Advertisement

ಬಣ್ಣದ “ಛತ್ರಿ’ಬಿಟ್ಟೆ ಬಿಟ್ಟೆ..ಬಸ್ಸಿನಲ್ಲಿ ಮಿಸ್ಸಾದ ಬಾಯ್‌ಫ್ರೆಂಡ್

06:45 AM Aug 15, 2017 | Harsha Rao |

ಮಳೆ- ಬಿಸಿಲು ನಮ್ಮ ಮೇಲೆ ಬೀಳದಂತೆ ನೋಡಿಕೊಳ್ಳುವ ಕೊಡೆಯ ಜತೆಗೆ ನಮಗೆ ಗೊತ್ತಿಲ್ಲದಂತೆ ಒಂದು ಭಾವನಾತ್ಮಕ ನಂಟೂ ಬೆಳೆದಿರುತ್ತದೆ. ಆ ಸಂಬಂಧ ಹೇಗಿರುತ್ತೆ? ಒಂದು ದಿನ ಆ ಕೊಡೆಯೇ ನಮ್ಮಿಂದ ದೂರ ಆದಾಗ, ನಾವು ಹೇಗೆ ಒಂಟಿ ಆಗ್ತಿàವಿ ಅನ್ನೋದಕ್ಕೆ ಇಲ್ಲೊಬ್ಬಳ ಚಡಪಡಿಕೆಯೇ ಸಾಕ್ಷಿ…

Advertisement

ಒಂದೇ ಸಮನೆ ಮಳೆ ಸುರಿಯುತ್ತಿತ್ತು. ಕಣ್ಣ ಮುಂದೆ ಬಣ್ಣಬಣ್ಣದ ಕೊಡೆ ಕಾಣುತ್ತಿತ್ತು. ಅದು ನಾನು ಮೊದಲ ಸಾರಿ ಹಿಡಿದ ಬಣ್ಣಬಣ್ಣದ ಕೊಡೆ. ಚಿಕ್ಕವಳಿ¨ªಾಗಿನಿಂದಲೂ ನನಗೆ ಕೊಡೆ ಎಂದರೆ ತುಂಬಾ ಇಷ್ಟ. ಅಜ್ಜನ ದೊಡ್ಡ ಕೊಡೆ ಹಿಡಿದು ಮನೆ ತುಂಬಾ ಓಡಾಡುತ್ತಿ¨ªೆ. ಕೊಡೆ ಮೇಲಿನ ನನ್ನ ಹುಚ್ಚು ಪ್ರೀತಿ ಕಂಡು ಅಜ್ಜ ನನಗೊಂದು ಕೊಡೆ ತಂದುಕೊಟ್ಟಿದ್ದರು. ಅದೂ ಬಣ್ಣಬಣ್ಣದ ಕೊಡೆಯೇ. ನನಗೆ ಖುಷಿಯೋ ಖುಷಿ. ಮನೆ ತುಂಬಾ ಖುಷಿಯಿಂದ ಓಡಾಡಿದ್ದೇ ಓಡಾಡಿದ್ದು. ಯಾರಾದರೂ ಕೊಡೆ ಮುಟ್ಟಿದರೆ ಅವರಿಗೆ ಬಯುYಳ ಗ್ಯಾರಂಟಿ. ಕೊಡೆ ಹಿಡಿದು ಮಲಗಿದ ದಿನಗಳೂ ಇವೆ! ನನ್ನ ಪ್ರೀತಿಯ ಕೊಡೆಯನ್ನು ಶಾಲೆಗೆ ತೆಗೆದುಕೊಂಡು ಹೋಗಿ ಸ್ನೇಹಿತೆಯರಿಗೆಲ್ಲ ತೋರಿಸಿ¨ªೆ. ನನಗೆ ನನ್ನ ಬಣ್ಣದ ಕೊಡೆಯ ಆಲೋಚನೆ ಬಿಟ್ಟರೆ ಬೇರೆ ಯಾವ ಯೋಚನೆಯೂ ಬರುತ್ತಿರಲಿಲ್ಲ. “ಯಾರಾದರೂ ನಿನ್ನ ಕೊಡೆ ತುಂಬಾ ಚೆನ್ನಾಗಿದೆ ಕಣೇ…’ ಎಂದರೆ ಒಳಗೊಳಗೆ ಸಂತಸ. ಒಮ್ಮೆ ಕನ್ನಡ ಟೀಚರ್‌, ಹೊರಗಡೆ ಜೋರು ಮಳೆ ಬರುತ್ತಿದೆ ಎಂದು ನನ್ನ ಕೊಡೆ ತೆಗೆದುಕೊಂಡು ಸ್ಟಾಫ್ ರೂಮ್‌ಗೆ ಹೋದವರು ಮರಳಿ ಬರುವಾಗ ಒಂದು ಗಂಟೆ ಆಗಿತ್ತು. ಅವರು ಬರುವ ತನಕ ನನ್ನ ಜೀವ ಚಡಪಡಿಸುತ್ತಿತ್ತು. “ಅಯ್ಯೋ ಕೊಡೆ ಹಾಳಾದರೆ? ಯಾರಾದರೂ ತೆಗೆದುಕೊಂಡು ಹೋಗಿ ಬಿಟ್ಟರೆ… ಕೊನೆಗೆ ಆ ಆಲೋಚನೆಗೆ ಬ್ರೇಕ್‌ ಬಿದ್ದಿದ್ದು ಕೊಡೆ ಮರಳಿ ನನ್ನ ಕೈ ಸೇರಿದ ಮೇಲೆಯೇ. ಹೋದ ಜೀವ ಮರಳಿ ಬಂದ ಹಾಗಾಗಿತ್ತು.

