Advertisement
ಜಿ.ಎಸ್.ಟಿ. ಹೊಸ ತೆರಿಗೆ ಪದ್ಧತಿಯಿಂದ ಕಂಪನಿ ಸೆಕ್ರೆಟರಿಗಳ ಹುದ್ದೆಯು ಮುಂದಿನ ದಿನಮಾನಗಳಲ್ಲಿ ಬಹುಬೇಡಿಕೆಯ ವೃತ್ತಿಯಾಗಲಿದೆ. ಹಾಗಾಗಿ ಇಂತಹ ವೃತ್ತಿಯ ಕಡೆಗೆ ಸ್ವಲ್ಪ ಗಮನಹರಿಸುವುದು ಒಳಿತು. ಯಾವುದೇ ವೃತ್ತಿ ಆರಂಭಿಸಲು ಹಲವು ದಿನಗಳ ಅಧ್ಯಯನ ಮತ್ತು ತರಬೇತಿಯ ಅವಶ್ಯಕತೆ ಇದೆ. ಹಾಗೆಯೇ ಅಧಿಕೃತ ಹಾಗೂ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಅಧ್ಯಯನ ಹಾಗೂ ತರಬೇತಿಯ ನಂತರ ಪಡೆಯುವ ಕೋರ್ಸ್ ಪ್ರಮಾಣಪತ್ರವು, ಕಂಪನಿ ಸೆಕ್ರೆಟರಿಯಾಗಲು ಅವಕಾಶ ನೀಡುತ್ತದೆ. ಭಾರತೀಯ ಕಂಪನಿ ಸೆಕ್ರೆಟರಿಗಳ ಸಂಸ್ಥೆ MATM(Mq||O|h si Asptbq¦ Thewh|bwh si Mqgb) ಈ ಸಂಸ್ಥೆಗೆ ನೊಂದಾಯಿಸಿಕೊಳ್ಳುವ ಮುಖಾಂತರ ಈ ಹುದ್ದೆಗೆ ಬೇಕಾಗುವ ಪದವಿಯನ್ನು ಪಡೆಯಬಹುದು.
*ಪ್ರೊಫೆಷನಲ್ ಪ್ರೋಗ್ರಾಂ
*ಎಕ್ಸಿಕ್ಯುಟಿವ್ ಪ್ರೋಗ್ರಾಂ- ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದವರು, ಅಥವಾ ಈಗ ಕೊನೆಯ ವರ್ಷದ ಪದವಿ ಓದುತ್ತಿರುವವರು ಈ ಕೋರ್ಸ್‌ಗೆ ಸೇರಬಹುದು.
Related Articles
ಈ ಮೂರು ಹಂತಗಳ ಜೊತೆಗೆ 15 ತಿಂಗಳ ವ್ಯಾವಹಾರಿಕ ತರಬೇತಿ(Pwbe|ebo UwbqqÃ) ಪಡೆಯುವುದು ಅವಶ್ಯ. ಈ ಅವಧಿಯಲ್ಲಿ ಕಾರ್ಪೊರೇಟ್ ಕಂಪನಿಗಳಲ್ಲಿ, ಬ್ಯಾಂಕ್‌ಗಳಲ್ಲಿ, ಹಣಕಾಸು ಸಂಸ್ಥೆಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪಡೆಯಬೇಕಾಗುತ್ತದೆ.(ಮೂರು ಹಂತದ ಕೋರ್ಸ್‌ಗಳಲ್ಲಿ ಯಾವುದೇ ಹಂತದ ಕೋರ್ಸ್ ಮಧ್ಯದಲ್ಲಿ ಈ ತರಬೇತಿ ಪಡೆಯಬಹುದು.)
ಈ ಕೋರ್ಸ್‌ನಲ್ಲಿ ಕಂಪನಿ ಕಾಯ್ದೆಗಳ ಬಗ್ಗೆ, ಹಣಕಾಸು ನಿಯಮಗಳ ಬಗ್ಗೆ, ಹಣಕಾಸು ಕಾಯ್ದೆ, ಬ್ಯಾಂಕಿಂಗ್ ಕಾಯ್ದೆ, ತೆರಿಗೆಗಳ ಬಗ್ಗೆ, ಅಕೌಂಟ್ಸ್, ಕಾಸ್ಟಿಂಗ್ ಹಾಗೂ ಹಣಕಾಸು ನಿರ್ವಹಣೆ ಬಗ್ಗೆ, ಜಾಗತಿಕ ವ್ಯಾಪಾರ ಒಕ್ಕೂಟದ(UL) ನಿಯಮಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಒಟ್ಟಾರೆಯಾಗಿ, ಒಂದು ಕಾರ್ಪೊರೇಟ್ ಕಂಪನಿಯ ಸಮರ್ಥ ಕಂಪನಿ ಸೆಕ್ರೆಟರಿಯಾಗುವ ಅರ್ಹತೆ ಪಡೆಯಲು ಬೇಕಾಗುವ ತರಬೇತಿಯನ್ನು ನೀಡಲಾಗುತ್ತದೆ.
Advertisement
ಕಂಪನಿಗಳ ಸೆಕ್ರೆಟರಿಗಳು ಆಡಿಟ್‌ಗಳನ್ನು ನಿರ್ವಹಿಸುವುದಲ್ಲದೇ ಜಿ.ಎಸ್.ಟಿ. ರಚಿಸುವ ಪ್ರಾಧಿಕಾರ ಹಾಗೂ ಅಪಲೈಟ್ ಟ್ರಿಬ್ಯುನಲ್(ítthoob|h UwdOqbo) ಗಳಲ್ಲಿ ತಮ್ಮ ವಾದ ಮಂಡಿಸಬಹುದಾಗಿದೆ. ಕಂಪನಿ ಸೆಕ್ರೆಟರಿಗಳು ಕಂಪನಿಗಳನ್ನು ಪ್ರತಿನಿಧಿಸುವ ಕಾರಣ ಪ್ರಕರಣಗಳು ಬೇಗ ಇತ್ಯರ್ಥಗೊಂಡು ಕಂಪನಿಗಳಿಗೆ ಸಹಾಯವಾಗಲಿದೆ.ದೇಶದಲ್ಲಿ ಈಗ ಆದಾಯ ಘೋಷಣೆ ಯೋಜನೆ ಹಾಗೂ ರಿಯಲ್ ಎಸ್ಟೇಟ್ ಕಾನೂನುಗಳು, ಅಲ್ಲದೇ ನವಂಬರ್ 8ರಿಂದ ಕೇಂದ್ರ ಸರ್ಕಾರವು ಕಪ್ಪು ಹಣ ನಿಯಂತ್ರಣಕ್ಕಾಗಿ ಹಳೆಯ ರೂ. 500 ಹಾಗೂ ರೂ. 1000ದ ನೋಟುಗಳನ್ನು ಹಿಂಪಡೆದ ಕಾರಣ ಮತ್ತು ಆದಾಯ ಇಲಾಖೆಯಿಂದ ವಿವರಣೆಗಾಗಿ ಬಹಳಷ್ಟು ಜನರಿಗೆ ನೋಟಿಸ್‌ಗಳು ಬರಬಹುದು. ಇವೆಲ್ಲದರಿಂದಾಗಿ ಕಂಪನಿ ಸೆಕ್ರೆಟರಿಗಳ ಕೆಲಸ ಹೆಚ್ಚುವುದಲ್ಲದೆ, ಅವರಿಗೆ ಬೇಡಿಕೆಯೂ ಹೆಚ್ಚಾಗಲಿದೆ. ಜೆ.ಸಿ.ಜಾಧವ, ಗಂಗಾವತಿ