Advertisement

ವಾನಿ ವರ್ಚಸ್ವಿ ನಾಯಕ, ಕಾಶ್ಮೀರ ನಮ್ಮದು: ಷರೀಫ್

03:45 AM Jan 06, 2017 | Team Udayavani |

ಇಸ್ಲಾಮಾಬಾದ್‌: ಗಡಿಯಲ್ಲಿ ನಿರಂತರವಾಗಿ ನಡೆದ ಗುಂಡಿನ ಚಕಮಕಿ ಬಹುತೇಕ ಸ್ತಬ್ಧಗೊಂಡ ಬೆನ್ನಲ್ಲೇ ಕಾಶ್ಮೀರ ವಿವಾದವನ್ನು ಮತ್ತೆ ಕೆದಕಿ ಭಾರತದ ಸಹನೆ ಪರೀಕ್ಷಿಸುವ ಕೆಲಸವನ್ನು ಪಾಕಿಸ್ತಾನ ಮಾಡಿದೆ. ಕಾಶ್ಮೀರ ಎಂಬುದು ಪಾಕಿಸ್ತಾನದ ಅವಿಭಾಜ್ಯ ಅಂಗ ಎಂದು ಹೇಳಿಕೊಂಡಿರುವ ಪ್ರಧಾನಿ ನವಾಜ್‌ ಷರೀಫ್, ಭಾರತೀಯ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆ ಕಮಾಂಡರ್‌ ಬುರ್ಹಾನ್‌ ವಾನಿಯನ್ನು ಹುರುಪಿನ ಹಾಗೂ ವರ್ಚಸ್ವಿ ನಾಯಕ ಎಂದು ಹೊಗಳುವ ಮೂಲಕ ಭಾರತವನ್ನು ಕೆಣಕಲು ಯತ್ನಿಸಿದ್ದಾರೆ. ಕಾಶ್ಮೀರ ಕುರಿತ ಸಮಾರಂಭದಲ್ಲಿ ಗುರುವಾರ ಮಾತನಾಡಿದ ಅವರು, ಕಾಶ್ಮೀರಿ ಸೋದರರ ಹೃದಯದ ಜತೆ ಪಾಕಿಸ್ತಾನಿಗಳ ಹೃದಯ ಮಿಡಿಯುತ್ತದೆ. ಕಾಶ್ಮೀರಿಗಳಿಗೆ ಪಾಕ್‌ ನೈತಿಕ, ರಾಜಕೀಯ, ರಾಜತಾಂತ್ರಿಕ ಬೆಂಬಲವನ್ನು ನೀಡಲಿದೆ ಎಂದು ಘೋಷಿಸಿದರು.

Advertisement

ಸರ್ಜಿಕಲ್‌ ದಾಳಿ ನಡೆದಿಲ್ಲ: ಈ ನಡುವೆ, ಭಾರತ ಸರ್ಜಿಕಲ್‌ ದಾಳಿ ನಡೆಸಿಲ್ಲ ಎಂದು ಪಾಕ್‌ ನೂತನ ಸೇನಾ ಮುಖ್ಯಸ್ಥ ಜ| ಬಜ್ವಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next