Advertisement

Wadi; ಮರದ ಆಸರೆಗೆ ನಿಂತ ಇಬ್ಬರು ಸಿಡಿಲಿಗೆ ಬಲಿ

08:02 PM May 26, 2024 | Team Udayavani |

ವಾಡಿ: ಮಳೆ ಗಾಳಿ ಗುಡುಗಿನಿಂದ ರಕ್ಷಣೆ ಪಡೆಯಲು ಮರದ ಆಸರೆ ಪಡೆದ ಇಬ್ಬರು ಬೈಕ್ ಸವಾರರು ಸಿಡಿಲಿಗೆ ಬಲಿಯಾದ ಘಟನೆ ರವಿವಾರ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

Advertisement

ವಾಡಿ ಪಟ್ಟಣದ ಹನುಮಾನ ನಗರದ ನಿವಾಸಿಯಾದ ಪ್ರಕಾಶ ಏಕನಾಥ ವಾಘಮೂರೆ (55) ಹಾಗೂ ಬಿರ್ಲಾ ಏರಿಯಾ ನಿವಾಸಿ ಸತೀಶ ಪ್ರಲ್ಹಾದ ಶೇಳಕೆ (40) ಮೃತ ದುರ್ದೈವಿಗಳು. ಯಾದಗಿರಿಯಿಂದ ವಾಡಿ ನಗರಕ್ಕೆ ಬರುತ್ತಿದ್ದ ವೇಳೆ ಕಾರ್ಮೋಡ ಕವಿದು ಭಯಂಕರ ಬಿರುಗಾಳಿ ಬೀಸಿದ ಪರಿಣಾಮ ಬೈಕ್ ಸವಾರಿ ಕಷ್ಟವಾಗಿದೆ. ಗುಡುಗು ಸಿಡಿಲು ಅಬ್ಬರಿಸಿ ಏಕಾಏಕಿ ಮಳೆ ಆರಂಭವಾಗಿದೆ. ರಕ್ಷಣೆ ಪಡೆಯಲು ಹೆದ್ದಾರಿ ಪಕ್ಕದ ಮರದ ಆಸರೆ ಪಡೆದಿದ್ದರು ಎನ್ನಲಾಗಿದೆ.

ಈ ವೇಳೆ ಸಿಡಿಲು ಬಡಿದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಡಿಲ ಹೊಡೆತಕ್ಕೆ ಮರದ ದೊಡ್ಡ ಕೊಂಬೆಗಳ ತೊಗಟೆ ಸುಲಿದಿರುವುದನ್ನು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಚಿತ್ತಾಪುರ ಸಿಪಿಐ ವಿಜಯಕುಮಾರ ಭಾವಗಿ ಹಾಗೂ ವಾಡಿ ಠಾಣೆಯ ಪಿಎಸ್ಐ ಮಂಜುನಾಥ ರೆಡ್ಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್ ಟವರ್ ರಾಡು ಬಿದ್ದು ವಿದ್ಯಾರ್ಥಿನಿಗೆ ಗಾಯ

ಜೋರಾದ ಬಿರುಗಾಳಿ ಹೊಡೆತಕ್ಕೆ ಮೊಬೈಲ್ ಟವರ್ ರಾಡು ಕಳಚಿ ಬಿದ್ದು ಕೂದಲೆಳೆ ಅಂತರದಲ್ಲಿ ವಿದ್ಯಾರ್ಥಿನಿ ಪಾರಾದ ಘಟನೆ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ರವಿವಾರ ಸಂಜೆ ಸಂಭವಿಸಿದೆ. 18 ವರ್ಷದ ಸುಮಾ ಗಾಯಗೊಂಡು ಆಸ್ಪತ್ರೆ ಸೇರಿದ ವಿದ್ಯಾರ್ಥಿನಿ.

Advertisement

ಜೋರಾಗಿ ಗಾಳಿ ಬೀಸಿದ ಪರಿಣಾಮ 180 ಅಡಿ ಎತ್ತರದ ಬಿಎಸ್ ಎನ್ ಎಲ್ ಮೊಬೈಲ್ ಟವರ್ ರಾಡು ಕಳಚಿ ಬಿದ್ದಿದೆ. ಈ ವೇಳೆ ಮನೆಯ ಅಂಗಳದಲ್ಲಿದ್ದ ವಿದ್ಯಾರ್ಥಿನಿಗೆ ಬಡೆದಿದ್ದು ಘಟನೆಯಿಂದ ಬಲಗೈ ಮತ್ತು ಎಡಗೈಗೆ ಗಂಭೀರ ಗಾಯವಾಗಿದೆ. ತಲೆಯ ಮೇಲೆ ಬಿದ್ದದ್ದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿತ್ತು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ಬಾಲಕಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next