Advertisement
“ಜನಾಂಗೀಯ ದ್ವೇಷದಿಂದ ದೇಶ ಇಬ್ಭಾಗವಾಗುವ ಅಪಾಯ ಹೆಚ್ಚು. ಇಡೀ ರಾಷ್ಟ್ರ ಒಗ್ಗಟ್ಟಾಗಿ ಇಂಥ ದ್ವೇಷಪೂರಿತ ಕೃತ್ಯಗಳನ್ನು ಖಂಡಿಸುತ್ತದೆ’ ಎಂದು ಜಂಟಿ ಅಧಿವೇಶನದ ಭಾಷಣದಲ್ಲಿ ಟ್ರಂಪ್ ಹೇಳಿದ್ದಾರೆ. ಅಲ್ಲದೆ, ರಿಪಬ್ಲಿಕನ್ ಸರ್ಕಾರದ ಮುಂದಿನ ಮಹತ್ವದ ಯೋಜನೆಗಳ ಕಿರುಚಿತ್ರಣವನ್ನೂ ಇದೇ ವೇಳೆ ಮುಂದಿಟ್ಟಿದ್ದಾರೆ.
ಸಂಸತ್‌ನಲ್ಲಿನ ಚೊಚ್ಚಲ ಭಾಷಣಕ್ಕೆ ಡೊನಾಲ್ಡ್ ಟ್ರಂಪ್ ತಮ್ಮ ಲಿಮೋ ಕಾರಿನಲ್ಲೇ ತಯಾರಿ ಮಾಡಿಕೊಂಡ ವಿಡಿಯೋ ವೈರಲ್ ಆಗಿದೆ. ಅಮೆರಿಕದ ಮಾಧ್ಯಮಗಳು, ಕ್ಯಾಮೆರಾಮನ್‌ಗಳು ಅವರನ್ನು ಹಿಂಬಾಲಿಸಿದರೂ, ಅದರ ಕಡೆಗೆ ಲಕ್ಷ್ಯ ಕೊಡದ ಟ್ರಂಪ್, ಕಾರಿನಲ್ಲಿ ಭಾಷಣವನ್ನು ಅಭ್ಯಸಿಸುತ್ತಿದ್ದರು. ಈ ವಿಡಿಯೋ ಟ್ವಿಟರ್‌ನಲ್ಲಿ ನಾಲ್ಕೇ ಗಂಟೆಯಲ್ಲಿ 1,100 ರಿಟ್ವೀಟ್, 1,600 ಲೈಕ್ಸ್ ಬಿದ್ದಿವೆ. ಇಸ್ರೋ ಸಾಧನೆ ಅಮೆರಿಕಕ್ಕೆ ಶಾಕ್!
ಭಾರತದ ಇಸ್ರೋ ಫೆ.15ರಂದು ನಭಕ್ಕೆ ಚಿಮ್ಮಿಸಿದ 104 ರಾಕೆಟುಗಳ ವರದಿ ಓದಿ ಅಮೆರಿಕ ಶಾಕ್ ಆಗಿತ್ತು! ಟ್ರಂಪ್ ಸರ್ಕಾರದ ರಾಷ್ಟ್ರೀಯ ಗುಪ್ತಚರ ಇಲಾಖೆಗೆ ನಿರ್ದೇಶಕರಾಗಿ ಆಯ್ಕೆ ಆಗುತ್ತಿರುವ ಡಾನ್ ಕೋಟ್ಸ್ ಇದನ್ನು ಒಪ್ಪಿಕೊಂಡಿದ್ದಾರೆ. ಇಸ್ರೋ 104 ರಾಕೆಟುಗಳನ್ನು ಏಕಕಾಲದಲ್ಲಿ ಹಾರಿಬಿಟ್ಟಿದ್ದನ್ನು ಕೇಳಿ ಶಾಕ್ ಆದೆವು. ಕಡಿಮೆ ಬಜೆಟ್‌ನಲ್ಲಿ ಇಂಥ ಸಾಧನೆ ಪ್ರಶಂಸನೀಯ ಎಂದಿದ್ದಾರೆ,
Related Articles
1.ಇನ್ನು 9 ವರ್ಷಗಳಲ್ಲಿ ಅಮೆರಿಕ ಸ್ವತಂತ್ರಗೊಂಡು 250 ವರ್ಷವಾಗುತ್ತದೆ. ಈ ಮೈಲುಗಲ್ಲಿಗೂ ಮುನ್ನ ಅಮೆರಿಕವನ್ನು ಮತ್ತೂಮ್ಮೆ ಉನ್ನತಕ್ಕೇರಿಸಲು ರಾಜಕೀಯ ಭೇದ ಮರೆತು ಹೆಜ್ಜೆ ಇಡೋಣ.
