Advertisement
ಹೀಗೆಂದು ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್Õ(ಎಡಿಆರ್) ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಕಳೆದ ಲೋಕಸಭೆ ಚುನಾವಣೆ ವೇಳೆ ಮತದಾರರ ಆದ್ಯತೆ ಕುರಿತು 527 ಲೋಕಸಭಾ ಕ್ಷೇತ್ರಗಳಲ್ಲಿನ 2.70 ಲಕ್ಷ ಮತದಾರರನ್ನು ಸಮೀಕ್ಷೆಗೊಳಪಡಿಸಿ ವರದಿ ತಯಾರಿಸಲಾಗಿತ್ತು. ಆ ಪೈಕಿ ಗುಜರಾತ್‌ಗೆ ಸಂಬಂಧಿಸಿದ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ಅದರಂತೆ, ಇಲ್ಲಿ ನವರು ಅಭ್ಯರ್ಥಿಯ ಹಿನ್ನೆಲೆ ಏನೇ ಇದ್ದರೂ, ಆತನ ಧರ್ಮ, ಜಾತಿ ನೋಡಿಯೇ ಮತ ಹಾಕುತ್ತಾರೆ. ಈ ಮಾನದಂಡದ ಹೊರತಾಗಿ ಸಿಎಂ ಅಥವಾ ಪಿಎಂ ಅಭ್ಯರ್ಥಿಯೇ ಎಂಬುದನ್ನೂ ನೋಡುತ್ತಾರೆ ಎಂದಿದೆ ವರದಿ. ಇನ್ನು ಮತದಾರರಿಗೆ ಆಮಿಷವೊಡ್ಡುವುದು ಕಾನೂನುಬಾಹಿರ ಎಂದು ಗೊತ್ತಿರುವುದು ಕೇವಲ ಶೇ.29ರಷ್ಟು ಮಂದಿಗೆ ಮಾತ್ರ.
ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಜಿದ್ದಾ ಜಿದ್ದಿನ ಕಣವಾಗಿ ಪರಿವರ್ತಿತವಾಗಿರುವ ಹಿಮಾಚಲ ಪ್ರದೇಶದಲ್ಲಿ ಗುರುವಾರ ಮತ ದಾನ ನಡೆಯಲಿದ್ದು, ಮಂಗಳವಾರ ಪ್ರಚಾರಕ್ಕೆ ತೆರೆಬಿದ್ದಿದೆ. ಇದೇ ವೇಳೆ, ಚುನಾವಣೆಗೆ ಸಿದ್ಧವಾ ಗಿರುವ ಗುಜರಾತ್ ಮತ್ತು ಹಿಮಾಚಲದಲ್ಲಿ ಒಟ್ಟು 1.38 ಕೋಟಿ ರೂ. ನಗದು, 12.86 ಕೋಟಿ ಬೆಲೆ ಬಾಳುವ 6 ಲಕ್ಷ ಲೀಟರ್ ಮದ್ಯ ಮತ್ತು ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಹಿಮಾಚಲದಲ್ಲೇ 1.18 ಕೋಟಿ ನಗದು, 5.19 ರೂ. ಮೌಲ್ಯದ ಮದ್ಯ, 81 ಕೆಜಿ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾ ಗಿದೆ. ಗುಜರಾತ್‌ನಲ್ಲಿ 20 ಲಕ್ಷ ನಗದು, 3.08 ಲೀ ಮದ್ಯ, 24 ಕೇಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ಗುಜರಾತ್‌ನಲ್ಲಿ ಪ್ರಚಾರ ಆರಂಭಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತದಾರರ ಮನೆ ಬಾಗಿಲಿಗೆ ತೆರಳಿ ಮತ ಯಾಚಿಸಿದ್ದಾರೆ.