Advertisement

ಪತ್ನಿಯರು ಕಂಡಂತೆ ಪ್ರಸಿದ್ಧರು ಕೃತಿ ಬಿಡುಗಡೆ

12:42 PM Aug 20, 2018 | |

ಬೆಂಗಳೂರು: ವರಕವಿ ದ.ರಾ.ಬೇಂದ್ರೆ ಅವರ ಬರವಣಿಗೆ ಶೈಲಿಯನ್ನು ಲೇಖಕಿ ವೆಂಕಟಲಕ್ಷ್ಮಿಅವರ ಸಾಹಿತ್ಯದಲ್ಲಿ ಕಾಣಬಹುದಾಗಿದೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌ ಬಣ್ಣಿಸಿದ್ದಾರೆ. ಅಹರ್ನಿಶಿ ಪ್ರಕಾಶನ ಭಾನುವಾರ ನಗರದ ಜಯರಾಮ ಸೇವಾ ಮಂಡಳಿಯಲ್ಲಿ ಹಮ್ಮಿಕೊಂಡಿದ್ದ ಲೇಖಕಿ ಬಿ.ಎಸ್‌.ವೆಂಕಟಲಕ್ಷ್ಮಿ ಅವರ “ಪತ್ನಿಯರು ಕಂಡಂತೆ ಪ್ರಸಿದ್ಧರು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Advertisement

ತಮ್ಮ ಮತ್ತು ವೆಂಕಟಲಕ್ಷ್ಮಿಅವರೊಡಗಿನ ಒಡನಾಟವನ್ನು ಮೆಲುಕು ಹಾಕಿದ ಅವರು, ನಾನು ವಾರ್ತಾ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ  ವೇಳೆ ಇದ್ದ ನವರತ್ನಗಳ ಪೈಕಿ ವೆಂಕಟಲಕ್ಷ್ಮಿ ಅವರು ಸಾಹಿತ್ಯದ ಮಣಿಯಾಗಿದ್ದರು. ಪತ್ರಿಕೆಗಳಿಗೆ ಹೋಗಬೇಕಾಗಿದ್ದ ಸುದ್ದಿಗಳನ್ನು ಅಚ್ಚುಕಟ್ಟಾಗಿ ಸಿದ್ದಪಡಿಸಿ ಕಳುಹಿಸುತ್ತಿದ್ದರು. ಸರ್ಕಾರಿ ಸೇವೆಯಲ್ಲಿ ಇದ್ದರೂ ಸಾಹಿತ್ಯಕ್ಷೇತ್ರದ ಬಗ್ಗೆ  ಅಪಾರ ಒಲವಿತ್ತು. ಅವರ ಬರವಣಿಗೆ ಶೈಲಿ ಕೂಡ ವಿನೂತನವಾಗಿತ್ತು. ಹೀಗಾಗಿ, ಅವರ ಸಾಹಿತ್ಯದ ಶೈಲಿಯನ್ನು ಅಧ್ಯಯನ ಮಾಡುವ ಅವಶ್ಯಕತೆ ಇದೆ ಎಂದರು.

ವೆಂಕಟಲಕ್ಷ್ಮಿನನ್ನ ಜೀವನದ ಅವಿಸ್ಮರಣಿಯ ವ್ಯಕ್ತಿಯಾಗಿದ್ದರು. ಕೆಲಸದಿಂದಾಗಿ ಅವರಲ್ಲಿನ ಸಾಹಿತ್ಯ ಪ್ರಜ್ಞೆ ಕುಂಠಿತವಾಗಿರಲಿಲ್ಲ. ಕೆಲಸ ಮಾಡುತ್ತಾ, ಕುಟುಂಬವನ್ನು ಸಲಹುತ್ತಾ ಕೆಲವು ಪುಸ್ತಕಗಳನ್ನು ಹೊರತಂದರು. ಅವರು ನಿಧನರಾಗುವ ಮುನ್ನ ಪತ್ರಿಕೆಯೊಂದಕ್ಕೆ ಮಾಡಿದ್ದ ಹೆಸರಾಂತ ಸಾಹಿತಿಗಳ, ರಾಜಕಾರಣಿಗಳ, ಕ್ರೀಡಾ ತಾರೆಗಳ ಪತ್ನಿಯರ ಸಂದರ್ಶನ ಈಗ “ಪತ್ನಿಯರು ಕಂಡಂತೆ ಪ್ರಸಿದ್ಧರು’ ಪುಸ್ತಕ ರೂಪದಲ್ಲಿ ಬಂದಿದ್ದು, ಮತ್ತಷ್ಟು ಸಂತಸ ತಂದಿದೆ. ಅವರ ಆಲೋಚನ ಲಹರಿಯೇ ವಿಭಿನ್ನವಾಗಿತ್ತು ಶ್ಲಾ ಸಿದರು.

ಪುಸ್ತಕದ ಕುರಿತು ಸಾಹಿತಿ ಜಯಂತ ಕಾಯ್ಕಿಣಿ ಮಾತನಾಡಿದರು. ಹಿರಿಯ ಪತ್ರಕರ್ತ ರಂಗನಾಥ್‌, ಲೇಖಕಿ ಸುಮಿತ್ರಾ ದೇವಿ, ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ, ಲೇಖಕಿ ವೆಂಕಟಲಕ್ಷ್ಮಿಅವರ ಪತಿ ಶ್ಯಾಮರಾವ್‌, ಅಹರ್ನಿಶಿ ಪ್ರಕಾಶನದ ಅಕ್ಷತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next