Advertisement

“ಮಹಾರಾಷ್ಟ್ರದಿಂದ ಬರುತ್ತಿರುವವರನ್ನು ನಿಯಂತ್ರಿಸುವುದೇ ಸವಾಲು’

08:15 AM Jun 09, 2020 | Lakshmi GovindaRaj |

ಹಾಸನ: ರಾಜ್ಯಕ್ಕೆ ಮಹಾರಾಷ್ಟ್ರದಿಂದ ಬರುತ್ತಿರುವವರನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದ್ದು, ಅಲ್ಲಿಂದ ಬರುವವರನ್ನು ವ್ಯವಸ್ಥಿತವಾಗಿ ಕ್ವಾರಂಟೈನ್‌ ಮಾಡಿ ರಾಜ್ಯದಲ್ಲಿ ಕೋವಿಡ್‌ 19 ನಿಯಂತ್ರಿಸಲು ಕ್ರಮ  ಕೈಗೊಳ್ಳಲಾಗುತ್ತಿದೆ. ರಾಜ್ಯದ ಜನರು ಆತಂಕಪಡಬೇಕಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ನಂತರ  ಸುದ್ದಿಗಾರರೊಂದಿಗೆ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿಯೂ ಮುಂಬೈನಿಂದ ಬಂದವರಿಂದಲೇ ಕೋವಿಡ್‌ 19 ಪ್ರಕರಣಗಳು ಹೆಚ್ಚುತ್ತಿವೆ. ಈಗ ಮಹಾರಾಷ್ಟ್ರದಿಂದ ಬರುತ್ತಿರುವವರನ್ನೂ ವ್ಯವಸ್ಥಿತವಾಗಿ ಕ್ವಾರಂಟೈನ್‌ ಮಾಡಲು  ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ರಾಜ್ಯದಲ್ಲಿ ಕೋವಿಡ್‌ 19 ಪ್ರಕರಣಗಳು ಹೆಚ್ಚಲು ಪ್ರಮುಖವಾಗಿ ಮೂರು ಕಾರಣಗಳಿವೆ.

ವಿದೇಶದಿಂದ ವಾಪಸ್‌ ಆದವರು, ತಬ್ಲೀ ಗಳು ಹಾಗೂ ಮಹಾರಾಷ್ಟ್ರ ದಿಂದ ರಾಜ್ಯಕ್ಕೆ  ವಾಪಸ್ಸಾಗುತ್ತಿರುವವರು ಕಾರಣ. ವಿದೇಶಗ ಳಿಂದ ಬಂದ 30 ಸಾವಿರ ಜನರನ್ನು ಕ್ವಾರಂಟೈನ್‌ ಮಾಡಿ ಪರೀಕ್ಷೆಗೊಳಪಡಿಸಲಾಗಿದೆ. 850 ಮಂದಿ ತಬ್ಲೀಘಿಗಳಿಗೂ ಕ್ವಾರಂಟೈನ್‌ ಮಾಡಿ ಪರೀಕ್ಷೆ ನಡೆಸಿ ಕೋವಿಡ್‌ 19 ಹರಡದಂತೆ ಕ್ರಮ  ಕೈಗೊಳ್ಳಲಾಗಿತ್ತು. ಈಗ ಮುಂಬೈ ಹಾಗೂ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಬಂದವರ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು

Advertisement

Udayavani is now on Telegram. Click here to join our channel and stay updated with the latest news.

Next