ಬೆಳ್ತಂಗಡಿ: ರಾಜ್ಯ ಸರಕಾರ ಅನೇಕ ಜನಕಲ್ಯಾಣದ ಕಾರ್ಯಕ್ರಮಗಳನ್ನು ನೆರವೇರಿಸಿದ್ದು, ಪ್ರಣಾಳಿಕೆಯ ಶೇ. 95ರಷ್ಟು ಭರವಸೆ ಈಡೇರಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಸರಕಾರದ ಸಾಧನೆಯನ್ನು ಮನೆ ಮನೆಗೆ ತಲುಪಿಸಿ ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಮಂಗಳವಾರ ಇಲ್ಲಿನ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಕೇದಗೆ ಸಭಾಂಗಣದಲ್ಲಿ ಅಲ್ಪಸಂಖ್ಯಾಕರ ಘಟಕ ನಗರ ಹಾಗೂ ಗ್ರಾಮೀಣ ಬ್ಲಾಕ್ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಸಮಾಲೋಚನೆ ಸಭೆ ಉದ್ಘಾಟಿಸಿ ಮಾತನಾಡಿದರು.
ಜಿ.ಪಂ. ಶಿಕ್ಷಣ, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಕೆ.ಕೆ. ಸಾಹುಲ್ ಹಮೀದ್ ಮಾತನಾಡಿ, ಜಿಲ್ಲೆಯಲ್ಲಿ ರಮಾನಾಥ ರೈ ಹಾಗೂ ವಸಂತ ಬಂಗೇರ ಅವರು ಅಪ್ಪಟ ಜಾತ್ಯತೀತ ನಾಯಕರು. ಬಂಗೇರರು ಮುಂದೆಯೂ ಅಜೇಯರಾಗುತ್ತಾರೆ. ಅಲ್ಪಸಂಖ್ಯಾಕರ ಒಗ್ಗಟ್ಟು ಒಡೆಯಲು ಬಿಜೆಪಿ ಯತ್ನಿಸುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಎನ್.ಎಸ್. ಕರೀಂ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಅಲ್ಪಸಂಖ್ಯಾಕ ಘಟಕ ಕರಾವಳಿ ವಲಯ ಅಧ್ಯಕ್ಷ ಯು.ಬಿ. ಸಲೀಂ, ಕೆಪಿಸಿಸಿ ಸದಸ್ಯರಾದ ಬಿ. ತಾಂಬರ ಹೇರಾಜೆ, ರಾಮಚಂದ್ರ ಗೌಡ ಕೆ., ನಗರ ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾಕ ಘಟಕದ ಪ್ರಧಾನ ಕಾರ್ಯದರ್ಶಿ ಲಾರೆನ್ಸ್ ಡಿ’ಸೋಜಾ, ಯುವ ಕಾಂಗ್ರೆಸ್ ತಾ| ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಕಾಂಗ್ರೆಸ್ ಅಲ್ಪಸಂಖ್ಯಾಕ ಮುಖಂಡ ಉಮ್ಮರ್ ಕುಂಞಿ ಮುಸ್ಲಿಯಾರ್, ಜಿ.ಪಂ. ಸದಸ್ಯರಾದ ಧರಣೇಂದ್ರ ಪಿ., ನಮಿತಾ, ಶೇಖರ್ ಕುಕ್ಕೇಡಿ, ತಾ.ಪಂ. ಸದಸ್ಯ ಸೆಬಾಸ್ಟಿಯನ್ ವಿ.ಟಿ., ಕಾಂಗ್ರೆಸ್ ಪದಾಧಿಕಾರಿಗಳಾದ ವೃಷಭ ಆರಿಗ, ನಾಗರಾಜ್ ಲಾೖಲ, ಮಹಮ್ಮದ್ ಹನೀಫ್, ಶುಕುರು ಸಾಹೇಬ್, ಲೋಕೇಶ್ವರಿ ವಿನಯಚಂದ್ರ, ಚಾರ್ಮಾಡಿ ಹಸನಬ್ಬ, ಅಲ್ಪಸಂಖ್ಯಾಕ ಘಟಕ ನಗರ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಬಿ. ಅಶ್ರಫ್, ಪ್ರಧಾನ
ಕಾರ್ಯದರ್ಶಿ ಮೆಹಬೂಬ್ ಬಿ., ಕೋಶಾಧಿಕಾರಿ ಅಖೀಲೇಶ್ ಆ್ಯಂಟನಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಅಯೂಬ್ ಡಿ.ಕೆ. ಮತ್ತಿತರರಿದ್ದರು.