ಒಂದು ದಿನ ಶಾಲೆಯಿಂದ ಬಸ್ಸಿನಲ್ಲಿ ಮನೆಗೆ ಬರುತ್ತಿ¨ªೆ. ಬಸ್ಸಿನಲ್ಲಿ ಕುಳಿತÇÉೇ ನಿ¨ªೆಗೆ ಜಾರಿದ್ದ ನನಗೆ ಎಚ್ಚರವಾದದ್ದು ನಾನು ಇಳಿಯುವ ಸ್ಟಾಪ್‌ ಬಂದಾಗ. ಗಡಿಬಿಡಿಯಿಂದ ಇಳಿದು ಮನೆಗೆ ಬಂದೆ. ಬಾಗಿಲ ಬಳಿ ನಿಂತಿದ್ದ ಅಮ್ಮ ನಗುತ್ತಾ “ಎಲ್ಲೇ ನಿನ್ನ ಬಣ್ಣಬಣ್ಣದ ಕೊಡೆ?’ ಎಂದು ಕೇಳಿದರು. ನಿದ್ದೆ ಮಾಡಿ ಬಸ್ಸಿನಲ್ಲೇ ಕೊಡೆ ಬಿಟ್ಟು ಬಂದದ್ದು ಆಗ ನೆನಪಾಯಿತು. ಬೇಸರದಿಂದ ಅಳತೊಡಗಿದೆ. “ಕಳೆದುಹೋದ ಕೊಡೆ ಬೇಕು’ ಎಂದು ಹಠ ಹಿಡಿದೆ. ನನ್ನ ಹಠಕ್ಕೆ ಮರುಗಿ ಪಾಪ ಅಜ್ಜ ಕೂಡಲೇ ಪೇಟೆಗೆ ಹೋಗಿ ಮತ್ತೂಂದು ಕೊಡೆಯನ್ನೇ ತಂದುಕೊಟ್ಟರು. ಹೊಸ ಕೊಡೆಯನ್ನು ಕಂಡು ಖುಷಿಯೂ ಆಯಿತು. ಆದರೆ, ಬಸ್ಸಿನಲ್ಲಿ ಕಳೆದುಕೊಂಡ ಆ ಬಣ್ಣದ ಕೊಡೆ ನನ್ನನ್ನು ಪ್ರತಿ ಮಳೆಗಾಲದಲ್ಲೂ ಕಾಡುತ್ತದೆ… 

– ಸುಹಾನಿ ಬಡೆಕ್ಕಿಲ, ನೆಕ್ಕಿಲಾಡಿ 

Advertisement

Udayavani is now on Telegram. Click here to join our channel and stay updated with the latest news.

Next