Advertisement

ನಗುವಿನಿಂದ ದೇಹಕ್ಕೆ ದಿವ್ಯ ಔಷಧ : ಪಡಶೆಟ್ಟಿ 

04:12 PM Sep 15, 2018 | Team Udayavani |

ಬೆಳಗಾವಿ: ದೇವರನ್ನು ಎಲ್ಲ ಕಡೆ ಹುಡುಕಬೇಡಿ. ನಗೆಯಲ್ಲಿಯೇ ದೇವರಿದ್ದಾನೆ. ನೀವು ನಗುತ್ತ ನಗಿಸುತ್ತ ಇದ್ದಲ್ಲಿ ಈ ನಗೆದೇವರು ಯಾವಾಗಲೂ ತಮಗೆ ಒಳ್ಳೆಯದನ್ನೇ ಮಾಡುತ್ತಾನೆ. ಎಂದು ಬೆಂಗಳೂರಿನ ಹಾಸ್ಯ ದರ್ಪಣ ಪತ್ರಿಕೆ ಸಂಪಾದಕ ಎಸ್‌.ಎಸ್‌. ಪಡಶೆಟ್ಟಿ ಹೇಳಿದರು.

Advertisement

ನಗರದ ಹಾಸ್ಯಕೂಟ ಹಾಗೂ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಆಶ್ರಯದಲ್ಲಿ ನಡೆದ ನಗೆಯೂಟ ಹಾಗೂ ಸಂಗೀತ ಸಂಜೆ ಕಾರ್ಯಕ್ರಮದ ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಅವರು, ನಾಡಗೇರ ಕೃಷ್ಣರಾಯ, ಎನ್ಕೆ, ಟಿ. ಸುನಂದಮ್ಮ ಮುಂತಾದ ಪ್ರಮುಖ ಹಾಸ್ಯಲೇಖಕರ ಕೃತಿಗಳು ಇಂದು ಓದಲು ಸಿಗುತ್ತಿಲ್ಲ ಈ ಕೃತಿಗಳು ಪುನಮುದ್ರಣಗೊಳ್ಳವಂತೆ ಸರ್ಕಾರ ಮುಂದಾಗಬೇಕಾದ ಅವಶ್ಯಕತೆಯಿದೆ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ| ಸ್ವಪ್ನಾ ಕುಲಕರ್ಣಿ ಮಾತನಾಡಿ, ಹಾಸ್ಯಕೂಟ ಎನ್ನುವುದು ಅಪರೂಪದ ನಗೆಲೋಕ. ಇದೊಂದು ಕೌಟುಂಬಿಕ ಕಾರ್ಯಕ್ರಮದಂತೆ. ಮನುಷ್ಯನಿಗೆ ನಗು ಎನ್ನುವುದು ದಿವ್ಯ ಔಷಧಯಿದ್ದಂತೆ. ನಗುವಾಗ ದೀರ್ಘ‌ ಶ್ವಾಸೋಚ್ಛಾಸ ನಡೆಯುತ್ತದೆ. ನಿಮ್ಮಲ್ಲಿ ನಗುವಿದ್ದರೆ ವೈದ್ಯರ ಬಳಿ ಬರುವ ಅವಶ್ಯಕತೆಯೇ ಇರುವುದಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕನ್ನಡ ಹೋರಾಟಗಾರ ಡಾ. ಸಿದ್ದನಗೌಡ ಪಾಟೀಲ ಹಾಸ್ಯಕೂಟ ಪ್ರತಿ ತಿಂಗಳೂ ಹೊಸಬರನ್ನು ಬೆಳಗಾವಿ ಹಾಸ್ಯಪ್ರಿಯರಿಗೆ ಪರಿಚಯಿಸುವ ಮಹತ್ತರ ಕಾರ್ಯ ಮಾಡುತ್ತಿದೆ ಎಂದರು. ಡಾ| ಎ.ಎಲ್‌. ಕುಲಕರ್ಣಿ, ನಗೆ ಬರೆಹಗಾರ ಬೆಂಗಳೂರಿನ ಕೊ.ಲ. ರಂಗನಾಥರಾವ್‌ ಉಪಸ್ಥಿತರಿದ್ದರು. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿ. ಎಸ್‌. ಸೋನಾರ, ಎಂ.ಬಿ. ಹೊಸಳ್ಳಿ ತಮ್ಮ ನಗೆ ಮಾತುಗಳಿಂದ ಜನರನ್ನು ರಂಜಿಸಿದರು. ಪ್ರೊ| ಜಿ. ಕೆ. ಕುಲಕರ್ಣಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next