Advertisement

ಕಂಚಗಾರ ಅಪ್ಪಟ ಗ್ರಾಮೀಣ ಪ್ರತಿಭೆ

03:11 PM Dec 03, 2018 | Team Udayavani |

ನಾರಾಯಣಪುರ: ಎಲೆಮರೆ ಕಾಯಿಯಂತಿರುವ ಕಾಷ್ಠಶಿಲ್ಪಿ ಬಸಣ್ಣ ಕಂಚಗಾರ ಒರ್ವ ಅಪ್ಪಟ ಗ್ರಾಮೀಣ ಪ್ರತಿಭೆ, ತಮ್ಮ ಕಾಷ್ಠಶಿಲ್ಪ ಕಲೆಗಳ ಮೂಲಕವೇ ಹೆಸರಾಗಿರುವ ಇವರ ನಿಸ್ವಾರ್ಥ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಹುಣಸಗಿ ಹಿರಿಮೆ ಹೆಚ್ಚಿದಂತಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಹಡಿಕ್ಯಾಳ ಹೇಳಿದರು.

Advertisement

ಕೊಡೇಕಲ್‌ ಪಟ್ಟಣದಲ್ಲಿ ಹುಣಸಗಿ ತಾಲೂಕು ಕಸಾಪ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಠಶಿಲ್ಪಿ ಬಸಣ್ಣ ಕಂಚಗಾರ ಅವರಿಗೆ ನಡೆದ ಅಭಿನಂದನೆ, ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಗ್ರಾಮೀಣ ಭಾಗದಲ್ಲಿ ಅನೇಕ ಕಲಾವಿದರು ಎಲೆಮರೆಯ ಕಾಯಿಯಂತೆ ತಮ್ಮ ಕಾಯಕ ಮಾಡುತ್ತಿದ್ದಾರೆ. ಅಂತಹ ಕಲಾವಿದರ ಪೈಕಿ ಒಬ್ಬರಾಗಿರುವ ಬಸಣ್ಣ ಕಂಚಗಾರ ಅವರನ್ನು ಗುರುತಿಸುವ ಮೂಲಕ ಸರ್ಕಾರ ಒಳ್ಳೆಯ ಹೆಜ್ಜೆ ಇಟ್ಟಿದೆ. ಇದು ಉಳಿದ ಕಲಾವಿದರಿಗೆ ಸ್ಫೂರ್ತಿ ನೀಡಿದೆ.
 
ಕಂಚಗಾರ ಅವರು ಎಂದು ಪ್ರಶಸ್ತಿಗಾಗಿ ಹಂಬಲಿಸಿಲ್ಲ. ಬದಲಾಗಿ ಪ್ರಶಸ್ತಿಗಳೆ ಇವರನ್ನು ಹುಡುಕಿಕೊಂಡು ಬಂದಿವೆ ಎಂದು ಹೇಳಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸಣ್ಣ ಕಂಚಗಾರ ಮಾತನಾಡಿ, ನನ್ನ ಕಲೆ ಮೆಚ್ಚಿ ನನ್ನನ್ನು ಮೇಲೆತ್ತಿರುವ ನಮ್ಮ ಸಗರನಾಡಿನ ಎಲ್ಲರ ಸಹಕಾರ ಫಲದಿಂದ ಇಂದು ನನಗೆ ಪ್ರಶಸ್ತಿ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಸಾಹಿತಿ ವೀರೇಶ ಹಳ್ಳೂರ, ನಾಗನಗೌಡ ಪಾಟೀಲ, ಆರ್‌.ಎಲ್‌. ಸುಣಗಾರ, ಬಸಣ್ಣ ಗೊಡ್ರಿ, ಶಿವಕುಮಾರ ಬಂಡೋಳಿ, ಶಿವಾನಂದ ತೋಟದ, ಕನಕಪ್ಪ ವಾಗಣಗೇರಿ, ಮಶಾಕ ಯಾಳಗಿ, ಬಸವರಾಜ ಅಂಗಡಿ, ರಮೇಶ ಪತ್ತಾರ, ಕಾಳಪ್ಪ ಕಂಚಗಾರ, ಬಸವರಾಜ ಅಂಗಡಿ, ಸಂಗನಗೌಡ ಧನರೆಡ್ಡಿ, ಬಸವಂತಭಟ್‌ ಜೋಶಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next