Advertisement
ಕೇಂದ್ರ-ರಾಜ್ಯದ ನಡುವಿನ ಗೊಂದಲ ದಿಂದಾಗಿ 3 ವರ್ಷ ಹಿಂದೆಯೇ ಅರ್ಜಿ ಸಲ್ಲಿಸಿ ಕಾಯುತ್ತಿರುವವರು ಈಗ ಸರಕಾರದ ಕಡೆಗೆ ಮುಖಮಾಡಿ ಕೂರುವಂತಾಗಿದೆ.
ಸಿದ್ದರಾಮಯ್ಯ ನೇತೃತ್ವದ ಸರಕಾರ 2017-18ನೇ ಸಾಲಿನಲ್ಲಿ ವಸತಿ ರಹಿತರ ಸಮೀಕ್ಷೆ ನಡೆಸಿ ಕೇಂದ್ರ ಸರಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ರಾಜ್ಯಕ್ಕೆ 4 ಲಕ್ಷ ಮನೆ ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕೇಂದ್ರ ಸರಕಾರ ಅಭಿವೃದ್ಧಿ ಪಡಿಸಿದ್ದ ಆ್ಯಪ್ ಮೂಲಕ ಫಲನುಭವಿಗಳ ಆಯ್ಕೆ ಮಾಡದೆ ರಾಜ್ಯ ಸರಕಾರದ ಪ್ರತ್ಯೇಕ ಆ್ಯಪ್ ಮೂಲಕ ಮಾಡಿತ್ತು. ಫಲಾನುಭವಿಗಳ ಆಯ್ಕೆ ಪಾರ ದರ್ಶಕವಾಗಿಲ್ಲ ಎಂದು ರಾಜ್ಯದ
ಪ್ರಸ್ತಾವನೆಯನ್ನು ಕೇಂದ್ರ ವಾಪಸ್ ಕಳುಹಿಸಿ, ಈಗಾಗಲೇ ಆಯ್ಕೆ ಮಾಡಿರುವ ಫಲಾನುಭವಿ ಗಳ ಹೆಸರನ್ನು ಆಧಾರ್ ಜೋಡಣೆ ಮಾಡಿ ಪ್ರಸ್ತಾವನೆ ಕಳುಹಿಸುವಂತೆ ಸೂಚಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ರಾಜ್ಯ ಬಿಜೆಪಿ ಸರಕಾರವು ಆಗಿರುವ ಲೋಪ ವನ್ನು ಸರಿಪಡಿಸುವ ಗೋಜಿಗೆ ಹೋಗದೆ ಹೊಸ ಫಲಾನುಭವಿಗಳ ಆಯ್ಕೆಗೆ ಆದೇಶ ಹೊರಡಿಸಿದೆ. ಇದರಿಂದ ಈ ಹಿಂದೆ ಆಯ್ಕೆ ಯಾಗಿದ್ದವರಿಗೆ ಮನೆ ಕೈತಪ್ಪುವ ಸಾಧ್ಯತೆ ಇದೆ.
Related Articles
Advertisement
ಇದನ್ನೂ ಓದಿ:ಕುಂದಾಪುರ: ಕ್ರಿಸ್ಮಸ್ ಪ್ರಾರ್ಥನೆಗೆ ಶರತ್ತುಬದ್ಧ ಅನುಮತಿ
ಹಣಕಾಸಿನ ಹೊರೆರಾಜ್ಯ ಸರಕಾರ 5 ಲಕ್ಷ ಮನೆಗಳ ನಿರ್ಮಾಣಕ್ಕೆ ಬಸವ ವಸತಿ ಯೋಜನೆಗೆ 4,200 ಕೋಟಿ ರೂ., ಡಾ| ಬಿ.ಆರ್. ಅಂಬೇಡ್ಕರ್ (ಗ್ರಾಮೀಣ) ಯೋಜನೆಗೆ 1,312 ಕೋಟಿ ರೂ. ಡಾ| ಬಿ.ಆರ್. ಅಂಬೇಡ್ಕರ್ (ನಗರ) ಯೋಜನೆಗೆ 500 ಕೋಟಿ ರೂ., ದೇವರಾಜ ಅರಸು ಯೋಜನೆಗೆ 300 ಕೋಟಿ.ರೂ., ವಾಜಪೇಯಿ ನಗರ ವಸತಿ ಯೋಜನೆಗೆ 300 ಕೋಟಿ ರೂ. ಆಗತ್ಯವಿದೆ. ಕೇಂದ್ರ ದಿಂದ ಮಂಜೂರಾಗುವ ಪಿಎಂ ಆವಾಸ್ ಯೋಜನೆ ಅಡಿ ಶೇ. 60 ಹಣ ಬರುತ್ತದೆ. ಆದರೆ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆಗಿರುವ ತಾಂತ್ರಿಕ ಸಮಸ್ಯೆಯಿಂದ ಈಗಿನ ಬಿಜೆಪಿ ಸರಕಾರಕ್ಕೆ 4,000 ಕೋಟಿ ರೂ. ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಫಲಾನುಭವಿಗಳ ಆಯ್ಕೆ ಮಾಡುವಾಗ ಕೇಂದ್ರ ಸರಕಾರದ ಆ್ಯಪ್ ಬಳಸದೆ ಇವರದೇ ಆ್ಯಪ್ ಬಳಸಿ ಫಲಾನುಭವಿಗಳ ಆಯ್ಕೆ ಮಾಡಿರು ವು ದರಿಂದ ಕೇಂದ್ರ ತಿರಸ್ಕರಿಸಿದೆ. ಈಗ ರಾಜ್ಯ ಸರಕಾರವೇ 5 ಲಕ್ಷ ಮನೆಗಳನ್ನು ಹೊಸದಾಗಿ ನೀಡಲು ತೀರ್ಮಾನಿಸಿದೆ. ಸುಮಾರು 6,612 ಕೋಟಿ ರೂ. ಅಗತ್ಯವಿದೆ. – ವಿ. ಸೋಮಣ್ಣ, ವಸತಿ ಸಚಿವ