Advertisement

ಒಬಾಮಾ ಹೇಳಿಕೆ ವಿರುದ್ಧ ಮುಗಿಬಿದ್ದ ಕೇಂದ್ರ

09:46 PM Jun 26, 2023 | Team Udayavani |

ಜಮ್ಮು/ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲಾಗುತ್ತಿಲ್ಲ ಎಂಬ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಹೇಳಿಕೆ ವಿರುದ್ಧ ಆಕ್ರೋಶ ಸೋಮವಾರ ಮುಂದುವರಿದಿದೆ. ಜಮ್ಮು ಪ್ರವಾಸದಲ್ಲಿ ಇರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರತಿಕ್ರಿಯೆ ನೀಡಿ “ಜಗತ್ತೆಲ್ಲ ಒಂದೇ ಕುಟುಂಬ ಎಂಬ ತತ್ವವನ್ನು ಭಾರತ ಪಾಲಿಸುತ್ತಿದೆ ಎಂಬ ಅಂಶವನ್ನು ಅಮೆರಿಕದ ಮಾಜಿ ಅಧ್ಯಕ್ಷರು ಮರೆಯಬಾರದು. ಇಂಥ ತತ್ವವನ್ನು ಪಾಲಿಸುತ್ತಿರುವ ಜಗತ್ತಿನ ಏಕೈಕ ದೇಶ ನಮ್ಮದು. ಅವರು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಎಷ್ಟು ಮುಸ್ಲಿಂ ದೇಶಗಳ ಮೇಲೆ ದಾಳಿ ನಡೆಸಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಲಿ” ಎಂದು ತಿರುಗೇಟು ನೀಡಿದ್ದಾರೆ.

Advertisement

ಕೇಂದ್ರ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಮಾತನಾಡಿ ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶ ಮಾತ್ರವಲ್ಲದೆ, ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ದೇಶಗಳಿಗೆ ತಾಯಿಯ ಸ್ಥಾನದಲ್ಲಿದೆ. ಆಕ್ರೋಶ ಹೊರಹಾಕಲು ಹಲವು ವ್ಯವಸ್ಥೆಗಳಿವೆ. ಆದರೆ, ಕೆಲವೊಂದು ಅಂಕಿ ಅಂಶಗಳನ್ನು ಮುಂದಿಟ್ಟಾಗ ಬಾಯಿ ಮುಚ್ಚುವ ಸ್ಥಿತಿ ಇರುತ್ತದೆ ಎಂದರು.

ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಮುಖಾ¤ರ್‌ ಅಬ್ಟಾಸ್‌ ನಖ್ವಿ ಒಬಾಮಾ ಹೇಳಿಕೆ ಟೀಕಿಸಿ, ದೇಶದಲ್ಲಿರುವ ಎಲ್ಲಾ ಸಮುದಾಯಗಳು ಅಭಿವೃದ್ಧಿ ಕಾಣುತ್ತಿವೆ. ನಮ್ಮ ದೇಶದಲ್ಲಿ ಈಗ 1984ರಲ್ಲಿ ನಡೆದ ದಂಗೆಗಳಂಥ ಪ್ರತಿಕೂಲ ಪರಿಸ್ಥಿತಿಗಳು ಉಂಟಾಗುತ್ತಿಲ್ಲ” ಎಂದು ಹೇಳಿದ್ದಾರೆ.

ಟೀಕಿಸಬಾರದಾಗಿತ್ತು:
ಒಬಾಮಾ ಹೇಳಿಕೆಗೆ ಆಕ್ಷೇಪ ಮಾಡಿರುವ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಗಳ ಆಯೋಗ (ಯುಎಸ್‌ಸಿಐಆರ್‌ಎಫ್)ದ ನಿವೃತ್ತ ಆಯುಕ್ತ ಜಾನ್‌ ಮೂರ್‌ “ಭಾರತದ ಅಭಿವೃದ್ಧಿಯ ಬಗ್ಗೆ ಅವರು ಮಾತನಾಡಬೇಕಾಗಿತ್ತು. ಮಾನವತೆಯ ಇತಿಹಾಸದಲ್ಲಿಯೇ ಭಾರತದ ಅತ್ಯಂತ ವೈವಿಧ್ಯತೆಯನ್ನು ಹೊಂದಿರುವ ರಾಷ್ಟ್ರ. ಅದುವೇ ಅದರ ಶಕ್ತಿ’ ಎಂದು ಬಣ್ಣಿಸಿದ್ದಾರೆ.

ಒಬಾಮಾ ಹೇಳಿದ್ದೇನು?
ಸಿಎನ್‌ಎನ್‌ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ “ಭಾರತದ ಪ್ರಧಾನಿ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರ ಹಕ್ಕುಗಳ ರಕ್ಷಣೆಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಬೈಡೆನ್‌ ಸರ್ಕಾರ ಪ್ರಸ್ತಾಪಿಸಬೇಕು. ಅಲ್ಪಸಂಖ್ಯಾತರ ರಕ್ಷಣೆಗೆ ಭಾರತ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳನ್ನು ಎದುರಿಸಬೇಕಾಗುತ್ತದೆ” ಎಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next