Advertisement

ಲೋಕಸಭೆ ಚುನಾವಣೆ ಬಳಿಕ ಮೈತ್ರಿ ಸರ್ಕಾರ ಪತನ

02:47 PM Aug 21, 2018 | |

ವಿಜಯಪುರ: ಆದರೆ ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನಗೊಳ್ಳಲಿದೆ ಎಂಬುದು ಸತ್ಯ. ಸರ್ಕಾರದ ಪತನದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಪುನರುತ್ಛರಿಸಿದ್ದಾರೆ.

Advertisement

ಗೂಳಪ್ಪ ಶಟಗಾರ ಅವರು ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಮೇಲ್ಮನೆ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಮೇಲ್ಮನೆ ಉಪ ಚುನಾವಣೆ ಬರುವ ಲೋಕಸಭೆ ಚುನಾವಣೆಯ ದಿಕ್ಸೂಚಿಯಲ್ಲ. ಆದರೆ ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ ಖಚಿತವಾಗಲಿದೆ. ಆಗ ನಾನು ಯಾವ ಜ್ಯೋತಿಷಿ ಎಂಬುದು ಕೆಲವರಿಗೆ ಸ್ಪಷ್ಟವಾಗಲಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲರ ಹೇಳಿಕೆಗೆ ಕುಟುಕಿದರು. 

ರಾಜ್ಯದಲ್ಲಿ ಸರ್ಕಾರ ಅಸ್ಥಿರತೆಯಿಂದ ಕೂಡಿರುವ ಕಾರಣವೇ ಆಷಾಢದ ನಂತರ ಸಂಪುಟ ವಿಸ್ತರಣೆ ಎಂದಿದ್ದ ಆಡಳಿತ ಪಕ್ಷಗಳಿಗೆ ಶ್ರಾವಣ ಎರಡು ಸೋಮವಾರ ಕಳೆದರೂ ಸಚಿವ ಸಂಪುಟದ ವಿಸ್ತರಣೆ ಸಾಧ್ಯವಾಗದ ಸ್ಥಿತಿಯಲ್ಲಿರುವುದೇ ಸರ್ಕಾರ ಅತಂತ್ರ ಸ್ಥಿತಿಗೆ ನಿದರ್ಶನ ಎಂದರು.

ನಾನು ತೆರುವು ಮಾಡಿರುವ ಮೇಲ್ಮನೆ ಸ್ಥಳೀಯ ಸಂಸ್ಥೆಯ ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೂಳಪ್ಪ ಶಟಗಾರ ಗೆಲುವು ನಿಶ್ಚಿತ ಹಾಗೂ ದಾಖಲೆ ಮತಗಳೊದಿಗೆ ವಿಜಯ ಸಾಧಿಸಲಿದ್ದಾರೆ. ಮೇಲ್ಮನೆ ಉಪ ಚುನಾವಣೆ ಅವಳಿ ಜಿಲ್ಲೆಗಳ ಸಂಸದರ ಪ್ರತಿಷ್ಠೆಯ ಚುನಾವಣೆಯೆ ಹೊರತು, ನನ್ನ ಪ್ರತಿಷ್ಠೆಯಲ್ಲ. ನಾನು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿರುವ ಸಾಮಾನ್ಯ ಕಾರ್ಯಕರ್ತ ಮಾತ್ರ ಎಂದರು.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುಮತ ಇದ್ದರೂ ಅಧಿಕಾರಕ್ಕೆ ಬರಲಾಗಲಿಲ್ಲ. ಇದಕ್ಕೆ ಕಾರಣವಾದ ಪಕ್ಷದ ವಿರೋಧ ವ್ಯಕ್ತಿಗಳ ವಿರುದ್ಧ ಪಕ್ಷ ಹೈಕಮಾಂಡ್‌ಗೆ ಲಿಖೀತ ರೂಪದಲ್ಲಿ ಸಮಗ್ರ ಮಾಹಿತ ನೀಡಿದ್ದೇನೆ. ತುರ್ತು ಕ್ರಮವಾಗದಿದ್ದರೂ ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಿ. ನನಗೆ ಮೋಸ ಮಾಡಿದರನ್ನು ನಾನು ಸುಮ್ಮನೇ ಬಿಡುವುದಿಲ್ಲ ಎಂದು ಗುಡುಗಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next