Advertisement
ಅರಣ್ಯ ಇಲಾಖೆ ಭಾನುವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ “ನೀರಿಗಾಗಿ ಅರಣ್ಯ’ ಘೋಷ ವಾಕ್ಯದಡಿ ಹಮ್ಮಿಕೊಂಡಿದ್ದ “ವನಮಹೋತ್ಸವ-2017′ ಉದ್ಘಾಟಿಸಿ ಅವರು ಮಾತನಾಡಿದರು. ಕಾಡ್ಗಿಚ್ಚು ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
Related Articles
Advertisement
ಒಟ್ಟು ಭೂಪ್ರದೇಶದ ಶೇ.33ರಷ್ಟು ಅರಣ್ಯ ಪ್ರದೇಶ ಇರಬೇಕು ಎಂಬ ನಿಯಮವಿದೆ. ಆದರೆ. ರಾಜ್ಯದಲ್ಲಿ ಶೇ.22ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಅರಣ್ಯ ಪ್ರದೇಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾಡು ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ನಿಟ್ಟಿನಲ್ಲಿ ಸರ್ಕಾರದ ಜತೆಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಶಾಲಾ ವಿದ್ಯಾರ್ಥಿಗಳು ಕೈಜೋಡಿಸಬೇಕು.
ಅರಣ್ಯ ರಕ್ಷಣೆ ಮತ್ತು ಪರಿಸರದ ಬಗ್ಗೆ ಸಮಾಜದಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕಾಗಿದೆ. ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸದರೆ ಅದು ಸಮಾಜದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಮಳೆ ಪ್ರಮಾಣ ಕಡಿಮೆ ಆಗಲಿಕ್ಕೂ ಅರಣ್ಯ ನಾಶ ಕಾರಣ. ಅರಣ್ಯ ಪ್ರದೇಶ ಹೆಚ್ಚಿರುವ ಮಲೆನಾಡು ಭಾಗದಲ್ಲೇ ಮಳೆ ಕಡಿಮೆ ಆಗುತ್ತಿದೆ. ಅರಣ್ಯ ಪ್ರದೇಶ ಹೆಚ್ಚಿಸಿದರೆ ನೀರಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹೇಳಿದರು.
ಅರಣ್ಯ ಪ್ರದೇಶ ಹೆಚ್ಚಳ: ಅರಣ್ಯ ಸಚಿವ ರಮಾನಾಥ್‌ರೈ ಮಾತನಾಡಿ, ಕಾಡಿನ ಅಂಚಿನಲ್ಲಿರುವ ಸುಮಾರು 2 ಲಕ್ಷ ಕುಟುಂಬಗಳಿಗೆ ಗ್ಯಾಸ್ ಸೌಲಭ್ಯಕಲ್ಪಿಸಿ ಉರುವಲು ಪಡೆಯಲು ಅರಣ್ಯ ಅವಲಂಬಿಸದಂತೆ ನೋಡಿಕೊಳ್ಳಲಾಗಿದೆ. ಅಲ್ಲದೆ, ಈ ವರ್ಷ ಸುಮಾರು ಅರಣ್ಯ ಉತ್ಪನ್ನಗಳಿಂದ ಸರ್ಕಾರ 780 ಕೋಟಿ ರೂ. ಲಾಭ ಗಳಿಸಿದೆ. ವನಹಮೋತ್ಸವ ಆಚರಣೆಯಿಂದ 29 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹೆಚ್ಚಳವಾಗಿದೆ. 6 ಕೋಟಿ ಗಿಡ ನೆಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ವನಮಹೋತ್ಸವದಲ್ಲಿ ನಿಲಗಿರಿ ಗಿಡ ನೆಡಲು ಅವಕಾಶವಿಲ್ಲ ಎಂದರು.
ಗಾಂಧಿನಗರ ಶಾಸಕ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸ್ಥಳೀಯ ಬಿಬಿಎಂಪಿ ಸದಸ್ಯ ಲತಾ ಕುಮಾರ್, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ. ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಮತ್ತಿತರರು ಇದ್ದರು.
ವನಮಹೋತ್ಸವಕ್ಕೆ ಜನರ “ಬರ’ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ವನಮಹೋತ್ಸವಕ್ಕೆ ಜನರ “ಬರ’ ಎದುರಾಗಿತ್ತು. ಆಯೋಜಕರು ಒಂದು ಸಾವಿರ ಕುರ್ಚಿಗಳ ವ್ಯವಸ್ಥೆ ಮಾಡಿದ್ದರೆ ಅಲ್ಲಿ ತುಂಬಿದ್ದು ಬರೀ 200 ಕುರ್ಚಿಗಳು. ಅದೂ ಶಾಲಾ ಮಕ್ಕಳಿಂದ. ವೇದಿಕೆಗೆ ಆಗಮಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ. ಇಂತಹ ಕಾರ್ಯಕ್ರಮಕ್ಕೂ ಜನ ಏಕೆ ಬಂದಿಲ್ಲ? ಜನರನ್ನು ಕರೆಸಬೇಕಲ್ವಾ ಎಂದು ಅಲ್ಲಿದ್ದ ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಅರಣ್ಯ ಸಚಿವ ರಮಾನಾಥ ರೈ, ಕೇವಲ ಶಾಲಾ ಮಕ್ಕಳು ಮಾತ್ರ ಬಂದಿದ್ದಾರೆ. ಜನರಿಗೆ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಯಾಕೆ ನೀಡಿಲ್ಲ ಎಂದು ಅಧಿಕಾರಿಗಳನ್ನು ಗದರಿದರು. ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರ ಮಾತಿಗೆ ಉತ್ತರಿಸಲಾಗದೆ ಅಧಿಕಾರಿಗಳು ತಲೆ ತಗ್ಗಿಸಿ ನಿಂತರು.