Advertisement

ಸವಾಲು ಮೆಟ್ಟಿ  ನಿಂತಾಗ ಸಾಧನೆ ಸಾಧ್ಯ: ಸ್ವಾಮೀಜಿ

05:40 PM Apr 21, 2018 | Team Udayavani |

ಹಾರೂಗೇರಿ: ಜೀವನದಲ್ಲಿ ಎದುರಾಗುವ ಪ್ರತಿ ಸವಾಲುಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಿದರೆ ಮಾತ್ರ ಬದುಕು ರಸವತ್ತಾಗಿರುತ್ತದೆ ಎಂದು ಪರಮಾನಂದವಾಡಿ ಶ್ರೀಗುರುದೇವಾಶ್ರಮದ ಡಾ| ಅಭಿನವ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.

Advertisement

ಇಲ್ಲಿನ ಎಸ್‌ಪಿಎಂ ಶಿಕ್ಷಣ (ಬಿಇಡಿ) ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಬಿಇಡಿ ಪ್ರಶಿಕ್ಷಣಾರ್ಥಿಗಳ ವಿದ್ಯಾರ್ಥಿ ಒಕ್ಕೂಟವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಜೀವನ ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಬೇಕಾದರೆ ಮಾಡುವ ಕೆಲಸ ಇಷ್ಟದಿಂದ ಕೂಡಿರಬೇಕು. ಮಾನಸಿಕ ಸಾಮರ್ಥ್ಯ ಹಾಗೂ ಸದೃಢ ಮನಸ್ಥಿತಿಯುಳ್ಳ ಮಾನವರು ನಾವಾಗಬೇಕು. ಶಿಕ್ಷಣ ತರಬೇತಿ ಜತೆಗೆ ಮನಕ್ಕೆ ತರಬೇತಿ ಪಡೆದುಕೊಂಡು ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಪರಿಪೂರ್ಣತೆಯನ್ನು ಸಾಧಿಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಎಲ್‌.ಎಸ್‌. ಧರ್ಮಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ತರಬೇತಿ ಪಡೆದು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು. ರಾಯಬಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ|ಎಲ್‌.ಬಿ. ಬನಶಂಕರಿ ಮಾತನಾಡಿ, ಗುರು, ತಾಯಿಯ ಋಣ ಶ್ರೇಷ್ಠವಾದುದು. ನಾಲ್ಕುಗೋಡೆಗಳ ವರ್ಗಕೊಣೆಯಲ್ಲಿ ಭಾರತದ ಭವಿಷ್ಯ ರೂಪುಗೊಳ್ಳುತ್ತದೆ ಎಂದರು. ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಡಾ|ಆರ್‌.ಜಿ. ವಂಟಗೂಡಿ, ಡಾ| ಬಿ.ಬಿ.ರಾಮತೀರ್ಥ, ಪ್ರೊ| ಎಂ.ಬಿ. ಪಡೇದಾರ, ಪ್ರೊ| ಎಸ್‌.ಬಿ. ಕಿಲ್ಲೇದಾರ, ಪ್ರೊ| ಎಸ್‌.ಎಸ್‌. ಹಾರೂಗೇರಿ, ಪ್ರೊ|ಎಸ್‌.ಎಂ. ಹೆಳವರ, ಪ್ರೊ| ಎಚ್‌.ಎಸ್‌. ಜೋಗನ್ನವರ, ಪ್ರೊ| ಎಸ್‌.ವಿ. ಸಂಗನಗೌಡರ, ಪ್ರೊ| ಪಿ.ಪಿ. ಸುತಾರ, ಪ್ರೊ| ಜೆ.ಎಸ್‌. ಭಂಗಿ ವೇದಿಕೆಯಲ್ಲಿದ್ದರು.  ಪ್ರೊ| ಜಿ.ಎಸ್‌. ಕಂಬಾರ ಸ್ವಾಗತಿಸಿದರು. ವಿದ್ಯಾ ಮಗದುಮ್‌ ನಿರೂಪಿಸಿದರು. ಮುರುಗೆಪ್ಪ ಕಾಪಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next