Advertisement

ಮಾದಕ ದ್ರವ್ಯ ಪ್ರಕರಣ ಪತ್ತೆಗೆ ಜಾಗೃತಿಯೂ ಕಾರಣ

05:43 PM Oct 13, 2018 | Team Udayavani |

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಕರಣ ಪತ್ತೆ ಹಚ್ಚಿ,
ತಪ್ಪಿತಸ್ಥರನ್ನು ಬಂಧಿಸಲಾಗುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ
ತಿಳಿಸಿದ್ದಾರೆ. 

Advertisement

ಸಿಮಾಂಧ್ರದ ಗಾಂಜಾ ತಂದು ದಾವಣಗೆರೆ, ಶಿವಮೊಗ್ಗ, ಹೊಳಲ್ಕೆರೆ, ಚನ್ನಗಿರಿ ಇತರೆಡೆ ಮಾರಾಟ ಮಾಡುತ್ತಿದ್ದ
ಆರೋಪದಡಿ ಸಿಮಾಂಧ್ರದ ಕಡಪ ಜಿಲ್ಲೆ ಜಮ್ಮಲಮಡುಗು ತಾಲೂಕು ಮುದ್ದನೂರು ಗ್ರಾಮದ ಸುಧಾಕರ್‌
ಅಲಿಯಾಸ್‌ ಲೋಮಡ ಸುಧಾಕರ್‌ (24), ಬಿಎಸ್ಸಿ ವಿದ್ಯಾರ್ಥಿ ರಾಜೇಶ್‌ ಅಲಿಯಾಸ್‌ ಮಂಗಲ್‌ ರಾಜೇಶ್‌ (20),
ಮುನ್ನಯ್ಯ ಅಲಿಯಾಸ್‌ ಮಂಗಲ್‌ ಮುನ್ನಯ್ಯ(26), ಬಾಬಾ ಅಲಿಯಾಸ್‌ ಶೇಖ್‌ ಬಾಬಾ ಫಕೃದ್ದೀನ್‌(26) ಎಂಬುವರನ್ನು  ಬಂಧಿಸಿರುವ ಚೆನ್ನಗಿರಿಪೊಲೀಸರು ಆರೋಪಿಗಳಿಂದ 7.15 ಲಕ್ಷ ಮೌಲ್ಯದ 28 ಕೆಜಿ 600 ಗ್ರಾಂನಷ್ಟು ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿರುವ ಇನ್ನೊಬ್ಬ ಆರೋಪಿ ತರಪನಾಥ್‌ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ನುಡಿದರು.

ಗ್ರಾಮಾಂತರ ಉಪಾಧೀಕ್ಷಕ ಮಂಜುನಾಥ್‌ ಕೆ. ಗಂಗಲ್‌, ಸಿಪಿಐಗಳಾದ ಕೆ. ಗಜೇಂದ್ರಪ್ಪ, ಗುರುಬಸವರಾಜ್‌ ಸಿಬ್ಬಂದಿ ಎಸ್‌.ಆರ್‌. ರುದ್ರೇಶ್‌, ಮಂಜುನಾಥ ಪ್ರಸಾದ್‌, ಧರ್ಮಪ್ಪ, ರೇವಣಸಿದ್ದಪ್ಪ, ಸಂತೋಷ್‌, ಹಾಲೇಶ್‌, ಪ್ರವೀಣ್‌ ಗೌಡ್‌, ರವೀಂದ್ರ, ಮಂಜು, ರಾಜಶೇಖರ ರೆಡ್ಡಿ ಮತ್ತು ತಾಂತ್ರಿಕ ವಿಭಾಗದ ರಾಮಚಂದ್ರ ಜಾಧವ್‌ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಆಗಸ್ಟ್‌ ಮತ್ತು ಸೆಪ್ಟಂಬರ್‌ನಲ್ಲಿ ಶಾಲಾ-ಕಾಲೇಜುಗಳಲ್ಲಿ ಮಾದಕ ದ್ರವ್ಯ ತಡೆ ಕುರಿತಂತೆ ಜಾಗೃತಿ ಕಾರ್ಯಕ್ರಮ,
ವಿಚಾರ ಸಂಕಿರಣ ನಡೆಸುವ ಮೂಲಕ ಜಾಗೃತಿ ಮೂಡಿಸಲಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು,
ಯುವ ಜನಾಂಗ ನೀಡುತ್ತಿರುವ ಮಾಹಿತಿಯೂ ಪ್ರಕರಣಗಳ ಪತ್ತೆಗೆ ನೆರವಾಗುತ್ತಿದೆ ಎಂದು ತಿಳಿಸಿದರು.

ಕರೂರು ಹೊರವಲಯದ ಹೊಲವೊಂದರಲ್ಲಿ ಯುವತಿ ಶವ ಪತ್ತೆ ಪ್ರಕರಣದ ಪತ್ತೆಗಾಗಿ ನಗರ ಪೊಲೀಸ್‌ ಉಪಾಧೀಕ್ಷಕ ಹಾಗೂ ನಗರ ಮತ್ತು ಮಹಿಳಾ ಪೊಲೀಸ್‌ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿದೆ. ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆ ಮಾಡಲಾಗಿದೆ. ಆದಷ್ಟು ಶೀಘ್ರ ಆರೋಪಿತರನ್ನುಬಂಧಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

Advertisement

ಹದಡಿ ರಸ್ತೆಯಲ್ಲಿ ಸಂಚಾರಿ ಎಎಸ್‌ಐ, ಪೇದೆ ಮೇಲೆ ಹಲ್ಲೆ ನಡೆಸಿರುವಾತ ಮಾನಸಿಕ ಅಸ್ವಸ್ಥನೇ ಎಂಬುದು ಒಳಗೊಂಡಂತೆ ಎಲ್ಲ ಮಾಹಿತಿಗಾಗಿ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ವೈದ್ಯರ ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಗ್ರಾಮಾಂತರ ಉಪಾಧೀಕ್ಷಕ ಮಂಜುನಾಥ್‌ ಕೆ. ಗಂಗಲ್‌, ಪ್ರಭಾರ ವೃತ್ತ ನಿರೀಕ್ಷಕ ಗುರುಬಸವರಾಜ್‌, ಪಿಎಸ್‌ಐ ಸಿದ್ದಪ್ಪ ಮೇಟಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next