Advertisement

ಸಮ್ಮಿಶ್ರ ಸರ್ಕಾರ ಸಾಂಧರ್ಬಿಕ ಶಿಶು

05:20 PM Jun 05, 2018 | |

ಶಿಕಾರಿಪುರ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಸಾಂಧರ್ಬಿಕ ಶಿಶುವಾಗಿದ್ದು, ಇದರ ಆಯುಷ್ಯ
ಬಹುಕಾಲ ಉಳಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭವಿಷ್ಯ ನುಡಿದರು.

Advertisement

ಪಟ್ಟಣದಲ್ಲಿ ಆಯೋಜಿಸಿದ್ದ ನೂತನ ಶಾಸಕರಿಗೆ ಅಭಿನಂದನೆ ಹಾಗೂ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಪರ ಮತಯಾಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 104 ಸ್ಥಾನ ಪಡೆದ ನಾವು ವಿಪಕ್ಷ ಸ್ಥಾನದಲ್ಲಿ
ಕುಳಿತ್ತಿದ್ದೇವೆ. ಕೇವಲ 37 ಸ್ಥಾನ ಪಡೆದ ಜೆಡಿಎಸ್‌ ಆಡಳಿತ ಚುಕ್ಕಾಣಿ ಹಿಡಿದಿದೆ. ಕೇವಲ ಕಡಿಮೆ ಸ್ಥಾನ ಪಡೆದ ಜೆಡಿಎಸ್‌ ಗೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಒತ್ತೆ ಇಟ್ಟು ಅಧಿಕಾರ ಕೊಟ್ಟಿದೆ. ಈ ಅಪವಿತ್ರ ಮೈತ್ರಿಯಿಂದ ಈಗಾಗಲೇ ಅವರಲ್ಲಿ ಕಚ್ಚಾಟಗಳು ಪ್ರಾರಂಭವಾಗಿದೆ. ಇದು ಪತನದ ಸಂಕೇತ ಎಂದರು.

ನಾನು ಇಂದು ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಇರಬೇಕಾಗಿತ್ತು. ಆದರೆ ದುರ್ದೈವ, ವಿಪಕ್ಷ ನಾಯಕನಾಗಿ ನಿಮ್ಮ
ಮುಂದೆ ನಿಂತಿದ್ದೇನೆ. ನಾನು ಅಧಿ ಕಾರಕ್ಕಾಗಿ ಆಸೆ ಪಡುವುದಿಲ್ಲ. ವಿಪಕ್ಷದಲ್ಲಿ ಕುಳಿತುಕೊಳ್ಳಲು ನನಗೆ ಸಂಕೋಚವೂ ಇಲ್ಲ. ಜನಪರ, ರೈತಪರ, ಹಿಂದುಳಿದವರ ಪರ ಹೋರಾಟ ಮಾಡುವುದೇ ನನ್ನ ಗುರಿ. ನನ್ನನ್ನು ಕಳೆದ ನಲವತ್ತೈದು
ವರ್ಷಗಳಲ್ಲಿ 9 ಬಾರಿ ಶಾಸಕನಾಗಿ, ಸಂಸದನಾಗಿ ಆಯ್ಕೆ ಮಾಡಿ ಕಳುಹಿಸಿದ ಕೀರ್ತಿ ಶಿಕಾರಿಪುರ ಮತದಾರರು ನೀವು ಶ್ರೀಸಾಮಾನ್ಯ ರೈತನ ಮಗನನ್ನು ಮುಖ್ಯಮಂತ್ರಿ ಮಾಡಿದ ಕೀರ್ತಿ ನಿಮ್ಮದು. ನಿಮ್ಮ ಅಭಿಮಾನವನ್ನು ವರ್ಣಿಸಲು ನನಗೆ ಶಬ್ದಗಳೆ ಸಿಗುತ್ತಿಲ್ಲ ಎಂದರು.

ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇ¤ನೆ ಎಂದಿದ್ದ ಕುಮಾರಸ್ವಾಮಿಯವರು ಈಗ
ಹದಿನೈದು ದಿನ ಕಾಲವಕಾಶ ಕೇಳಿದ್ದಾರೆ. ಅದು ಕೂಡ ಸಹಕಾರಿ ಸಂಘಗಳ ಸಾಲ ಮಾತ್ರ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ ಮಾಡಿರುವ ಸಾಲ ಮನ್ನಾದ ಬಾಕಿ 3500 ಕೊಟಿ ರೂ. ಇನ್ನು ತುಂಬಲಾಗಿಲ್ಲ. ಇವರ ಆಟವನ್ನು ಜನ ಗಮನಿಸುತ್ತಿದ್ದಾರೆ. ನಾನು ಹದಿನೈದು ದಿನದವರೆಗೆ ಏನೂ ಮಾತನಾಡುವುದಿಲ್ಲ. ನಂತರ ನಮ್ಮ ಜನಪರ ಹೋರಾಟ ಆರಂಭಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ವಿಧಾನ ಪರಿಷತ್‌ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಎಲ್ಲ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ವಿಧಾನ
ಪರಿಷತ್‌ನಲ್ಲಿ ಆಯೂನೂರು ಮಂಜುನಾಥರವರಂತಹ ಹೋರಾಟಗಾರ, ಮಾತುಗಾರ ಮತ್ತು ಗಣೇಶ್‌ ಕಾರ್ಣಿಕ್‌
ಅವರಂತಹ ಪ್ರಭುದ್ದರು ಇರಬೇಕಾದರೆ ನೀವು ಅವರನ್ನು ಬಹುಮತದಿಂದ ಆರಿಸಿ ಕಳುಹಿಸಬೇಕು ಎಂದು ಮನವಿ
ಮಾಡಿದರು. ಮಾಜಿ ಶಾಸಕ ಬಿ.ವೈ.ರಾಘವೇಂದ್ರ ಮಾತನಾಡಿ, ಶಿಕಾರಿಪುರ ತಾಲೂಕಿನ ಜನತೆಯ ಆಶೀರ್ವಾದ ನಮ್ಮ ಕುಟುಂಬದ ಮೇಲಿದೆ. ಜನ ಕಳೆದ 35 ವರ್ಷಗಳಿಂದ ನಮ್ಮ ಮೇಲೆ ಇಟ್ಟಿರುವ ಅಭಿಮಾನಕ್ಕೆ ನಾವು ಯಾವತ್ತು ಋಣಿಯಾಗಿದ್ದೇವೆ. ಇವತ್ತು ಹಲವು ನಾಯಕರ ಕುತಂತ್ರದಿಂದ ನಮಗೆ ಅಧಿಕಾರ ಇಲ್ಲದಿರಬಹುದು. ಆದರೆ ನಾವು ಚುನಾವಣಾ ಪೂರ್ವ ಆಶ್ವಾಸನೆ ನೀಡಿದಂತೆ ತಾಲೂಕಿನ ಶಾಶ್ವತ ನೀರಾವರಿ ಯೋಜನೆ, ರೈಲ್ವೆ ಯೋಜನೆ, ಉದ್ಯೋಗ ಭರವಸೆ ಮುಂತಾದವುಗಳನ್ನು ಈಡೆರಿಸಲು ನಾವು ಬದ್ಧರಾಗಿದ್ದೇವೆ ಎಂದರು.

Advertisement

ಇದೇ ಸಂದರ್ಭದಲ್ಲಿ ಪುರಸಭೆ, ತಾಪಂ ಮುಂತಾದ ಸಂಘ-ಸಂಸ್ಥೆಗಳಿಂದ ಬಿ.ಎಸ್‌.ಯಡಿಯೂರಪ್ಪ ಅವರನ್ನು
ಸನ್ಮಾನಿಸಲಾಯಿತು. ಶಾಸಕರಾದ ಕುಮಾರ್‌ ಬಂಗಾರಪ್ಪ , ಪದ್ಮನಾಭಟ್‌, ಆಯನೂರು ಮಂಜುನಾಥ್‌, ಕೆ.
ರೇವಣಪ್ಪ, ಅಗಡಿ ಅಶೋಕ, ಸಿದ್ದಲಿಂಗಪ್ಪ , ಟಿ.ಎಸ್‌. ಮೋಹನ, ಎಂ.ಬಿ.ಚನ್ನವೀರಪ್ಪ, ಅಂಬಾರಗೊಪ್ಪ ಶೇಖರಪ್ಪ
ಇನ್ನಿತರರಿದ್ದರು.

