Advertisement

ಸೇತುವೆ ನಿರ್ಮಿಸಿದ ಸೇನಾ ಕಾರ್ಯಕ್ಕೆ ಸಿಎಂ ಮೆಚ್ಚುಗೆ

07:30 AM Feb 20, 2019 | Team Udayavani |

ತಿ.ನರಸಿಪುರ: ಕುಂಭಮೇಳದಲ್ಲಿ ಭಾರತೀಯ ಸೇನೆಯಿಂದ ನಿರ್ಮಿಸಿದ್ದ ತೇಲುವ ಸೇತುವೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಗಳವಾರ ಧಾರ್ಮಿಕ ಸಭೆ ಮುಗಿಸಿ, ವಾಪಾಸ ಆಗುತ್ತಿದ್ದ ಸಂರ್ಭದಲ್ಲಿ ವೇದಿಕೆಯಿಂದ ನೇರವಾಗಿ ತೇಲುವ ಸೇತುವೆ ಬಳಿಗೆ ಹೋದರು.

Advertisement

ಅಲ್ಲಿದ್ದ ಸೈನಿಕರನ್ನು ಮಾತನಾಡಿಸಿ, ತೆಲುವೆ ಸೇತುವೆ ನಿರ್ಮಿಸಿರುವ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸೈನಿಕರ ಜತೆ ಫೋಟೋ ಕೂಡ ತೆಗೆಸಿಕೊಂಡರು. ಅಗ್ನಿ ಶಾಮಕದಳದಿಂದ ನದಿಯಲ್ಲಿ ಭಕ್ತರ ರಕ್ಷಣೆಗೆ ವಿಶೇಷ ತಂಡಗಳನ್ನು ನೇಮಿಸಲಾಗಿತ್ತು. ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಅಗ್ನಿ ಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಬಂದಿದ್ದರು.  

ಇದರ ಜತೆಗೆ 125 ಸಿಬ್ಬಂದಿ, ಏಳು-ನಾಲ್ಕು ಮೋರ್ಟಾರ್‌ ಬೋಟ್‌, ಒಟ್ಟು ಏಳು ವಾಹನ, ಒಂದು ಟೋಹಿಂಗ್‌ ವೇಹಿಕಲ್, 12 ಅಡ್ವನ್ಸ್‌ ಫೋಮ್‌ ಸಿಲಿಂಡರ್‌, 100 ಲೈಫ್ ಜಾಕೆಟ್‌ ಅನ್ನು ಭದ್ರತೆಗಾಗಿ ಮುಂಚೆಯೇ ತಂದಿದ್ದರು. ಪೊಲೀಸ್‌ ಹಾಗೂ ಅಗ್ನಿಶಾಮಕ ದಳದ ಕಾರ್ಯಕ್ಕೂ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳು ಆಗಮಿಸಿದ್ದ ಸಂದರ್ಭದಲ್ಲಿ ಶಿಷ್ಟಾಚಾರ ಪಾಲನೆ ಮಾಡಿದ್ದರಿಂದ ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ವಿಳಂಬ ಆಗಿರಬಹುದು. ಸಾರ್ವಜನಿಕರನ್ನು ನಿಯಂತ್ರಿಸುವ ದೃಷ್ಟಿಯಿಂದ ಸಿಎಂ ಆಗಮನದ ಸಂದರ್ಭದಲ್ಲಿ ತೇಲುವ ಸೇತುವೆಯಲ್ಲಿ ಸಾರ್ವಜನಿಕರು ಗುಂಜಾನರಸಿಂಹ ದೇವಸ್ಥಾನದಿಂದ ತ್ರಿವೇಣಿ ಸಂಗಮದ ಕಡೆಗೆ ಹೋಗುವುದನ್ನು ತಡೆದಿದ್ದೇವು. ಆದರೆ, ಆ ಕಡೆಯಿಂದ ಸಾರ್ವಜನಿಕರು ಗುಂಜಾನರಸಿಂಹ ದೇವಸ್ಥಾನದ ಕಡೆಗೆ ಬರಲು ಯಾವುದೇ ಅಡೆತಡೆ ಇರಲಿಲ್ಲ ಎಂದು ವಿವರಿಸಿದರು.

ಪೊಲೀಸ್‌ ನಿಯೋಜನೆ: ಮೂರು ದಿನ ಕಾಲ ನಡೆದ ಕುಂಭಮೇಳದಲ್ಲಿ ಸೋಮವಾರ ಒಂದು ಬೈಕ್‌ ಕಳವು ಹೊರತುಪಡಿಸಿ ಬೇರೆ ಯಾವುದೇ ಅಪರಾಧ ಪ್ರಕರಣ ದಾಖಲಾಗಿಲ್ಲ. ಪರ್ಸ ಕಳವು ಅಥವಾ ಸರಗಳ್ಳತನ ಕುರಿತ ಒಂದೇ ಒಂದು ದೂರು ದಾಖಲಾಗಿಲ್ಲ. ಬೈಕ್‌ ಕಳವು ಸಂಬಂಧ ತಿ.ನರಸಿಪುರ  ಪೊಲೀಸ್‌ಠಾಣೆಗೆ ದೂರ ವರ್ಗಾಯಿಸಲಾಗಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದರು.

Advertisement

ಕುಂಭಮೇಳದಲ್ಲಿ ನಿರ್ಮಿಸಿದ್ದ ಪೊಲೀಸ್‌ ಸಲಹಾ ಕೇಂದ್ರದಿಂದ ಭಕ್ತರಿಗೆ ನಿರಂತರ ಸೂಚನೆ ಹಾಗೂ ಮುಂಜಾಗೃತ ಕ್ರಮದ ಬಗ್ಗೆಎಚ್ಚರಿಕೆ ನೀಡಲಾಗುತಿತ್ತು. ಅಲ್ಲದೇ ತಿರುಮಕೂಡಲು ಸುತ್ತಲೂ ಪೊಲೀಸ್‌ ನಿಯೋಜನೆ ಮಾಡಿರುವುದರಿಂದ ಯಾವುದೇ ರೀತಿಯ ಅಹಿತಕ ಘಟನೆ ನಡೆದಿಲ್ಲ ಎಂದು ಮಾಹಿತಿ ನೀಡಿದರು.

ಉಚಿತ ಆರೋಗ್ಯ ತಪಾಸಣೆ: ಕುಂಭಮೇಳ ಪ್ರಯುಕ್ತ ವೈದ್ಯಕೀಯ ಇಲಾಖೆ ಹಾಗೂ ಆಯುಷ್‌ ಇಲಾಖೆಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಸಾವಿರಾರು ಭಕ್ತರು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next