Advertisement
ಹಲಸೂರಿನ ಜೋಗುಪಾಳ್ಯ ನಿವಾಸಿ ಮುರಳಿ ಅಲಿಯಾಸ್ ಮುರಳೀಧರನ್ (25) ಗುಂಡೇಟು ತಿಂದು ಸೆರೆ ಸಿಕ್ಕ ಆರೋಪಿ. ಈತನ ಎಡಗಾಲಿಗೆ ಗುಂಡೇಟು ಬಿದ್ದಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾರ್ಯಾಚರಣೆ ವೇಳೆ ಆರೋಪಿಯಿಂದ ಹಲ್ಲೆಗೊಳಗಾದ ಹೆಡ್ ಕಾನ್‌ಸ್ಟೆಬಲ್ ವಿಜಯ್‌ಕುಮಾರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Related Articles
Advertisement
ಎಡಗಾಲಿಗೆ ಗುಂಡೇಟು: ಆರೋಪಿಯ ಬೆನ್ನು ಬಿದ್ದ ಇನ್‌ಸ್ಪೆಕ್ಟರ್ ಜಿ.ಪಿ.ರಮೇಶ್ ನೇತೃತ್ವದ ತಂಡ, ಆರೋಪಿ ಮುರಳಿ ಬುಧವಾರ ತಡರಾತ್ರಿ ನಗರಕ್ಕೆ ಬರುವ ಖಚಿತ ಮಾಹಿತಿ ಸಂಗ್ರಹಿಸಿತ್ತು. ಹೀಗಾಗಿ ಹಳೇ ಬೈಯಪ್ಪನಹಳ್ಳಿ ರೈಲ್ವೆ ಗೇಟ್‌ನಿಂದ ಕತ್ತಾಳಿಪಾಳ್ಯ ಮುಖ್ಯರಸ್ತೆವರೆಗೂ ನಾಕಾಬಂದಿ ಹಾಕಿ ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗಿತ್ತು.
ಇದೇ ವೇಳೆ ಗುರುವಾರ ನಸುಕಿನ 3.30ರ ಸುಮಾರಿಗೆ ಕಳವು ಮಾಡಿದ್ದ ದ್ವಿಚಕ್ರವಾಹನವೊಂದರಲ್ಲಿ ಬರುತ್ತಿದ್ದ ಆರೋಪಿ ಮುರಳಿ, ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಮಾರ್ಗಮಧ್ಯೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಕೂಡಲೇ ಹೆಡ್ ಕಾನ್‌ಸ್ಟೆಬಲ್ ವಿಜಯ್ ಕುಮಾರ್ ಆರೋಪಿಯನ್ನು ಹಿಡಿಯಲು ಮುಂದಾಗಿದ್ದಾರೆ.
ಈ ವೇಳೆ ಆರೋಪಿ ತನ್ನ ಬಳಿಯಿದ್ದ ಡ್ರ್ಯಾಗರ್‌ನಿಂದ ವಿಜಯ್‌ಕುಮಾರ್ ಕೈಗೆ ಹಲ್ಲೆ ನಡೆಸಿದ್ದಾನೆ. ಆಗ ಇನ್‌ಸ್ಪೆಕ್ಟರ್ ಆರೋಪಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ಆರೋಪಿ ಮತ್ತೂಮ್ಮೆ ಹಲ್ಲೆಗೆ ಮುಂದಾದಾಗ, ಆತ್ಮರಕ್ಷಣೆಗಾಗಿ ತಮ್ಮ ಪಿಸ್ತೂಲ್‌ನಿಂದ ಆರೋಪಿಯ ಎಡಗಾಲಿನ ಮಂಡಿಗೆ ಗುಂಡು ಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ವರ್ಷಗಳಿಂದ ಕೃತ್ಯ: ಬಂಧಿತ ಮುರಳಿ ಕಳೆದ 2-3 ವರ್ಷಗಳಿಂದ ಅಪರಾಧ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದು, ತನ್ನದೆ ಆದ ತಂಡ ಕಟ್ಟಿಕೊಂಡು ತಡರಾತ್ರಿ ಒಂಟಿಯಾಗಿ ಓಡಾಡುವ ಸಾರ್ವಜನಿಕರು, ವಾಹನ ಸವಾರರು, ಕ್ಯಾಬ್ ಚಾಲಕರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದ.
ಒಂದು ವೇಳೆ ವಿರೋಧ ವ್ಯಕ್ತಪಡಿಸಿದರೆ, ನಿರ್ದಾಕ್ಷಿಣ್ಯವಾಗಿ ಹಲ್ಲೆ ಮಾಡುತ್ತಿದ್ದª. ಪ್ರಾಥಮಿಕ ಮಾಹಿತಿ ಪ್ರಕಾರ ಆರೋಪಿಯ ವಿರುದ್ಧ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಸುಮಾರು 30 ದರೋಡೆ ಹಾಗೂ ಇತರೆ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.
ಸಹಚರನ ಮನೆಗೆ ಹೋಗುತ್ತಿದ್ದ: ನಗರದ ಹೊರವಲಯಗಳಲ್ಲಿ ತಲೆಮರೆಸಿಕೊಂಡಿದ್ದ ಮುರಳಿ, ಗುರುವಾರ ನಸುಕಿನ 3.30ರ ಸುಮಾರಿಗೆ ಬೈಯಪ್ಪನಹಳ್ಳಿಯಲ್ಲಿರುವ ತನ್ನ ಸಹಚರ ವಜ್ರೆàಶ್ ಮನೆಗೆ ಹೋಗುತ್ತಿದ್ದ. ಈ ಮಾಹಿತಿಯನ್ನು ವಜ್ರೆàಶ್ ಮೂಲಕವೇ ಸಂಗ್ರಹಿಸಿದ್ದ ಪೊಲೀಸರು, ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ಅಪ್ರಾಪ್ತರ ತಂಡ: ಆರೋಪಿ ಆಗಾಗ ತನ್ನ ತಂಡದ ಸದಸ್ಯರನ್ನು ಬದಲಿಸುತ್ತಿದ್ದು, ಅಪ್ರಾಪ್ತ ಯುವಕರನ್ನೇ ಆಯ್ಕೆ ಮಾಡಿಕೊಂಡು ತಂಡ ಕಟ್ಟಿಕೊಳ್ಳುತ್ತಿದ್ದ. ಬಳಿಕ ಸಾರ್ವಜನಿಕರನ್ನು ದರೋಡೆ ಮಾಡಿ, ಬಂದ ಹಣದಲ್ಲಿ ಆ ಯುವಕರ ಜತೆ ಮೋಜು-ಮಸ್ತಿ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.