Advertisement
2.ನಮ್ಮ ಮಧ್ಯಮ ವರ್ಗದವರ ಬದುಕು ಮುಳುಗಿ ಹೋಗಿದೆ. ಇಲ್ಲಿನ ಉದ್ಯೋಗ, ಸಂಪತ್ತು ಬೇರೆ ದೇಶದವರ ಪಾಲಾಗುತ್ತಿದೆ. ಇದನ್ನು ತಡೆಯಲು ಸೂಕ್ತ ಕ್ರಮ.
3.ವಲಸಿಗರ ಅಪರಾಧ ತಡೆಗೆ ಟಾಸ್ಕ್ ಫೋರ್ಸ್. ವಾರಕ್ಕೊಮ್ಮೆ ಕ್ರೈಮ್ ಮಾಹಿತಿ ಸಂಗ್ರಹ. ಎಲ್ಲ ವಲಸಿಗರ ಅಪರಾಧ ಕೃತ್ಯಗಳನ್ನೂ ದಾಖಲಿಸಿ, ಹೋಮ್‌ಲ್ಯಾಂಡ್ ಸೆಕ್ಯೂರಿಟಿಗೆ ನೀಡುತ್ತದೆ.
4.ವಲಸೆ ನಿರ್ಬಂಧದ 7 ದೇಶಗಳ ಪಟ್ಟಿಯಿಂದ ಇರಾಕ್ ಅನ್ನು ಕೈಬಿಡಲಾಗಿದೆ. ಸಿರಿಯಾ, ಇರಾನ್, ಸುಡಾನ್, ಲಿಬಿಯಾ, ಸೊಮಾಲಿಯಾ, ಯೆಮನ್‌ಗೆ ನಿರ್ಬಂಧ ನೀತಿ 90 ದಿನಗಳವರೆಗೆ ಇರಲಿದೆ.
5.ಡ್ರಗ್ಸ್ ಮತ್ತು ಕ್ರೈಮ್ ತಡೆಗೆ ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣ ಶೀಘ್ರವೇ ಆರಂಭ. ಆದರೆ, ಇದಕ್ಕೆ ಮೆಕ್ಸಿಕೋ ಎಷ್ಟು ಪಾವತಿಸಬೇಕು ಎಂಬುದರ ಬಗ್ಗೆ ಸರ್ಕಾರ ಇನ್ನೂ ನಿರ್ಧಾರಕ್ಕೆ ಬಂದಿಲ್ಲ.
6.ಯೆಮನ್ ದಾಳಿ ವೇಳೆ ಮಡಿದ ಅಮೆರಿಕ ಯೋಧ ವಿಲಿಯಂ ರ್ಯಾನ್ ಒವೆನ್ಸ್‌ಗೆ ನಮನ. ಭಯೋತ್ಪಾದಕರ ವಿರುದ್ಧ ಹೋರಾಡಿದ ಅಮೆರಿಕದ ಹೀರೋ ಆತ.
7.ಇಸ್ಲಾಮಿಕ್ ಭಯೋತ್ಪಾದನೆಯಿಂದ ಅಮೆರಿಕವನ್ನು ರಕ್ಷಿಸಲು ಎಲ್ಲ ರೀತಿಯ ಕ್ರಮ. ಐಸಿಸ್ ಉಗ್ರರು ವಿಶ್ವಕ್ಕೆ ಕೆಟ್ಟ ಛಾಯೆ ಆಗಿದ್ದಾರೆ. ಇಂಥವರಿಂದ ಅಮೆರಿಕ ಯಾವತ್ತೂ ದೂರವೇ ಉಳಿಯುತ್ತದೆ.
8.ಅಮೆರಿಕ ಕಂಪನಿಗಳು ವಿಶ್ವದಲ್ಲೇ ಹೆಚ್ಚು ತೆರಿಗೆ ಕಟ್ಟುತ್ತಿವೆ. ಇದನ್ನು ಕಡಿತಗೊಳಿಸಲು ಎಲ್ಲ ರೀತಿಯ ಕ್ರಮ. ಹೊರ ದೇಶಗಳ ಕಂಪನಿಗಳ ಮೇಲೆ ಹೆಚ್ಚು ತೆರಿಗೆ.