Advertisement

ಮಹಿಳಾ ಪೇದೆ ಅತ್ಯಾಚಾರದ ದೂರು

12:11 PM Mar 14, 2017 | Team Udayavani |

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ವೊಬ್ಬರ ವಿರುದ್ಧ ಮಹಿಳಾ ಪೇದೆಯೊಬ್ಬರು ಬಾಗಲೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. 

Advertisement

 ಕಸ್ಟಮ್ಸ್‌ ಇನ್ಸ್‌ಪೆಕ್ಟರ್‌ ಹೇಮರಾಜ್‌ ಗುರ್ಜರ್‌ ತಮ್ಮ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು 29 ವರ್ಷದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಮಹಿಳಾ ಪೇದೆ ಮಾರ್ಚ್‌ 5ರಂದು ದೂರು ದಾಖಲಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. 

ಆರೋಪಿ ಅಕಾರಿ ಹೇಮರಾಜ್‌, “ಕಳೆದ ಎರಡು ವರ್ಷಗಳಿಂದ ನನ್ನನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿದ್ದರು. ಅಲ್ಲದೆ ತಮ್ಮ ಪೋಷಕರನ್ನು ಭೇಟಿ ಮಾಡಿಸುವುದಾಗಿ ಹೇಳಿ ಯಲಹಂಕ ಉಪನಗರದ ನಿವಾಸಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ನಂತರ ಮದುವೆಯಾಗಲು ನಿರಾಕರಿಸಿದ್ದಾರೆ,” ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ಆರೋಪಿ ಅಕಾರಿ ಹೇಮರಾಜ್‌ ರಾಜಸ್ಥಾನ ಮೂಲದವರಾಗಿದ್ದು, ಮಹಿಳಾ ಪೇದೆಯೂ ಹೊರರಾಜ್ಯದವರಾಗಿದ್ದಾರೆ. ಅಲ್ಲದೆ ಹೇಮರಾಜ್‌ಗೆ 2013ರಲ್ಲಿ ವಿವಾಹವಾಗಿ ಎರಡು ಮಕ್ಕಳಿದ್ದು, ಪತ್ನಿ ರಾಜಸ್ತಾನದಲ್ಲಿ ವಾಸವಿರುವುದಾಗಿ ತಿಳಿದು ಬಂದಿದೆ. ಮಹಿಳೆ ದೂರು ನೀಡಿದ ದಿನದಿಂದ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ.ಹರ್ಷ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next