Advertisement

ಬಜೆಟ್‌ನಲ್ಲಿ ನಿರಾಶೆ: ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

03:57 PM Mar 16, 2017 | |

ಉಡುಪಿ: ರಾಜ್ಯದ ಅಂಗನವಾಡಿ ನೌಕರರ ಸಮಸ್ಯೆಗೆ ಈ ಬಾರಿಯ ಬಜೆಟ್‌ನಲ್ಲಿ  ನಿರಾಶೆ ಎದುರಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ಸದಸ್ಯರು ಮಾ. 15ರಂದು ಗಾಂಧಿವೃತ್ತದ ಬಳಿ ಪ್ರತಿಭಟನೆ ನಡೆಸಿದರು.

Advertisement

ತಮಿಳುನಾಡು, ಕೇರಳ, ಗೋವಾ, ಪಾಂಡಿಚೇರಿಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 10 ರಿಂದ 14 ಸಾವಿರ ರೂಪಾಯಿ ಕನಿಷ್ಠವೇತನವಿದೆ. ಇಂತಹ ತಾರತಮ್ಯವೇಕೆ ಎಂದು ಪ್ರಶ್ನಿಸಿದ ಕಾರ್ಯಕರ್ತರು ರಾಜ್ಯದಲ್ಲಿ ಸೇವೆ ನೀಡುವ ಅಂಗನವಾಡಿ ಕಾರ್ಯಕರ್ತೆಯರಿಗೆ ನ್ಯಾಯ ಒದಗಿಸಿಕೊಡಬೇಕೆಂದು ರಾಜ್ಯದ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಸುಶೀಲಾ ನಾಡ, ಸದಸ್ಯರುಗಳಾದ ಜಯಲಕ್ಷ್ಮೀ ಶೆಟ್ಟಿ, ಶೈಲ, ಪ್ರೇಮಾ ಶಿರ್ವ, ಪುಷ್ಪಾ ಮುದರಂಗಡಿ, ಸರೋಜಿನಿ ಶೆಟ್ಟಿ, ಸಿಐಟಿಯುನ ವಿಶ್ವನಾಥ ರೈ, ಕವಿರಾಜ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next