Advertisement

ಕಾಂಗ್ರೆಸ್‌ ಗೆದ್ದರೆ ಜೆಡಿಎಸ್‌ ಕಾರಣ: ಎಚ್‌.ವಿಶ್ವನಾಥ್‌

12:33 PM Apr 07, 2017 | Team Udayavani |

ಮೈಸೂರು: ತೀವ್ರ ಕುತೂಹಲ ಮೂಡಿಸಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ರಾಜಕೀಯ ಸಂಸ್ಕೃತಿಯನ್ನೇ ಕೊಂದು ಹಾಕಿವೆ ಎಂದು ಮಾಜಿ ಸಂಸದ ಎಚ್‌.ವಿಶ್ವನಾಥ್‌ ಕಿಡಿಕಾರಿದರು.

Advertisement

ಉಪ ಚುನಾವಣೆ ಹಿನ್ನೆಲೆ ಜಿಲ್ಲಾ ಪತ್ರಕರ್ತರ ಸಂಘದಿಂದ ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು. ಉಪಚುನಾವಣೆ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡೆಸುತ್ತಿರುವ ಪ್ರಚಾರವನ್ನು ಗಮನಿಸಿದರೆ, ಇಡೀ ಸನ್ನಿವೇಶವೇ ಕಲುಷಿತಗೊಂಡಿದೆ.

ಎರಡೂ ರಾಷ್ಟ್ರೀಯ ಪಕ್ಷಗಳು ಪಕ್ಷದ ಭಾಷೆ, ಸಂಸ್ಕೃತಿ ಎಲ್ಲದಕ್ಕೂ ಧಕ್ಕೆ ತಂದಿದ್ದು, ಎರಡೂ ಪಕ್ಷಗಳ ಮುಖಂಡರ ಅಬ್ಬರಕ್ಕೆ ತಲೆಯೂ ಇಲ್ಲ, ಮೆದಳು ಇಲ್ಲದಂತಾಗಿದೆ. ಎಲ್ಲಾ ನಾಯಕರುಗಳು ಪರಸ್ಪರ ಏಕವಚನದಲ್ಲಿ ಆರೋಪ-ಪ್ರತ್ಯಾರೋಪ ಮಾಡುತ್ತಿರುವುದು ಖಂಡನೀಯ ಎಂದರು.

ಮಂತ್ರಿಗಳ ಅಗತ್ಯವಿರಲಿಲ್ಲ: ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲಬೇಕೆಂಬುದು ತಮ್ಮ ಆಶಯವಾಗಿದ್ದರೂ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಅದು ಸಾಧ್ಯವಾಗುತ್ತಿಲ್ಲ. ಉಪ ಚುನಾವಣೆಯ ಆರಂಭಕ್ಕೂ ಮುನ್ನ ಉಪ ಚುನಾವಣೆಯನ್ನು ಪ್ರತಿಷ್ಠೆಯ ಕಣವಾಗಿಸಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ತಿಳಿಸಿದ್ದೆ.

ಆದರೂ 2 ಕ್ಷೇತ್ರಗಳು ಜಿದ್ದಾಜಿದ್ದಿ ಆಗುವಂತೆ ಮಾಡಿದ್ದು, ಕಾಂಗ್ರೆಸ್‌ನ ಎಲ್ಲಾ ಸಚಿವರು, ಶಾಸಕರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಉಪ ಚುನಾವಣೆಯಲ್ಲಿ ಮಂತ್ರಿಗಳನ್ನು ಬಳಸಿಕೊಳ್ಳುವ ಅಗತ್ಯವಿರಲಿಲ್ಲ, ಇಡೀ ಸರ್ಕಾರವೇ ಪ್ರಚಾರದಲ್ಲಿ ತೊಡಗಿರುವುದರಿಂದ ಸ್ಥಳೀಯ ಕಾರ್ಯಕರ್ತರಿಗೆ ಕೆಲಸವೇ ಇಲ್ಲದಂತಾಗಿದೆ. ಎಲ್ಲರೂ ಸೇರಿಕೊಂಡು ಕಾಂಗ್ರೆಸ್‌ ಮುಗಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Advertisement

ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೆ ಅದಕ್ಕೆ ಜೆಡಿಎಸ್‌ ಕಾರಣವಾಗಲಿದ್ದು, ಉಪ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಗಳನ್ನು ಹಾಕದಿರುವುದರಿಂದ ಮತ ವಿಭಜನೆಯಾಗದೆ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದರು.

ಲಾಠಿ ಪ್ರಹಾರಕ್ಕೆ ಖಂಡನೆ: ಮಂಗಳೂರಿನಲ್ಲಿ ಪ್ರತಿ¸‌ಟನಾನಿರತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿರುವುದು ಸರಿಯಲ್ಲ. ಪ್ರತಿಭಟನೆ ಪ್ರಜಾಪ್ರ¸‌ುತ್ವದ ಒಂದು ಭಾಗವಾಗಿದ್ದು, ಧರಣಿ ಕೂತವರ ಮೇಲೆ ಲಾಠಿ ಪ್ರಹಾರ ಮಾಡುವುದು ಮಾನವ ಹಕ್ಕಿನ ಉಲ್ಲಂಘನೆ. ಉತ್ತರ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಿರುವಂತೆ ನಮ್ಮ ರಾಜ್ಯದಲ್ಲೂ ಸಾಲಮನ್ನಾ ಮಾಡಬೇಕಿದೆ ಎಂದು ಆಗ್ರಹಿಸಿದರು.

ಸೋನಿಯಾಗಾಂಧಿ ಭೇಟಿ: ಏ.12ರಂದು ದೆಹಲಿಗೆ ತೆರಳುವ ತಾವು ಏ.15ರಂದು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ರಾಜ್ಯ ಕಾಂಗ್ರೆಸ್‌ನ ವಿದ್ಯಮಾನಗಳ ಬಗ್ಗೆ ವಿವರಣೆ ನೀಡಲಿದ್ದೇನೆ ಎಂದರು. ಸಂವಾದದಲ್ಲಿ ಜಿಲ್ಲಾ ಪರ್ತಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್‌, ಪ್ರಧಾನ ಕಾರ್ಯದರ್ಶಿ ಕೆ.ಜೆ. ಲೋಕೇಶ್‌ಬಾಬು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next