Advertisement

ಸೂಕ್ತ ಪರಿಹಾರಕ್ಕೆ ಸಿಐಟಿಯು ಆಗ್ರಹ

05:17 PM May 22, 2021 | Team Udayavani |

ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ನಿಯಂತ್ರಿಸುವಲ್ಲಿಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ ಎಂದುಆರೋಪಿಸಿ ಸಿಐಟಿಯು, ಕೆಪಿಆರ್‌ಎಸ್‌,ಎಐಎಡಬ್ಲೂ ಯು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ಅದರಂತೆ ಕಾರ್ಯಕರ್ತರು ಜಿಲ್ಲೆಯಲ್ಲೂ ಭಿತ್ತಿಪತ್ರ ಹಿಡಿದು ಆಕ್ರೋಶ ಹೊರಹಾಕಿದರು.

Advertisement

ನಗರದ ಸಿಐಟಿಯು ಕಚೇರಿ ಮುಂದೆ ಪ್ರತಿಭಟನೆನಡೆಸಿದ ಕಾರ್ಯಕರ್ತರು, ರಾಜ್ಯದಲ್ಲಿ ಕೃಷಿ ಕೂಲಿಕಾರರೂಸೇರಿ 3 ಕೋಟಿ ರೂ.ಗೂ ಹೆಚ್ಚಿನ ಅಸಂಘಟಿತಕಾರ್ಮಿಕರು ಕೆಲಸ ಇಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ.ಕಟ್ಟಡ, ವಲಸೆ ಕಾರ್ಮಿಕರು, ಖಾಸಗಿ ವಾಹನಚಾಲಕರು, ಬೀದಿ ಬದಿ ವ್ಯಾಪಾರಿಗಳು, ಮನೆಕೆಲಸದವರು, ಹಮಾಲಿಗಳು, ಬಿಸಿಯೂಟ ನೌಕರರು,ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಸಿಬ್ಬಂದಿಆದಾಯ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಂಘಟನೆ ಪದಾಧಿಕಾರಿಗಳು ಆರೋಪಿಸಿದರು.

ಕೊರೊನಾದಿಂದ ಹೂವು, ಹಣ್ಣು, ತರಕಾರಿಗೆ ಸೂಕ್ತಬೆಲೆ ಇಲ್ಲದೇ ರೈತರು ಕಷ್ಟದಲ್ಲಿದ್ದಾರೆ.ಕೃಷಿಚಟುವಟಿಕೆಗಳುಕುಂಠಿತಗೊಂಡಿವೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮವರ್ಗದ ರೈತರು ಬೆಳೆಗೆ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ.ಬೆಂಬಲ ಬೆಲೆ, ಪ್ರೋತ್ಸಾಹಧನ ಮತ್ತು ರೈತರಿಂದಖರೀದಿಸಿದ ರಾಗಿ ಹಣನೀಡಿಲ್ಲ ಎಂದು ದೂರಿದರು.ರಾಜ್ಯ ಸರ್ಕಾರ ಕೈಗೆಟುಕದ ಕೋವಿಡ್‌ ಪರಿಹಾರಘೋಷಿಸಿದೆ. ಈ ಪರಿಹಾರಕ್ಕೆ ಕಟ್ಟಡ ಕಾರ್ಮಿಕ ಕಲ್ಯಾಣಮಂಡಳಿಯಲ್ಲಿದ್ದ 494 ಕೋಟಿ ರೂ. ಬಳಸಲಾಗುತ್ತಿದೆ.

ಸರ್ಕಾರ ಅಸಲಿಗೆ ಖರ್ಚು ಮಾಡುತ್ತಿರುವುದು617.82ಕೋಟಿ ರೂ. ಮಾತ್ರ. ರಾಜ್ಯದಲ್ಲಿ3 ಕೋಟಿ ಅಸಂಘಟಿತಕಾರ್ಮಿಕರಿದ್ದು, ಇಷ್ಟು ಅತ್ಯಲ್ಪ ಮೊತ್ತವನ್ನು ಕೆಲವೇಜನರಿಗೆ ಮಾತ್ರ ಕೊಡಬಹುದು ಎಂದುಪ್ರತಿಭಟನಾಕಾರರು ಆರೋಪಿಸಿದರು.ಬಹುಸಂಖ್ಯಾತ ಅಸಂಘಟಿತ ಕಾರ್ಮಿಕರಿಗೆ ಯಾವುದೇಪರಿಹಾರವೂ ಸಿಗುವುದಿಲ್ಲ, ಎಲ್ಲಾ ಅಸಂಘಟಿತರಿಗೂಸರ್ಕಾರ 10,000 ರೂ. ಪರಿಹಾರ ಮತ್ತು ತಲಾ 10 ಕೇಜಿರೇಷನ್‌ ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮುಖಂಡ ಬಸವರಾಜು, ಅಂಗನವಾಡಿ ಕಾರ್ಯಕರ್ತೆಗಾಯತ್ರಿ, ಸಹಾಯಕಿ ಶಾಂತಮ್ಮ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next