Advertisement

ಸುಳ್ಳು ಮಾಹಿತಿಗೆ ಅನರ್ಹತೆ ಶಿಕ್ಷೆ?

07:00 AM Dec 24, 2018 | Team Udayavani |

ಹೊಸದಿಲ್ಲಿ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ತಮ್ಮ ಸ್ವತ್ತು ಹಾಗೂ ಆದಾಯ ಸೇರಿದಂತೆ ಇತರ ವಿಚಾರಗಳಿಗೆ ಸಂಬಂಧಿಸಿ ಸುಳ್ಳು ಮಾಹಿತಿ ನೀಡಿದರೆ ಅವರನ್ನು ಅನರ್ಹಗೊಳಿಸಬೇಕು ಎಂಬ ಪ್ರಸ್ತಾವನೆಯನ್ನು ಕಾನೂನು ಸಚಿವಾಲಯಕ್ಕೆ ಚುನಾವಣಾ ಆಯೋಗ ಸಲ್ಲಿಸಲಿದೆ. ಅಷ್ಟೇ ಅಲ್ಲ, ವಿಧಾನ ಪರಿಷತ್‌ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೂ ಆಯೋಗ ಕಡಿವಾಣ ಹಾಕುವ ಪ್ರಸ್ತಾಪ ಮಾಡಲಿದೆ.

Advertisement

ಪ್ರಸ್ತುತ ಚಳಿಗಾಲದ ಅಧಿವೇಶನ ಮುಗಿದ ನಂತರದಲ್ಲಿ ಶಾಸಕಾಂಗ ಕಾರ್ಯದರ್ಶಿ ಜಿ. ನಾರಾಯಣ ರೆಡ್ಡಿ ಹಾಗೂ ಇತರ ಅಧಿಕಾರಿಗಳೊಂದಿಗೆ ಚುನಾವಣಾ ಆಯೋಗ ಸಭೆ ನಡೆಸಲಿದ್ದು, ಈ ವೇಳೆ ಹಲವು ಮಹತ್ವದ ಚುನಾವಣಾ ಸುಧಾರಣೆಗಳ ಪ್ರಸ್ತಾಪವನ್ನು ಆಯೋಗ ಮಾಡಲಿದೆ. ಜನವರಿ 8 ರಂದು ಚಳಿಗಾಲದ ಅಧಿವೇಶನ ಮುಗಿಯಲಿದ್ದು, ಅದರ ನಂತರದಲ್ಲಿ ಸಭೆ ನಡೆಯಲಿದೆ ಎಂದು ಹೇಳಲಾಗಿದೆ.

ಸದ್ಯ ಸುಳ್ಳು ಮಾಹಿತಿ ನೀಡಿದರೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಆದರೆ ಅನರ್ಹಗೊಳಿಸುವ ಅವಕಾಶವಿಲ್ಲ. ಇನ್ನೊಂದೆಡೆ ಚುನಾವಣೆ ಸಂಬಂಧಿ ಭ್ರಷ್ಟಾಚಾರವನ್ನು ಶಿಕ್ಷಾರ್ಹ ಅಪರಾಧವನ್ನಾಗಿಸುವ ಪ್ರಸ್ತಾಪವನ್ನೂ ಆಯೋಗ ಮಾಡಲಿದೆ. ಸದ್ಯ ಇದು ಶಿಕ್ಷಾರ್ಹ ಅಪರಾಧವಾಗಿಲ್ಲ. ಹೀಗಾಗಿ ಇಂತಹ ಪ್ರಕರಣ ಗಳ ತನಿಖೆಗೆ ಜಿಲ್ಲಾಧಿಕಾರಿಯ ಅನುಮತಿ ಅಗತ್ಯವಿರುತ್ತದೆ. ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲ್ಪಟ್ಟರೆ, ಕೊಲೆ, ವರದಕ್ಷಿಣೆ ಹಾಗೂ ಅತ್ಯಾಚಾರ ಪ್ರಕರಣಗಳಷ್ಟೇ ಗಂಭೀರವಾಗಿ ಇಂತಹ ಪ್ರಕರಣಗಳನ್ನು ಪರಿಗಣಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next