ಕುದ್ರೋಳಿ: ಬದುಕಿನಲ್ಲಿ ಕಷ್ಟಗಳು ಬರುವುದು ಸಹಜ. ಕಷ್ಟ- ನಷ್ಟಗಳನ್ನು ಎದುರಿಸುತ್ತ ಸುಖಮಯವಾದ ಬದುಕು ಸಾಗಿಸಲು ನಗು-ನಲಿವೆ ಜೀವನೋತ್ಸಾಹಕ್ಕೆ ಕಾರಣವಾಗುತ್ತದೆ ಎಂದು ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಹಿರಿಯ ಪ್ರಬಂಧಕ ಯು. ರಾಮ ರಾವ್ ಅಭಿಪ್ರಾಯಪಟ್ಟರು.
ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಐಕ್ಯೂಎಸಿ ಹಾಗೂ ಎಚ್‌ಆರ್‌ಡಿ ಸಂಸ್ಥೆಗಳ ಆಶ್ರಯದಲ್ಲಿ ಜಾಗತಿಕ ನಗೆ ದಿನ ಆಚರಣೆಯ ಪ್ರಯುಕ್ತ ಅವರು ಹಾಸ್ಯ ವಿಷಯಾಧಾರಿತ ಉಪನ್ಯಾಸ ನೀಡಿದರು. ಹಾಸ್ಯದ ಹೊನಲನ್ನು ಹರಿಸುವ
ಚುಟುಕು, ಲೇಖನಗಳನ್ನು ಓದುತ್ತಾ ಸಾಹಿತ್ಯದ ಅನುಭವವನ್ನು ಹೆಚ್ಚಿಸಬೇಕು. ಇದರಿಂದ ಮನಸ್ಸಿಗೂ ಮುದ ಸಿಗುತ್ತದೆ ಎಂದವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ| ಕೆ. ರೇಣುಕಾ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಪ್ರತಿನಿಧಿ ಗುಡ್ಡಪ್ಪ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ವಿಭಾಗದ ಪ್ರೊ| ಚಂದ್ರ ಕೆ. ಸ್ವಾಗತಿಸಿದರು. ಕಾವ್ಯಾ ವಂದಿಸಿದರು.