Advertisement

ಸಮಯಕ್ಕೆ ಸರಿಯಾಗಿ ಬಸ್‌ ವ್ಯವಸ್ಥೆಗೆ ಜಾರಕಿಹೊಳಿ ತಾಕೀತು

04:16 PM Jan 07, 2022 | Team Udayavani |

ಹುಕ್ಕೇರಿ: ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಮಕಮರಡಿ ಮತಕ್ಷೇತ್ರದಲ್ಲಿ ಸರಿಯಾದ ಸಮಯಕ್ಕೆ ಬಸ್‌ ಇಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ವ್ಯವಸ್ಥೆ ಮಾಡಬೇಕೆಂದು ಶಾಸಕ ಸತೀಶ ಜಾರಕಿಹೊಳಿ ಸಾರಿಗೆ ವ್ಯವಸ್ಥಾಪಕ ಆರ್‌.ಜಿ. ನಾಡಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.

Advertisement

ತಾಪಂ ಸಭಾಭವನದಲ್ಲಿ ಜರುಗಿದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಯಮಕನಮರಡಿ ಮತಕ್ಷೇತ್ರದ ಸಾರ್ವಜನಿಕರ ಕುಂದು-ಕೊರತೆ ಕುರಿತು ಮಾತನಾಡಿದರು.

ಈ ವರ್ಷ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ಅನುಗುಣವಾಗಿ ಬಸ್ಸಿನ ವ್ಯವಸ್ಥೆ ಮಾಡಬೇಕೆಂಬ ಪರಿಜ್ಞಾನ ಇಲ್ಲದ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ಸೂಚಿಸಲಾಗುವುದು. ಹತ್ತರಕಿ ಬಸ್‌ ನಿಲಾಣದಲ್ಲಿ ಅನಧಿಕೃತವಾಗಿ ತಿಂಡಿ ತಿನಿಸುಗಳ ಮಾರಾಟಮಾಡುವ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಇದನ್ನು ನಿಷೇಧಿಸಬೇಕೆಂದು ಸೂಚಿಸಿದರು.

ನೆರೆ ಹಾವಳಿಯಿಂದ ಮನೆ ಬಿದ್ದ ಫಲಾನುಭವಿಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅರ್ಜುನವಾಡ, ಪಾಶ್ಚಾಪುರ, ನಾಗನೂರ, ಯಮಕನಮರಡಿಯಲ್ಲಿನ 2019ರಲ್ಲಿ ಬಿದ್ದ ಮನೆಗಳಿಗೆ ಬರಬೇಕಾದ ಪರಿಹಾರ ಬಾಕಿ ಇದೆ. ಈ ವರ್ಷವೂ ಮಳೆಗೆ ಬಿದ್ದ ಮನೆಗಳಿಗೆ ಪರಿಹಾರ ಧನ ಕೊಡಿಸಲು ಶಾಸಕರಿಗೆ ಸಾರ್ವಜನಿಕರು ವಿನಂತಿಸಿಕೊಂಡರು.

ತಹಶೀಲ್ದಾರ್‌ ಡಾ| ಡಿ.ಎಚ್‌. ಹೂಗಾರ ಮಾತನಾಡಿ, 224 ಮನೆಗಳಿಗೆ ಪರಿಹಾರ ಪ್ರಕ್ರಿಯೆ ನಡೆದಿದೆ. ಉಳಿದವುಗಳನ್ನು ಅಂತಿಮ ಜಿಪಿಎಸ್‌ ವರದಿ ಬಂದ ನಂತರ ಪ್ರಾರಂಭಿಸಲಾಗುವುದೆಂದು ಹೇಳಿದರು. ತಾಪಂ ಇಒ ಉಮೇಶ ಸಿದ್ದಾಳ, ತಾಪಂ ಆಡಳಿತಾಧಿ ಕಾರಿ ಉಮಾ ಸಾಲಿಗೌಡರ, ಜಿಪಂ ಮಾಜಿ ಸದಸ್ಯರಾದ ಮಂಜುನಾಥ ಪಾಟೀಲ, ಶಿವಾನಂದ ಮಗದುಮ್ಮ, ಈರಣ್ಣಾ ಬಿಸಿರೊಟ್ಟಿ, ಎ.ಎಸ್‌. ಕುಂದಿ, ಬಾಪುಗೌಡ ಪಾಟೀಲ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶ್ರೀಶೈಲ ಹಿರೇಮಠ, ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ತಾಪಂ ವ್ಯವಸ್ಥಾಪಕ ಆರ್‌.ಎ. ಚಟ್ನಿ ಸ್ವಾಗತಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next