Advertisement

Thirthahalli: ಅಭಿವೃದ್ಧಿ ನೋಡಿ ದೇಶದ ಹಿತದೃಷ್ಟಿಗಾಗಿ ಮತ ನೀಡಿ: ಬಿ ವೈ ರಾಘವೇಂದ್ರ

03:15 PM Mar 30, 2024 | Kavyashree |

ತೀರ್ಥಹಳ್ಳಿ: ಯಾವುದೋ ಗ್ಯಾರಂಟಿ, ಯಾವುದೋ ಕುಟುಂಬ ಅಥವಾ ಯಾರನ್ನೋ ಎಂ.ಪಿ ಮಾಡಲು ಆಗುತ್ತಿರುವ ಚುನಾವಣೆ ಅಲ್ಲ. ಬದಲಾಗಿ ದೇಶದ ಭವಿಷ್ಯ, ರೈತ, ಬಡವ, ಮಹಿಳೆಯರಿಗಾಗಿ ಮಾಡುತ್ತಿರುವ ಚುನಾವಣೆ ಇದಾಗಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.

Advertisement

ಶನಿವಾರ ತಾಲೂಕಿನ ದರಲಗೋಡುವಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಷ್ಟ್ರಕವಿಗಳನ್ನು ಕೊಟ್ಟ ಕ್ಷೇತ್ರ ತೀರ್ಥಹಳ್ಳಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಅವರಿಗೆ 80 ಸಾವಿರಕ್ಕೂ ಅಧಿಕ ಮತ ಬಂದಿತ್ತು. ಈ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಒಂದು ಲಕ್ಷಕ್ಕೂ ಅಧಿಕ ಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅಭಿವೃದ್ಧಿ ರಾಜಕಾರಣದ ಬಗ್ಗೆ ವಿರೋಧ ಪಕ್ಷಕ್ಕೆ ಚರ್ಚೆ ಮಂಡಿಸಲು ಆಗದೇ ಟೀಕೆ ಮಾಡುವುದನ್ನೇ ಚುನಾವಣೆ ಪ್ರಚಾರ ಅಂದುಕೊಂಡಿವೆ. ವಯಕ್ತಿಕ ಟೀಕೆ ಮಾಡುವ ಚುನಾವಣೆ ಅಲ್ಲ. ಅಭಿವೃದ್ಧಿಯನ್ನು ನೋಡಿ ದೇಶದ ಹಿತ ದೃಷ್ಟಿಯಿಂದ ಜಿಲ್ಲೆಯಲ್ಲಿ ಆಗಿರುವ ಕೆಲಸದ ದೃಷ್ಟಿಯಿಂದ ಜನರು ಮತ ನೀಡುತ್ತಾರೆ ಎಂದರು.

ಯತಿಂದ್ರ ಸಿದ್ದರಾಮಯ್ಯ ಬಗ್ಗೆ ಮಾತನಾಡಿ, ಸರ್ದಾರ್ ವಲ್ಲಭಯ್ ಪಟೇಲ್ ತರ ಹೋಲಿಕೆ ಮಾಡುವ ಅಮಿತ್ ಶಾ ಅವರ ಬಗ್ಗೆ ಗೂಂಡಾ ಎಂದಿದ್ದಾರೆ. ಆರ್ಟಿಕಲ್ 370 ರದ್ದು ಮಾಡಿ ದೇಶಕ್ಕೆ ಅನುಕೂಲ ಮಾಡುತ್ತಿರುವ ನಾಯಕರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ಈಶ್ವರಪ್ಪನವರ ಬಗ್ಗೆ ಗೌರವ ಇದೆ. ರಾಜಕಾರಣ ಬರುತ್ತದೆ ಹೋಗುತ್ತದೆ. ಹಿಂದುತ್ವ ವಿರೋಧಿ ಎಂದು ಹೇಳಿಕೆ ನೀಡುವುದು ಸರಿಯಲ್ಲ. ಹಿಂದುತ್ವವನ್ನು ಇನ್ನೊಬ್ಬರ ಬಳಿ ಕಲಿಯುವ ಅವಶ್ಯಕತೆ ಇಲ್ಲ. ಈ ಚುನಾವಣೆ ಅಭಿವೃದ್ಧಿ ಪರವಾಗಿ ಅಭಿವೃದ್ಧಿಗೆ ಮನ್ನಣೆ ಕೊಡದವರ ನಡುವೆ ನಡೆಯುವ ಚುನಾವಣೆ ಎಂದರು.

Advertisement

ಕಾಂಗ್ರೆಸ್ ನಾಯಕರನ್ನು ಆಪರೇಷನ್ ಮಾಡುವ ಬಗ್ಗೆ ಮಾತನಾಡಿ, ಅವರದೇ ಪಕ್ಷದ ಕಾರ್ಯಕರ್ತರು, ನಾಯಕರು ಬೇಸತ್ತಿದ್ದಾರೆ. ನಾವು ಆಪರೇಷನ್ ಮಾಡುವ ಅಗತ್ಯವಿಲ್ಲ, ಅವರೇ ಅಭಾಷನ್ ಮಾಡಿಕೊಳ್ಳುತ್ತಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಜೆಡಿಎಸ್ ತಾಲೂಕು ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್, ನವೀನ್ ಹೆದ್ದೂರು, ಬಾಳೆಬೈಲು ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next