Advertisement
ನಾಡಿನ ದೊಡ್ಡ ದುರಂತ: ಇತ್ತೀಚಿಗೆ ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಕನ್ನಡ ನಾಡಿನ ಬಹುದೊಡ್ಡ ದುರಂತ. ಇದುವರೆಗೆ 2 ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆ ಮುಚ್ಚಲಾಗಿದೆ. ನಮ್ಮ ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಿ ಅನ್ಯ ರಾಜ್ಯದಲ್ಲಿ ತೆರೆಯಲು ಸಾಧ್ಯವೆ? ಶಾಲೆಗಳಲ್ಲಿ ಲೋಪವಿದ್ದರೆ, ಅದನ್ನು ಸರಿಪಡಿಸಬೇಕೆ ಹೊರತು ಮುಚ್ಚುವುದು ಸರಿಯಲ್ಲ. ಇದೇ ರೀತಿ ಮುಂದುವರಿದರೆ ಕನ್ನಡಿಗರು ಬದುಕಿದ್ದು, ಸತ್ತಂತೆ ಎಂದು ಬೇಸರ ವ್ಯಕ್ತಪಡಿಸಿದರು.
Related Articles
Advertisement
ಸಮಾಜ ಸವಕ ಮೃತ್ಯುಂಜಯ ಬಾಬು ಪಾಟೀಲ, ಬೆಳಗಾವಿ ಅಳಗವಾಡಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುವರ್ಣ ರಮೇಶ್ ಕೊಳವಿ, ಸಾಹಿತಿ ಡಾ.ಎಸ್.ಪುಟ್ಟಪ್ಪ ಮುಡಿಗುಂಡ, ರಮ್ಯಭೂಮಿ, ಸೀತಾರಾಮ ಕಣೇಕಲ್, ಎನ್.ಶಂಕರರಾವ್, ಕವಿ ತು.ಮ.ಬಸವರಾಜು, ಹವ್ಯಾಸಿ ನಟ ಎಸ್.ಪ್ರಭಾಕರ್, ಬಹುಮುಖ ಪ್ರತಿಭೆಗಳಾದ ಅನನ್ಯ, ಅಮನ್ ಕರ್ಕೆರಾ ಮಂಗಳೂರು, ಸಮಾಜ ಸೇವಕ ಚರಣ್‌ಶೆಟ್ಟಿ ಸಾಹಿತ್ಯ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೂರು ಕೃತಿ ಬಿಡುಗಡೆ: ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅವರು ಡಾ.ಭೇರ್ಯ ರಾಮಕುಮಾರ್ ಸಂಪಾದಕತ್ವದ “ಕಾವ್ಯ ದಸರಾ’ ಕೃತಿಯನ್ನು ಹಾಗೂ ಸಾಹಿತಿ ಸಿ.ಪಿ.ಕೆ ಅವರು ಡಾ.ಜೆ.ಲೋಹಿತ್ ಅವರ “ವ್ಯಕ್ತಿತ್ವ ವಿಕಸದರ್ಶನ’ ಕೃತಿಯನ್ನು, ಸಮಾಜ ಸೇವಕ ಡಾ.ಕೆ.ರಘುರಾಂ ಅವರು ಬಿ.ಬಿ.ಲಕ್ಷ್ಮೀಗೌಡ ಅವರ “ಸುತ್ತ-ಮುತ್ತ-2′ ಕೃತಿ ಬಿಡುಗಡೆಗೊಳಿಸಿದರು.
