Advertisement

ಐತಿಹಾಸಿಕ ಕಾರಪುರ ವಿರಕ್ತಮಠ ಉತ್ತರಾಧಿಕಾರಿ ಆಯ್ಕೆ ಸರಿಯಲ್ಲ

06:12 PM May 10, 2021 | Team Udayavani |

ಯಳಂದೂರು: ಸಾವಿರಾರು ವರ್ಷಗಳಐತಿಹ್ಯ ಇರುವ ಪಟ್ಟಣದ ಕಾರಾಪುರವಿರಕ್ತಮಠದ ಉತ್ತರಾಧಿಕಾರಿಯನ್ನುಹಾಲಿ ಮಠಾಧೀಶರಾದ ಬಸವರಾಜಸ್ವಾಮೀಜಿ ಆಯ್ಕೆ ಮಾಡಿರುವ ಕ್ರಮಸರಿ ಇಲ್ಲ ಎಂದು ಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಪ್ರಕಣೆಯಲ್ಲಿ ಹೇಳಿಕೆನೀಡಿರುವ ಭಕ್ತರು, ಕೆಲ ದಿನಗಳ ಹಿಂದೆಕಾರಾಪುರ ವಿರಕ್ತಮಠಕ್ಕೆ ಉತ್ತರಾಧಿಕಾರಿಯಾಗಿ ಸಾಗರ್‌ ಎಂಬ ವಿದ್ಯಾರ್ಥಿಯನ್ನುನೇಮಕ ಮಾಡಲಾಗಿದೆ ಎಂದು ಮಠದಸ್ವಾಮೀಜಿ ಮಾಹಿತಿ ನೀಡಿದ್ದರು.

ಆದರೆ,ಈ ಮಠದ ಪರಂಪರೆಯಲ್ಲಿ ತಾಲೂಕಿನಪ್ರಮುಖ ಗ್ರಾಮಗಳ ಮುಖಂಡರಮಾಹಿತಿ ಹಾಗೂ ಈ ಹಿಂದಿನ ಸಂಪ್ರದಾಯಗಳನ್ನು ಮುರಿಯಲಾಗಿದೆ.ಇದು ಸಿಂಧುವಲ್ಲ. ಇದು ಕೇವಲ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಅಭಿಪ್ರಾಯವಾಗಿದೆ.

ಇದು ಗುಟ್ಟಾಗಿ ಮಾಡಿಕೊಂಡಿರುವ ತೀರ್ಮಾನವಾಗಿದೆಯೇಹೊರತು ಅಂತಿಮ ಆಯ್ಕೆಯಲ್ಲ. ಇದುಮಠದ ಪರಂಪರೆಗೆ ವಿರುದ್ಧವಾಗಿದೆಎಂದು ತಿಳಿಸಿದ್ದಾರೆ.ಮಠದ ಉತ್ತರಾಧಿಕಾರಿ ಆಯ್ಕೆಯವಿಚಾರದಲ್ಲಿ ಸಮಾಜದ ಮುಖಂಡರು,ಸುತ್ತಮುತ್ತಲಿನ ಗ್ರಾಮಗಳ ಮುಖಂಡರ ಸಮ್ಮತಿಯೊಂದಿಗೆ ತೀರ್ಮಾನವಾಗಬೇಕು.

ಇದು ಅನಾದಿ ಕಾಲದಿಂದಲೂನಡೆದುಕೊಂಡು ಬಂದಿರುವ ಸಂಪ್ರದಾಯ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಇದರ ಲಾಭ ಪಡೆದುಕೊಳ್ಳಲು ಸ್ವಾಮೀಜಿ ತೀರ್ಮಾನಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Advertisement

ಮಠದವರ್ಚಸ್ಸಿಗೆ ಧಕ್ಕೆಯಾದರೆ ಹಾಲಿ ಇರುವಶ್ರೀಗಳೇ ನೇರ ಹೊಣೆಗಾರರಾಗುತ್ತಾರೆ.ಉತ್ತರಾಧಿಕಾರಿ ವಿಚಾರವಾಗಿಮುಂದಿನ ದಿನಗಳಲ್ಲಿ ಸಭೆ ನಡೆಸಿತೀರ್ಮಾನ ಕೈಗೊಳ್ಳಲಾಗುವುದುಎಂದು ಹಳೆ ಮಠದ ಪುಟ್ಟಣ್ಣ ಸೇರಿದಂತೆಸಮಾಜ ಸೇವಕ ದುಗ್ಗಹಟ್ಟಿ ಪಿ.ವೀರಭದ್ರಪ್ಪ, ಮಲ್ಲೇಶ್‌, ನಟರಾಜು,ಆಕಾಶ್‌, ಮಹದೇವಪ್ಪ, ನಾಗರಾಜು,ಮಲ್ಲೇದೇವರು, ನಾಗಣ್ಣ, ಪುಟ್ಟಸ್ವಾಮಿ,ಅಂಬಳೆ, ಕಂದಹಳ್ಳಿ, ಕೆಸ್ತೂರು,ಬೂದಿತಿಟ್ಟು ಮೆಳ್ಳಹಳ್ಳಿ, ದುಗ್ಗಹಟ್ಟಿ,ಗುಂಬಳ್ಳಿ ಸೇರಿದಂತೆ ಹಲವು ಗ್ರಾಮಗಳಮುಖಂಡರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next