Advertisement

ಸಾರ್ವಜನಿಕ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಡ್ಡಾಯ

12:40 PM Oct 08, 2018 | Team Udayavani |

ಹುಮನಾಬಾದ: ಒಂದೇ ಕಡೆ 100 ಜನ ಅಥವಾ ಒಂದು ದಿನದಲ್ಲಿ 500 ಜನ ಭೇಟಿ ನೀಡುವ ಸಾರ್ವಜನಿಕ ಸ್ಥಳಗಳಲ್ಲಿ ಸಂಬಂಧಪಟ್ಟವರು ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಈ ನಿಟ್ಟಿನಲ್ಲಿ ಜನರು ಈಗಿನಿಂದಲೇ ಕಟ್ಟೆಚ್ಚರ ವಹಿಸಬೇಕು ಎಂದು ಪಿಎಸ್‌ಐ ಎಲ್‌.ಟಿ. ಸಂತೋಷ ಹೇಳಿದರು.

Advertisement

ಪಟ್ಟಣದ ಸ್ಟಾರ್‌ ಕಲ್ಯಾಣ ಮಂಟಪದಲ್ಲಿ ರವಿವಾರ ಪೊಲೀಸ್‌ ಇಲಾಖೆ ಸಾರ್ವಜನಿಕ ಸುರಕ್ಷತೆ ಉದ್ದೇಶದಿಂದ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡಿದ ಅವರು, ಸಾರ್ವಜನಿಕ ಆಗಮನ ಮತ್ತು ನಿರ್ಗಮನ ಸ್ಥಳಗಳಲ್ಲಿ 30 ದಿನಗಳ ವಿಡಿಯೋ ಚಿತ್ರೀಕರಣ ಸಂಗ್ರಹ ಸಾಮರ್ಥ್ಯ ಹೊಂದಿರುವ ಕ್ಯಾಮರಾಗಳನ್ನೇ ಅಳವಡಿಸಬೇಕು.

ಪ್ರತಿಯೊಂದು ಸಂಸ್ಥೆಯು ಇಲಾಖೆ ನೀಡಿರುವ ಫಾರ್ಮ್-1 ಮತ್ತು 15ರಲ್ಲಿ ಕಡ್ಡಾಯವಾಗಿ ಇಲಾಖೆಗೆ ಮಾಹಿತಿ ಸಲ್ಲಿಸಬೇಕು ಎಂದು ತಿಳಿಸಿದರು.

ಪಿಎಸ್‌ಐಗಳಾದ ಜಿ.ಎಂ.ಪಾಟೀಲ, ಮಹಾಂತೇಶ ಲುಂಬಿ ಕಾಮರಾ ಅಳವಡಿಕೆಯ ಉದ್ದೇಶ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರು ವಿವಿಧ ಸಮಸ್ಯೆಗಳ ಕುರಿತು ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಿಕೊಂಡರು.

ಗಣ್ಯರಾದ ಡಾ| ಜಯಕುಮಾರ ಸಿಂಧೆ, ಶಾಂತವೀರ ಯಲಾಲ್‌, ನರೇಂದ್ರ ಪಾಟೀಲ, ವಿಶ್ವನಾಥ ಸಾತಾ, ರಿಜ್ವಾನ್‌, ಜ್ಞಾನದೇವ ಭೋಸ್ಲೆ, ಕಿಶೋರ ಕುಲಕರ್ಣಿ ಅಲ್ಲದೇ ತಾಲೂಕಿನ ವಿವಿಧ ಶಾಲಾ, ಕಾಲೇಜು, ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಮತ್ತು ವ್ಯಾಪಾರಿಗಳು ಸೇರಿ 500ಕ್ಕೂ ಅಧಿಕ ಜನ ಭಾಗವಹಿಸಿದ್ದರು.

Advertisement

ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸ್ಥಳಗಳು, ಕ್ರೀಡಾ ಸಂಕಿರ್ಣಗಳು, ಬಸ್‌ ನಿಲ್ದಾಣ, ರೈಲು ನಿಲ್ದಾಣ ಒಂದೇ ಕಡೆ ಏಕ ಕಾಲಕ್ಕೆ 100 ಜನ ಸೇರುವ ಅಥವಾ ಬೆಳಗ್ಗೆಯಿಂದ ಸಂಜೆ ವರೆಗೆ 500 ಜನ ಭೇಟಿ ನೀಡುವ ಯಾವುದೇ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಇಲಾಖೆ ನಿಯಮ ಪಾಲಿಸದ ಸಂಸ್ಥೆಗೆ ಮೊದಲ ತಿಂಗಳು 5 ಸಾವಿರ ರೂ. ಎರಡನೇ ತಿಂಗಳಲ್ಲಿ 10 ಸಾವಿರ ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಪಾಲಿಸದೇ ಇದ್ದಲ್ಲಿ ಆ ಸಂಸ್ಥೆಗೆ ಬೀಗಮುದ್ರೆ ಹಾಕಲಾಗುವುದು.
 ಎಲ್‌.ಟಿ.ಸಂತೋಷ, ಪಿಎಸ್‌ಐ

Advertisement

Udayavani is now on Telegram. Click here to join our channel and stay updated with the latest news.

Next