Advertisement

ನಾಯಕರಿಗೆ ಬಿಎಸ್ಪಿ ಶ್ರದ್ಧಾಂಜಲಿ

12:24 PM Nov 27, 2018 | Team Udayavani |

ಮೈಸೂರು: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಖಾಸಗಿ ಬಸ್‌ ನಾಲೆಗೆ ಉರುಳಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರು, ಹಿರಿಯ ನಾಯಕರಾದ ಅಂಬರೀಶ್‌ ಹಾಗೂ ಸಿ.ಕೆ.ಜಾಫ‌ರ್‌ ಷರೀಫ್ ಅವರಿಗೆ ಬಹುಜನ ಸಮಾಜ ಪಕ್ಷದವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

Advertisement

ನಗರದ ಅಶೋಕಪುರಂನಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಉದ್ಯಾನದಲ್ಲಿ ಪಕ್ಷದ ಪದಾಧಿಕಾರಿಗಳು ಸೋಮವಾರ ಸಭೆ ಸೇರಿ ಮೌನಾಚರಣೆ ಮೂಲಕ ಅಗಲಿದವರಿಗೆ ನಮನ ಸಲ್ಲಿಸಿದರು. ಬಿಎಸ್‌ಪಿ ನಗರಾಧ್ಯಕ್ಷ ಬಸವರಾಜು ಮಾತನಾಡಿ, 1949ರ ನ.26ರಂದು ಸಂಸತ್ತಿನಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ರಚಿಸಿದ ಸಂವಿಧಾನ ಮಂಡಿಸಿ, ಸಂಸತ್ತಿನ ಅನುಮೋದನೆ ಪಡೆಯುತ್ತಾರೆ. ಈ ದಿನವನ್ನು ಸಂವಿಧಾನ ದಿನ ಎಂದು ಭಾರತದಾದ್ಯಂತ ಆಚರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಬಿಎಸ್‌ಪಿಯಿಂದ ಸಂವಿಧಾನ ತಿಳಿಸಿ-ದೇಶ ಉಳಿಸಿ ಜನ ಜಾಗೃತಿ ಕಾರ್ಯಕ್ರಮ ಹಾಗೂ ಬಿಎಸ್‌ಪಿ ನಾಯಕಿ ಮಾಯಾವತಿ ಅವರ ಜನ್ಮದಿನದ ಅಂಗವಾಗಿ ಆರ್ಥಿಕ ಸಹಾಯ ದಿನ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಕನಗನಮರಡಿ ಬಸ್‌ ದುರಂತ
ಹಾಗೂ ಗಣ್ಯರ ನಿಧನದಿಂದ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಇರುವುದರಿಂದ ಕಾರ್ಯಕ್ರಮವನ್ನು ಮುಂದೂಡಿರುವುದಾಗಿ ಹೇಳಿದರು.

ಮಹಾ ನಗರಪಾಲಿಕೆ ಸದಸ್ಯೆ ಬೇಗಂ ಪಲ್ಲವಿ, ಬಿಎಸ್‌ಪಿ ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು, ಚಾಮರಾಜನಗರ ಜಿಲ್ಲಾಧ್ಯಕ್ಷ ಮಾದಪ್ಪ, ಮುಖಂಡರಾದ ಪ್ರತಾಪ್‌, ದಿನಕರ್‌, ಕೃಷ್ಣಕುಮಾರ್‌, ಲೋಕೇಶ್‌, ಮಲ್ಲೇಶ್‌ ಮೊದಲಾದವರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next