಪಟ್ಟರು. ಇನ್ನು ಎಲೆಕ್ಟ್ರಾನಿಕ್‌ ವಾಹನಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್‌ ವೆಹಿಕಲ್‌ ಚಾಜಿಂಗ್‌ ಸೆಲ್‌ಗ‌ಳ ಮತ್ತು ಮೂಲಭೂತ ಸೌಕರ್ಯ ಗಳನ್ನೂ ಸರ್ಕಾರ ಅಭಿವೃದ್ಧಿಪಡಿಸಬೇಕಿದೆ ಎಂದು ಒತ್ತಾಯಿಸಿದರು.

Advertisement

ರಾಜ್ಯ ಸರ್ಕಾರವು ಐಟಿ-ಬಿಟಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಕಾಯಿದೆಗಳನ್ನು ರೂಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ,ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನುಷ್ಠಾನ ಮಾಡ ಲಾಗಿರುವ ಕಾಯ್ದೆಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂದರು. ಲಾಸ್ಟ್‌ಮೇಲ್‌ ಕನೆಕ್ಟಿವಿಟಿ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ರೂಪಿಸಿಕೊಂಡಿರುವ ಮೆಟ್ರೋ ಸೇರಿದಂತೆ ವಿವಿಧ ಯೋಜನೆಗಳನ್ನು ಕಾಲಮಿತಿಯಲ್ಲಿ ಮುಗಿಸುವುದು ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌, ಬಿಎಂಟಿಸಿ ಸಂಚಾರ ವಿಭಾಗ ಅಧಿಕಾರಿ ರಾಜೇಶ್‌, ಭಾರತ ಮತ್ತು ದಕ್ಷಿಣ ಏಷ್ಯಾದ ಹೆಡ್‌ ಆಫ್ ಸಿಟೀಸ್‌ನ ಉಬರ್‌ ಸಂಸ್ಥೆಯ ಮುಖ್ಯಸ್ಥೆ ಪ್ರಭ್‌ಜೀತ್‌ಸಿಂಗ್‌ ಮತ್ತಿ ತರರು ಹಾಜರಿದ್ದರು.

ಸಲಹೆ ಮತ್ತು ಸೂಚನೆಗಳು
-ಉಬರ್‌, ಬೆಂಗಳೂರು ಪೊಲಿಟಿಕಲ್‌ ಆಕ್ಷನ್‌ ಕಮಿಟಿ(ಬಿ.ಪ್ಯಾಕ್‌) ಸಹಯೋಗದಲ್ಲಿ ಸಂಶೋಧನಾ ವರದಿ.

-ಸಮೂಹ ಸಾರಿಗೆ ಬಳಸುವಂತೆ ಉತ್ತೇಜನ ನೀಡಲು ಶೇರಿಂಗ್‌ ಸಂಚಾರಕ್ಕೆ ಆದ್ಯತೆ.

-ಕಾನೂನು ಬದಲಾವಣೆ ಅಥವಾ ತಿದ್ದುಪಡಿ ಮಾಡುವುದು ಅವಶ್ಯ.

-ಖಾಸಗಿ ಸಂಸ್ಥೆಗಳಿಗೆ ಶೆಟಲ್‌ ಸೇವೆ. ಬೈಕ್‌ ಮತ್ತು ಆಟೋ ಶೇರಿಂಗ್‌ ಅಲ್ಲದೆ ಕಾರ್‌ಪೂಲಿಂಗ್‌ ಸೇವೆಗಳು ಲಭ್ಯ.

-ಎಲೆಕ್ಟ್ರಾನಿಕ್‌ ವಾಹನ ಮತ್ತು ಬ್ಯಾಟರಿಗಳನ್ನು ಪ್ರತ್ಯೇಕ ಘಟಕಗಳ ಸ್ಥಾಪನೆ.

-ಶೇರಿಂಗ್‌ ವಾಹನ ಸೇವೆ ಪ್ರಾರಂಭಿಸುವವರ ಕಾನೂನು ಸಮಸ್ಯೆಗೆ ಪರಿಹಾರ.

Advertisement

Udayavani is now on Telegram. Click here to join our channel and stay updated with the latest news.

Next