ದಸರಾ ಹಾಗೂ ರಾಜ್ಯೋತ್ಸವ ನೆನಪಿನ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಕವಿ ಬಂಡಿಹೊಳೆ ಮಂಜುನಾಥ್ ಉದ್ಘಾಟಿಸಿದರು. ಕವಯಿತ್ರಿ ಶಾಂತಾ ಕುಂಟನಿ ಅಧ್ಯಕ್ಷತೆವಹಿಸಿದ್ದರು. ಕವಿಗಳಾದ ಎನ್.ವಿ.ರಮೇಶ್, ರಾಧಾಕೃಷ್ಣ, ಗಂಗಾಚಾರಿ, ಹೆಗ್ಗಂದೂರು ಪ್ರಭಾಕರ, ವೈ.ವಿ.ಯಶೋಧಾ ರಾಮಕೃಷ್ಣ, ಸೀತಾರಾಮ ಕಣೇಕಲ್, ಸೌಗಂಧಿಕಾ ಜೋಯಿಸ್, ಜಯಶ್ರೀ ಡಾ.ಕೃಷ್ಣ, ಜಿ.ಟಿ.ಸಂದೇಶ್, ವಿ.ವೆಂಕಟಯ್ಯ, ಡಾ.ಭೇರ್ಯ ರಾಮಕುಮಾರ್, ಸಾಹಿತಿ ಡಾ.ಪುಷ್ಪ ಅಯ್ಯಂಗಾರ್, ಪ್ರೊ.ಬಸವರಾಜು ಟಿ.ಬೆಳಗಟ್ಟಿ, ಚಿಂತಕ ಎಚ್.ಬಿ.ರಾಜಶೇಖರ್, ಎಚ್.ಆನಂದಕುಮಾರ್, ಡಾ.ರಾಜಗೋಪಾಲ್ ಭಟ್, ಎಂ.ಸಿ.ರಾಜು, ಅರ್ಜುನಹಳ್ಳಿ ರಾಮಪ್ರಸಾದ್ ಉಪಸ್ಥಿತರಿದ್ದರು.
ದಸರಾ ಹಾಗೂ ಕನ್ನಡ ರಾಜ್ಯೋತ್ಸವ ಕಾವ್ಯ ಪುರಸ್ಕೃತರು: ಹೊರನಾಡ ಕನ್ನಡಿಗರ ವಿಭಾಗ: ಸೀಮಾ ಕುಲಕರ್ಣಿ(ಮಲೇಶಿಯಾ), ಡಾ.ಆನಂದ ದೇಶಪಾಂಡೆ(ಲಂಡನ್), ಕಿಶೋರ್ ಎಕ್ಕಾರ್(ದುಬೈ), ಶಾರದಾ ವಿ.ಅಂಚನಾ(ಮುಂಬೈ), ಪ್ರಭಾಕರ ಶೆಟ್ಟಿ ಥಾಣೆ(ಮುಂಬೈ), ಕವಯತ್ರಿಯರ ವಿಭಾಗ: ಅಕ್ಷಯ ಆ ಶೆಟ್ಟಿ(ಮಂಗಳೂರು), ಶಾಂತ ಕೆ.ಹೊಂಬಳ(ಧಾರವಾಡ), ಭಾಗ್ಯರೇಖಾ ದೇಶಪಾಂಡೆ(ಹುಬ್ಬಳ್ಳಿ), ಅರ್ಚನ ಎಚ್(ಬೆಂಗಳೂರು), ಎನ್.ಆರ್. ರೂಪಶ್ರೀ(ಮೈಸೂರು).
ಹಿರಿಯ ಕವಿಗಳ ವಿಭಾಗ: ವೈ.ಎಂ.ರಘುನಂದನ್(ಮೈಸೂರು), ಕವಿಗಳ ವಿಭಾಗ: ನಾಗರಾಜು ಹಂಪಸಾಗರ(ಬೆಳಗಾವಿ), ಚಿದಾನಂದ ಹ.ಭಜಂತ್ರಿ(ಧಾರವಾಡ), ಡಾ.ಸೋಮಲಿಂಗಪ್ಪ ರಾ.ಚಿಕ್ಕಳ್ಳನವರ (ಹಾವೇರಿ), ಕೆ.ವಿ.ಲಕ್ಷ್ಮಣಮೂರ್ತಿ(ಬೆಂಗಳೂರು), ಎಂ.ಡಿ.ಅಯ್ಯಪ್ಪ(ಮಂಡ್ಯ), ವಿಶೇಷ ಚೇತನ ಕವಿಗಳ ವಿಭಾಗ: ಅನುಸೂರ ಎಂ.ಪಿ.(ದಾವಣೆಗೆರೆ), ಹಣಮಂತರವ್ ಘಂಟೇಕರ್(ಗುಲ್ಬರ್ಗ) ಇವರನ್ನು ಗೌರವಿಸಲಾಯಿತು.