ಮುಳಬಾಗಿಲು: ಲಾಕ್‌ಡೌನ್‌ಗೆ ಸರ್ಕಾರ ತೋರಿಸುವ ಕಳಕಳಿ ರೈತ, ಕೂಲಿ ಕಾರ್ಮಿಕರು ಮತ್ತು ಜನರ ಸಮಸ್ಯೆಗಳಿಗೆ ಯಾಕೆ ತೋರಿಸುತ್ತಿಲ್ಲ, ಅನಾವಶ್ಯಕ ಕಾರ್ಯಕ್ರಮಗಳಿಗೆ ಸರ್ಕಾರ ದುಂದು ವೆಚ್ಚ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಮಾಜಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ನಗರದಲ್ಲಿ ಸಮೃದ್ಧಿ ವಿ.ಮಂಜುನಾಥ್ ಅಭಿಮಾನಿ ಬಳಗ ತಾಲೂಕಿನ 40 ಸಾವಿರ ಕುಟುಂಬಕ್ಕೆ ಅಕ್ಕಿ ಮತ್ತು ತರಕಾರಿ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್ 19 ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸರ್ಕಾರದ ಕ್ರಮಕ್ಕೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಶ್ಲಾಘನೀಯ: ಇದೇವೇಳೆ ಕೃಷಿ ಕಾರ್ಮಿಕರು ಕೂಲಿ ಸಿಗದೆ, ರೈತರು ತಾವು ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ಸಂಕಷ್ಟದಲ್ಲಿದ್ದಾರೆ. ಇವರಿಗೆ ಸರ್ಕಾರ ಪಡಿತರ ಅಕ್ಕಿ ನೀಡಿದ್ದು, ಅದರೊಂದಿಗೆ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚುತ್ತಿವೆ. ಇದರಲ್ಲಿ ಸಮೃದ್ದಿ ಮಂಜುನಾಥ್ ಅವರ ಜನತಾ ದಾಸೋಹ ಕಾರ್ಯವೂ ಒಂದು. ಜಿಲ್ಲೆಯಲ್ಲಿ ಮೊದಲು ಕೈಗೊಂಡಿರುವ ಈ ಕಾರ್ಯವನ್ನು ಶ್ಲಾಘಿಸಿದರು.
ಜನರಿಗೆ ನೆರವು ಕಲ್ಪಿಸಿ: ಈಗ ಸರ್ಕಾರದ ಕಾರ್ಯಕ್ರಮ, ಲಾಕ್‌ಡೌನ್ ಕುರಿತು ಚರ್ಚೆ ಮಾಡುವ ಸಮಯವಲ್ಲ, ಬೇರೆ ಕಾರ್ಯಕ್ರಮಗಳಿಗೆ ಖರ್ಚು
ಮಾಡುತ್ತಿರುವುದನ್ನು ನಿಲ್ಲಿಸಿ, ದುಡಿಯುವ ವರ್ಗ, ಜನಸಾಮಾನ್ಯರ ನೆರವಿಗೆ ಸ್ಪಂದಿಸುವಂತಹ ಕಾರ್ಯಕ್ರಮ ಸರ್ಕಾರ ಮಾಡಬೇಕೆಂದು ಮನವಿ ಮಾಡಿಕೊಂಡರು. ವಿರೋಧ ಪಕ್ಷದಲ್ಲಿದ್ದು ಕೇವಲ ಸರ್ಕಾರದ ವೈಫಲ್ಯಗಳನ್ನು ಸರಿಪಡಿಸುವ ಕೆಲಸ ಮಾಡುವಂತಹ ರಾಜಕಾರಣಿ ನಾನು. ದ್ವೇಷ, ಹಗೆ ಸಾಧಿಸುವ ರಾಜಕಾರಣಿ ನನ್ನಲ್ಲ, ಈ ಸರ್ಕಾರದಲ್ಲಿ ಹೊಸ ಕೆಲಸಗಳು ನಡೆಯುತ್ತಿಲ್ಲ ಎಂದರು.
ಶಾಸಕ ಚೌಡರೆಡ್ಡಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ, ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ನಗರ ಅಧ್ಯಕ್ಷ ತೇಜೋರಮಣ, ಜಿಪಂ ಮಾಜಿ ಸದಸ್ಯ ಶ್ಯಾಮೇಗೌಡ, ಡಾ.ಪ್ರಕಾಶ್, ಡಾ.ವಜಾತುಲ್ಲಾಖಾನ್, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ, ಕವತನಹಳ್ಳಿ ಮುನಿಶಾಮಿಗೌಡ, ನಗರಸಭೆ ಸದಸ್ಯ ರಿಯಾಜ್, ಸೋಮಣ್ಣ, ಸೈಯದ್‌ವಜೀರ್, ಆವಣಿ ಬಾಬು, ತಾಪಂ ಸದಸ್ಯ ನಂಗಲಿ ಶ್ರೀನಾಥ್, ವಕೀಲ ಸಿ.ಎನ್.ರಾಜಕುಮಾರ್,
ಹೈದರಾಲಿಖಾನ್, ರೋಷನ್‌ಟ್ರಸ್ಟ್ ಜಬೀವುಲ್ಲಾ ಭಾಗವಹಿಸಿದ್ದರು.