Advertisement

ಬಸವನಬಾಗೇವಾಡಿಯಲ್ಲಿ ಸಂಭ್ರಮದ ಕಾರಹುಣ್ಣಿಮೆ

11:47 AM Jun 29, 2018 | |

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗುರುವಾರ ಕಾರಹುಣ್ಣಿಮೆಯನ್ನು ರೈತರು ಸಡಗರ
ಸಂಭ್ರಮದಿಂದ ಆಚರಿಸಿದರು. ರೈತರು ಬೆಳಗ್ಗೆ ಎತ್ತುಗಳು ಸೇರಿದಂತೆ ದನಕರುಗಳ ಮೈತೊಳೆದು ವಿವಿಧ ಬಣ್ಣ
ಹಚ್ಚಿ, ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು. ಸಂಜೆ ಪಟ್ಟಣದ ಗಣಪತಿ ವೃತ್ತ, ಸಂಗೊಳ್ಳಿ
ರಾಯಣ್ಣ ವೃತ್ತ, ತೆಗಲಿ ರಸ್ತೆ, ವಿಜಯಪುರ ರಸ್ತೆ, ಗೌರಿ ಶಂಕರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಜಮಾಯಿಸಿದ
ರೈತರು ತಮ್ಮ ಎತ್ತುಗಳನ್ನು ಓಡಿಸಿ ಕರಿ ಹರಿದರು. ಎರಡು ಬದಿಗಳಲ್ಲಿ ನಿಂತ ಜನರು ಕೂಗಾಟದ ಮಧ್ಯೆ ಎತ್ತುಗಳು
ರಭಸವಾಗಿ ಇನ್ನೊಂದು ತುದಿಗೆ ತಲುಪಿದವು.

Advertisement

ತೆಲಗಿ ರಸ್ತೆಯಲ್ಲಿನ ಗಣಪತಿ ವೃತ್ತದಲ್ಲಿ ರೈತರು ಭಾರವಾದ ಕಲ್ಲುಗುಂಡು ಎತ್ತುವ ಮೂಲಕ ಈ ವರ್ಷದ ಮಳೆ ಬೆಳೆಯ ಕುರಿತು ಭವಿಷ್ಯ ತಿಳಿದರು. ಅಶೋಕ ಮುಳವಾಡ, ಮಹಾಂತೇಶ ಹಂಜಗಿ, ಗುರಪ್ಪ ತುಂಬಗಿ, ಶಿವಪ್ಪ ದಂಡಿನ, ಮಲ್ಲಪ್ಪ ನಾಗೋಡ, ಚನಬಸು ಮುಳವಾಡ, ಶಿವಪ್ಪ ತುಂಬಗಿ, ಅರುಣ ಬಸರಕೋಡ, ಮಲ್ಲಿಕಾರ್ಜುನ ಹಡಪದ, ಪಂಚಾಕ್ಷರಯ್ಯ ಕಾಳಹಸ್ತೇಶ್ವರಮಠ, ಮಹಾದೇವಪ್ಪ ಹಡಪದ, ದೊಡ್ಡಪ್ಪ ಅವಟಿ ಸೇರಿದಂತೆ ಅನೇಕರು
ಪಾಲ್ಗೊಂಡಿದ್ದರು. ವಿಜಯಪುರ ರಸ್ತೆಯಲ್ಲಿ ಜರುಗಿದ ಕರಿಹರಿಯುವ ಕಾರ್ಯಕ್ರಮದಲ್ಲಿ ಶಿವಪ್ಪ ಈರಕಾರ ಮುತ್ಯಾ, ಈರಯ್ಯ ಹಿರೇಮಠ, ಸತ್ಯಪ್ಪ ಕ್ಯಾಡದ, ರಾಷಪ್ಪ ಖ್ಯಾಡದ, ವಿಜಯ ಗೊಳಸಂಗಿ, ಸೋಮು ಶೆಂಡೆ, ಬಸವರಾಜ ಶೆಂಡೆ, ರಾಜು ಹೆಬ್ಟಾಳ, ಬಸವರಾಜ ಗಬ್ಬೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next