Advertisement

ಗುತ್ತಿಗೆ ನೌಕರರಿಂದ ಮೊಂಬತ್ತಿ ಮೆರವಣಿಗ

11:34 AM Aug 16, 2018 | Team Udayavani |

ದಾವಣಗೆರೆ: ಕಾಯಮಾತಿಗೆ ಒತ್ತಾಯಿಸಿ ಸರ್ಕಾರಿ ಗುತ್ತಿಗೆ ನೌಕರರು ಬುಧವಾರ ಸಂಜೆ ಜಯದೇವ ವೃತ್ತದಲ್ಲಿ ಕ್ಯಾಂಡೆಲ್‌ ಲೈಟ್‌ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಅನೇಕ ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವರು ಕೆಲಸದ ಭದ್ರತೆ ಇಲ್ಲದೆ ಅಕ್ಷರಶಃ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಗುತ್ತಿಗೆ ಆಧಾರಿತ ನೌಕರರ ಕಾರಣಕ್ಕಾಗಿಯೇ ಸರ್ಕಾರದ ಆಡಳಿತ ಅತ್ಯಂತ ಸುಸೂತ್ರವಾಗಿ ನಡೆಯುತ್ತಿದೆ. ಆದರೆ, ಅದಕ್ಕೆ ಕಾರಣವಾಗುತ್ತಿರುವರ ಬದುಕು ಮಾತ್ರ ಸುಸೂತ್ರವಾಗಿಲ್ಲ ಎಂದು ಗುತ್ತಿಗೆ ಆಧಾರಿತ ನೌಕರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸರ್ಕಾರಿ ಗುತ್ತಿಗೆ ನೌಕರರ ಸಮಸ್ಯೆ ಹಲವಾರು ವರ್ಷಗಳಿಂದ ಜೀವಂತವಾಗಿವೆ. ಈ ಕ್ಷಣಕ್ಕೂ ಸಮಸ್ಯೆಗೆ ಪರಿಹಾರ ಎಂಬುದು ದೊರೆತಿಲ್ಲ. ಸದಾ ಅಭದ್ರ ಸ್ಥಿತಿಯಲ್ಲೇ ಜೀವನ ನಿರ್ವಹಣೆ ಮಾಡಬೇಕಿದೆ. ದೇಶ 72ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ. ಸರ್ಕಾರಿ ಗುತ್ತಿಗೆ ನೌಕರರಿಗೆ ಆಧುನಿಕ ಜೀತಪದ್ಧತಿಯಿಂದ ಸ್ವಾತಂತ್ರ್ಯ ದೊರೆತಿಲ್ಲ ಮಾತ್ರವಲ್ಲ ದೊರೆಯುವ ಲಕ್ಷಣವೂ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೇವೆ ಕಾಯಂಗೆ ಒತ್ತಾಯಿಸಿ ಸ್ವಾತಂತ್ರ್ಯ ದಿನಾಚರಣೆಯಂದು, ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳಾಗಿವೆ ನಮ್ಮನ್ನೇಕೆ ಜೀತಪದ್ಧತಿಗೆ ದೂಡುತ್ತಿದ್ದೀರಿ… ಎಂಬ ಘೋಷವಾಕ್ಯದೊಂದಿಗೆ ಒತ್ತಾಯಿಸುತ್ತಿದ್ದೇವೆ. ಸರ್ಕಾರ ಈಗಲಾದರೂ ಕಣ್ಣು ತೆರೆದು, ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು. ಆದಿಲ್‌ಖಾನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next