Advertisement

ಗಾಂಧಿನಗರ ಶಾಲೆಯ ಶತಮಾನೋತ್ಸವ ಸಮಾರೋಪ 

02:26 PM Feb 02, 2018 | Team Udayavani |

ಮಹಾನಗರ: ಸರ್ವಧರ್ಮದ ಮಕ್ಕಳು ಜಾತಿ-ಮತದ ಹಂಗಿಲ್ಲದೆ ಒಟ್ಟಿಗೆ ಓದಿ-ಕಲಿಯುವ ಕಾರಣದಿಂದ ಶಾಲೆ ಎನ್ನುವುದು ನಿಜ ಅರ್ಥದ ದೇವಾಲಯ ವಾಗಿದೆ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.

Advertisement

ಉರ್ವ ಗಾಂಧಿನಗರದ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಶತ ಮಾನೋತ್ಸವದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು.

ವ್ಯಕ್ತಿ ವಿಕಾಸದಿಂದ ಸಮಾಜದ ಉನ್ನತಿ ಸಾಧ್ಯ. ಇಂತಹ ಆದರ್ಶದಿಂದ ಸ್ಫೂರ್ತಿ ಪಡೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಗಾಂಧಿನಗರ ಶಾಲೆ ನೂರು ಸಂವತ್ಸರ ಪೂರೈಸುತ್ತಿರುವುದು ಅಭಿನಂದನಾರ್ಹ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಸುರೇಶ್‌ ರಾವ್‌, ಉದ್ಯಮಿಗಳಾದ ಜಗದೀಶ್‌ ಬೋಳೂರು, ಗೋಕುಲ್‌ ಕದ್ರಿ, ಬದ್ರಿನಾಥ ಕಾಮತ್‌, ದಿನೇಶ್‌ ಕೆ., ಆರ್‌.ಕೆ. ಶೆಣೈ, ಸಂಪತ್‌ ಶೆಟ್ಟಿ, ಭರತ್‌ ಭೂಷಣ್‌, ಪ್ರಸಾದ್‌ರಾಜ್‌ ಕಾಂಚನ್‌, ಕಣ್ಣೂರಿನ ವೈದ್ಯ ಡಾ| ಪ್ರದೀಪ್‌ಕುಮಾರ್‌, ಡಾ| ರಾಜೇಶ್‌ ಭಟ್‌, ಕಾರ್ಪೊರೇಟರ್‌ ಜಯಂತಿ ಆಚಾರ್‌, ರೂಪಾ ಬಂಗೇರ ಭಾಗವಹಿಸಿದ್ದರು.

ಗೌರವಾರ್ಪಣೆ
ಈ ಸಂದರ್ಭ ಶಾಲೆಯಲ್ಲಿ ಕಳೆದ 37 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ, ಶಾಲೆಯ ಪ್ರಗತಿಗೆ ಗಣನೀಯ ಕೊಡುಗೆ ನೀಡುತ್ತಿರುವ ಹಿರಿಯ ಶಿಕ್ಷಕಿ ವೀಣಾ ಬಿ. ಹಾಗೂ ಅವರ ಪತಿ ದಯಾನಂದ ಬೇಕಲ್‌ ಅವರನ್ನು ಗೌರವಿಸಲಾಯಿತು. ಶಾಲೆಯ ಸರ್ವ ಶಿಕ್ಷಕರಿಗೆ ಗೌರವಾರ್ಪಣೆ ನೀಡಲಾಯಿತು.

Advertisement

ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷ ಡಾ| ವಿಟ್ಠಲದಾಸ್‌ ಪೈ, ಅಣ್ಣಪ್ಪ ಪೈ, ಡಾ| ಬಿ.ಜಿ. ಸುವರ್ಣ, ಅಶೋಕ್‌ ಮೊಲಿ, ಅಧ್ಯಕ್ಷ ಕಿಶೋರ್‌ ಡಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ತುಳಸಿದಾಸ್‌ ಉರ್ವ, ಅರುಣ್‌ಕುಮಾರ್‌ ಉರ್ವ, ಭರತ್‌ಕುಮಾರ್‌, ಉಪಾಧ್ಯಕ್ಷ ಲೋಕನಾಥ ಬಂಗೇರ, ಖಜಾಂಚಿ ಲೋಕೇಶ್‌ ಚೆಟ್ಟಿ ಯಾರ್‌, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್‌ ಸುವರ್ಣ, ತಾರಾನಾಥ ಉರ್ವ, ಮುಖ್ಯ ಶಿಕ್ಷಕಿ ಯಶೋದಾ ಬಿ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಉಪಸ್ಥಿತರಿದ್ದರು. ಮಂಜುಳಾ ಶೆಟ್ಟಿ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next