Advertisement

“ಸಮುದಾಯ ಶಿಬಿರಗಳು ಕೃಷಿಗೆ ಪ್ರೇರಣೆಯಾಗಲಿ’

02:33 PM Mar 13, 2017 | Team Udayavani |

ವೇಣೂರು : ದೇಶದ ವಿದ್ಯಾವಂತ ಯುವಕರು ಉದ್ಯೋಗ ಕ್ಕಾಗಿ ಪಟ್ಟಣ, ವಿದೇಶಗಳನ್ನು ಅವಲಂಬಿಸುತ್ತಿದ್ದಾರೆ. ಇದರಿಂದಲೇ ಕೃಷಿಯ ಆಶಾಭಾವನೆ ಕಡಿಮೆ ಆಗಿದೆ. ರೈತರ ಮಕ್ಕಳು ಹಳ್ಳಿಯಲ್ಲೇ ಉಳಿಯುವಂತಾಗಬೇಕು. ಅದಕ್ಕೆಸಮುದಾಯ ಶಿಬಿರಗಳು ಪ್ರೇರಣೆ ಯಾಗಲಿ ಎಂದು ಶಿರ್ತಾಡಿ ಶಿಮುಂಜೆಗುತ್ತುವಿನ ಸಂಪತ್‌ ಸಾಮ್ರಾಜ್ಯ ಹೇಳಿದರು.

Advertisement

ಅವರು ಮರೋಡಿ ಗ್ರಾ.ಪಂ. ಸಭಾಭವನದಲ್ಲಿ ಮೂಡಬಿದಿರೆ ಆಳ್ವಾಸ್‌ ಕಾಲೇಜು ಸಮಾಜ ಕಾರ್ಯ ವಿಭಾಗ, ಗ್ರಾ.ಪಂ. ಮರೋಡಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜರಗಿದ ಸಮುದಾಯದ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ದೇಶದಲ್ಲಿ ಸಾಕಷ್ಟು ವಿದ್ಯಾವಂತರಿದ್ದಾರೆ. ಉದ್ಯೋಗಾವಕಾಶಗಳು ಸಾಕಷ್ಟಿವೆ. ಆದರೆ ಪ್ರಾಮಾಣಿಕತೆ ಕಡಿಮೆ ಆಗಿದೆ. ಅದನ್ನು ವಿದ್ಯಾವಂತರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಆಳ್ವಾಸ್‌ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಪ್ರವೀಣ್‌ರಾಜ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳ್ತಂಗಡಿ ಎಪಿಎಂಸಿ ನೂತನ ಅಧ್ಯಕ್ಷ ಸತೀಶ್‌ ಕೆ. ಕಾಶಿಪಟ್ಣ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಕಾಲೇಜು ವಿದ್ಯಾರ್ಥಿಗಳಿಂದ ಗ್ರಾಮೀಣ ಭಾಗಗಳಲ್ಲಿ ನಡೆಯುವ ಇಂತಹ ಶಿಬಿರಗಳು ಹಳ್ಳಿಯ ಜನತೆಯ ಅಭಿವೃದ್ಧಿಗೆ ಪೂರಕವಾಗಿವೆ ಎಂದವರು ತಿಳಿಸಿದರು.

Advertisement

ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್‌ ಟ್ರಸ್ಟಿ ವಿವೇಕ್‌ ಆಳ್ವ, ಮರೋಡಿ ಗ್ರಾ.ಪಂ. ಸದಸ್ಯ ಸದಾನಂದ ಶೆಟ್ಟಿ, ಪೆರಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಶೆಟ್ಟಿ, ಮಾವಿನಕಟ್ಟೆ ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ವಿಷ್ಣುಮೂರ್ತಿ, ಆಳ್ವಾಸ್‌ ಆರ್ಯುವೇದಿಕ್‌ ಕಾಲೇಜಿನ ಸಹ ಪ್ರಾಧ್ಯಾಪಕ ಡಾ| ಪ್ರದೀಪ್‌, ಆಳ್ವಾಸ್‌ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ| ಮಧುಮಾಲ, ಪೆರಾಡಿ ಪ್ರಾ.ಕೃ.ಪ.ಸ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್‌ ಲತೀಫ್‌ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಆಳ್ವಾಸ್‌ ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಹಾಗೂ ಶಿಬಿರದ ಸಂಯೋಜಕಿ ಪವಿತ್ರಾ ಪ್ರಸಾದ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಳ್ವಾಸ್‌ ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಸ್ವಪ್ನ ಆಳ್ವ  ಸ್ವಾಗತಿಸಿ ವಿದ್ಯಾರ್ಥಿನಿ ದಿವ್ಯಾ ವಂದಿಸಿದರು. ವಿದ್ಯಾರ್ಥಿಗಳಾದ ಚರಣ್‌ರಾಜ್‌ ಮತ್ತು  ಅಕಿತಾ ಕಾಮತ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next