ಪದವೀಧರ-ನೌಕರರ ಹಿತಕಾಪಾಡುವೆ: ಆಯನೂರು
ರಿಪ್ಪನ್‌ಪೇಟೆ:
ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ಮತ್ತು ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್‌ ಭರವಸೆ ನೀಡಿದರು. ಪಟ್ಟಣದ ಬಿಎಸ್‌ಬಿ ಕಲ್ಯಾಣ ಮಂದಿರದಲ್ಲಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಬೆಂಬಲಿಸಿದರೆ, ಸರ್ಕಾರಿ ನೌಕರರ ವೇತನ ತಾರತಮ್ಯ ನಿವಾರಣೆಗೆ ಶ್ರಮಿಸುತ್ತೇನೆ ಎಂದರು.

ಎ.ವಿ.ಮಲ್ಲಿಕಾರ್ಜುನ, ಕೃಷ್ಣಮೂರ್ತಿ, ಎ.ಟಿ. ನಾಗರತ್ನಮ್ಮ, ಆರ್‌.ಟಿ.ಗೋಪಾಲ್‌, ತ.ಮ.ನರಸಿಂಹ, ದೇವೇಂದ್ರಗೌಡ, ಶ್ರೀನಾಥ್‌, ಎಂ.ಬಿ.ಮಂಜುನಾಥ್‌, ನಾಗರತ್ನ ದೇವರಾಜ, ಪದ್ಮಾ ಸುರೇಶ ಇನ್ನಿತರರಿದ್ದರು. ದೂರು ದಾಖಲು: ಜಿಎಸ್‌ಬಿ ಕಲ್ಯಾಣ ಮಂದಿರದಲ್ಲಿ ನಡೆದ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರ ಸ್ನೇಹಮಿಲನ ಕಾರ್ಯಕ್ರಮಕ್ಕೆ ಅನುಮತಿ ಪಡೆಯದಿರುವುದಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಯನೂರು ಮಂಜುನಾಥ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ಹೊಸನಗರ ತಹಶೀಲ್ದಾರ್‌ ಚಂದ್ರಶೇಖರನಾಯ್ಕ ದೂರಿನ ಮೇರೆಗೆ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಧಿಕಾರಕ್ಕಾಗಿ ಮಧ್ಯರಾತ್ರಿಯಲ್ಲಿ ಸುಪ್ರೀಂ ಕೋರ್ಟ್‌ ಬಾಗಿಲು ತಟ್ಟಿದ ಉದಾಹರಣೆಗಳು ಇಲ್ಲ. ವಿಧಾನಸಭೆಯಲ್ಲಿ ವಿಶ್ವಾಸ ಮತ ನಮಗೆ ಸಿಗದೆ ಇರಬಹುದು. ಆದರೆ ಕರ್ನಾಟಕ ರಾಜ್ಯದ ಜನ ಬಿಜೆಪಿಗೆ ಅಧಿಕಾರ ನೀಡಬೇಕೆಂದು ಆರಿಸಿ ಕಳುಹಿಸಿದ್ದರು. 39 ಸ್ಥಾನಗಳಲ್ಲಿ ನಾವು ಕೇವಲ ಕಡಿಮೆ ಅಂತರದಿಂದ ಸೋತಿದ್ದೇವೆ. ಈ ಸೋಲನ್ನು ನಾವು ಸವಾಲಾಗಿ ಸ್ವೀಕರಿಸುತ್ತೇವೆ. 
 ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next