Advertisement

ರಂಗ ತರಬೇತಿ ಸಮಾರೋಪ

02:23 PM Feb 13, 2017 | Team Udayavani |

ಧಾರವಾಡ: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಮಾಜದತ್ತ ಬಹಿಮುಖವಾಗಿ ಕೆಲಸ ಮಾಡಲು ರಂಗಭೂಮಿ ನೆರವಾಗುತ್ತದೆ ಎಂದು ಕವಿವಿ ಗಾಂಧಿಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ಶಿವಾನಂದ ಶೆಟ್ಟರ ಹೇಳಿದರು. 

Advertisement

ನಗರದ ಕವಿಸಂನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರುಹಾಗೂ ಬಸವರೆಡ್ಡಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬಸವರಡ್ಡಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಬಸವರೆಡ್ಡಿ ಮಾತನಾಡಿ, ರಂಗಭೂಮಿಯು ಜಾನಪದ ಕಲೆಯ ವಿವಿಧ ಮಜಲುಗಳನ್ನು ಮೈಗೂಡಿಸಿಕೊಂಡು ಸರ್ವ ಶಕ್ತಿಯನ್ನು ಬೆಳೆಸಲು ಸಹಾಯಕವಾಗುತ್ತದೆ ಎಂದರು.

ಸಾಹಿತಿ ಮೋಹನ ನಾಗಮ್ಮನವರ ಮಾತನಾಡಿ, ಜಾತಿ-ಮತ, ಪಂಥವನ್ನು ಮೀರಿ ರಂಗಭೂಮಿಯು ತನ್ನದೇ ಆದ ಪಾವಿತ್ರತೆ ಕಾಯ್ದುಕೊಂಡು ಬಂದಿದೆ ಎಂದರು. ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಮಹಾದೇವ ದೊಡಮನಿ ಮಾತನಾಡಿ, ಉತ್ತರ ಕರ್ನಾಟಕದ ಕಲಾವಿದರಿಗೆ ಸಮರ್ಪಕ ನ್ಯಾಯ ಒದಗಿಸುವ ಜವಾಬ್ದಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಕಾಡೆಮಿಗಳದ್ದಾಗಿದೆ ಎಂದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ ಮಾತನಾಡಿದರು. ನಾಟಕ ಅಕಾಡೆಮಿ ಸದಸ್ಯ ಕೆ.ಜಗುಚಂದ್ರ ಅಧ್ಯಕ್ಷತೆ ವಹಿಸಿದ್ದರು. ನಂತರ ರಂಗ ತರಬೇತಿ ಶಿಬಿರದಲ್ಲಿ ನಿರ್ಮಾಣವಾದ ಡಾ| ಚಂದ್ರಶೇಖರ ಕಂಬಾರ ರಚಿತ, ಅಮೃತಾ ತಳವಾರ ನಿರ್ದೇಶನದ “ನಾಯಿ ಕಥೆ’ ನಾಟಕ ಪ್ರದರ್ಶನಗೊಂಡಿತು. ಎನ್‌.ಎಂ. ಗಡೆಣ್ಣವರ ಸ್ವಾಗತಿಸಿದರು. ಎಫ್‌.ಬಿ. ಕಣವಿ ನಿರೂಪಿಸಿದರು. ಹೇಮಂತ ಲಮಾಣಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next