Advertisement
ನಗರದ ಲಾಲ್‌ಬಾಗ್‌ನಿಂದ ಬಿಜೈ ತೆರಳುವ ರಸ್ತೆಯ ಭಾರತ್‌ಮಾಲ್ ಬಳಿಯ ತಂಗುದಾಣವೊಂದು ಅವ್ಯವಸ್ಥೆಯಿಂದ ಕೂಡಿದೆ. ಮಳೆ ಬರುವ ವೇಳೆ ಆಶ್ರಯ ಪಡೆಯಲು ಬರುವವರು ಸಂಪೂರ್ಣ ಒದ್ದೆಯಾಗುವ ಸನ್ನಿವೇಶ ಇಲ್ಲಿದೆ. ಅಸಮರ್ಪಕವಾಗಿ ತಂಗುದಾಣ ನಿರ್ಮಿಸಿದ್ದು, ಮಳೆ ಸುರಿಯುವ ವೇಳೆ ತಂಗುದಾಣದೊಳಗೆ ನೀರು ನುಗ್ಗುತ್ತಿದೆ.
Related Articles
ನಗರದ ಅನೇಕ ತಂಗುದಾಣದೊಳಗೆ ನೀರು ನುಗ್ಗುತ್ತಿದ್ದು ಪ್ರಯಾಣಿಕರು ಪರಿತಪಿಸುವಂತಾಗಿದೆ. ಬಜಾಲ್ ಸಮೀಪ ಜಿ.ಎಂ. ರೋಡ್‌ನಲ್ಲೂ ಇಂತಹದೇ ಪರಿಸ್ಥಿತಿ ಇದೆ. ಪ್ರಯಾಣಿಕ ತಂಗುದಾಣದೊಳಗೆ ಪ್ರಯಾಣಿಕರಿಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಮಳೆ ನೀರು ಸಂಪೂರ್ಣ ತಂಗುದಾಣದ ಒಳಗೆ ಬಿಳುತ್ತಿದೆ ಎಂಬುವುದು ಸಾರ್ವಜನಿಕರ ಆರೋಪ. ಇಂತಹ ಅನೇಕ ನಿಲ್ದಾಣಗಳಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.
Advertisement
ದುರಸ್ತಿಗೆ ಕ್ರಮಕೈಗೊಳ್ಳಿಭಾರೀ ಗಾಳಿ, ಮಳೆ ಬಂದ ವೇಳೆ ರಕ್ಷಣೆ ಪಡೆಯಲು ಬಸ್ ನಿಲ್ದಾಣಕ್ಕೆ ದೌಡಾಯಿಸಿದೆ. ಆದರೆ ಅಲ್ಲಿ ನೀರು ಬೀಳದ ಜಾಗವೇ ಇರಲಿಲ್ಲ. ಸ್ವಲ್ಪ ಗಾಳಿ ಬಂದಾಗ ಎಲ್ಲ ಕಡೆಗಳಿಂದ ನೀರು ಬೀಸಿ ಒದ್ದೆಯಾದೆವು. ಪಾಲಿಕೆ ಇಂತಹ ನಿಲ್ದಾಣಗಳನ್ನು ಸರಿಪಡಿಸಬೇಕು.
-ಸೌಮ್ಯಾ ಕೆ.,ನಿತ್ಯ ಪ್ರಯಾಣಿಕ