Advertisement
ಮೊದಲ ಸೆಟ್‌ನಲ್ಲಿ ಸುಲಭ ಗೆಲುವು ಪಡೆದ ಸಿಲಿಕ್ ಮತ್ತೆರಡು ಸೆಟ್ ಗೆಲ್ಲಲು ಶಕ್ತಿಮೀರಿ ಪ್ರಯತ್ನ ನಡೆಸಿದರು. ಅಂತಿಮವಾಗಿ ಅವರು ಆಸ್ಟ್ರೇಲಿಯದ ಜೇಮ್ಸ್ ಡಕ್‌ವರ್ತ್ ಅವರನ್ನು 6-3, 7-5, 7-6 (7-4) ಸೆಟ್‌ಗಳಿಂದ ಕೆಡಹಿ ಮುನ್ನಡೆದರು. 2014ರಲ್ಲಿ ಸಿಲಿಕ್ ಯುಎಸ್ ಓಪನ್‌ನ ಪ್ರಶಸ್ತಿ ಗೆದ್ದಿದ್ದಾರೆ. ಆದರೆ ಮದುವೆ ಆದ ಸಂಭ್ರಮದಲ್ಲಿರುವ ಕಾರಣ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದರೆ ಅದರ ಪ್ರಾಮುಖ್ಯ ಬಹಳಷ್ಟು ಎತ್ತರಕ್ಕೆ ಏರಲಿದೆ ಎಂದು ಸಿಲಿಕ್ ಹೇಳಿದ್ದಾರೆ.
Related Articles
ಮಳೆಯಿಂದ ಮಂಗಳವಾರಕ್ಕೆ ಮುಂದೂಡಿದ ಪಂದ್ಯದಲ್ಲಿ ವಿಶ್ವದ ನಂಬರ್ ವನ್ ಸ್ಪೇನ್‌ನ ರಫೆಲ್ ನಡಾಲ್ ಅವರು ಕೊನೆಗೂ ಗೆಲುವಿನ ನಗೆ ಚೆಲ್ಲಿದ್ದಾರೆ. ಸೋಮವಾರ ಸಂಜೆ ಮಳೆಯಿಂದ ಆಟ ನಿಂತಾಗ ನಡಾಲ್ ಅವರು ಇಟಲಿಯ ಸಿಮೋನ್ ಬೊಲೇಲಿ ವಿರುದ್ಧ 6-4, 6-3, 0-3 ಸೆಟ್‌ಗಳಿಂದ ಮುನ್ನಡೆಯಲ್ಲಿದ್ದರು. ಮೂರನೇ ಸೆಟ್‌ನಲ್ಲಿ ನಡಾಲ್ ಮಳೆ ವಿರಾಮದ ಬಳಿಕ ಭರ್ಜರಿಯಾಗಿ ಆಡಿ 7-6 (11-9) ಅಂತರದಿಂದ ಗೆದ್ದು ಜಯಭೇರಿ ಬಾರಿಸಿದರು.
Advertisement
ಜೊಕೋವಿಕ್‌ಗೆ ಸುಲಭ ಜಯ12 ಬಾರಿಯ ಗ್ರ್ಯಾನ್ ಸ್ಲಾಮ್ ವಿಜೇತ ಜೊಕೋವಿಕ್ ಅವರು ರೊಜಾರಿಯೊ ದುತ್ರ ಸಿಲ್ವ ಅವರನ್ನು 6-3, 6-4, 6-4 ಸೆಟ್‌ಗಳಿಂದ ಪರಾಭವಗೊಳಿಸಿದರು. ಗೆಲುವಿನೊಂದಿಗೆ ಈ ವರ್ಷ ಆರಂಭ ಮಾಡಿರುವುದು ಒಳ್ಳೆಯದಾಗಿದೆ. ಅವರು ಬಹಳಷ್ಟು ಸ್ಪಿನ್ ಮಾಡುತ್ತ ಆಡಿದರು ಎಂದು ಜೊಕೋವಿಕ್ ತಿಳಿಸಿದರು. ಅವರು ಮುಂದಿನ ಸುತ್ತಿನಲ್ಲಿ ಜಾಮಿ ಮುನಾರ್ ಅವರನ್ನು ಎದುರಿಸಲಿದ್ದಾರೆ. ಶಪೋವಲೋವ್‌ಗೆ ಗೆಲುವು
ಕೆನಡದ ಹದಿಹರೆಯದ ಡೆನಿಸ್ ಶಪೋವಲೋವ್ ಅವರು ಆಸ್ಟ್ರೇಲಿಯದ ಜಾನ್ ಮಿಲ್ಮನ್ ಅವರನ್ನು ಸುಲಭವಾಗಿ ಮಣಿಸಿ ದ್ವಿತೀಯ ಸುತ್ತು ತಲುಪಿದರು. ಫ್ರೆಂಚ್ ಓಪನ್‌ನ ಮುಖ್ಯ ಡ್ರಾದಲ್ಲಿ ಮೊದಲ ಬಾರಿ ಆಡಿದ ಮಿಲ್ಮನ್ ಅವರನ್ನು ಶಪೋವಲೋವ್ 7-5, 6-4, 6-2 ಸೆಟ್‌ಗಳಿಂದ ಉರುಳಿಸಿದರು. ಮುಂದಿನ ಸುತ್ತಿನಲ್ಲಿ ಅವರು ಜರ್ಮನಿಯ ಮ್ಯಾಕ್ಸಿ ಮಿಲಿಯನ್ ಮಾರ್ಟೆರರ್ ಅವರನ್ನು ಎದುರಿಸಲಿದ್ದಾರೆ. ಈ ಅಂಗಣದಲ್ಲಿ ಕಳೆದ ಕೆಲವು ವಾರಗಳಲ್ಲಿ ನಂಬಲಸಾಧ್ಯ ರೀತಿಯಲ್ಲಿ ಟೆನಿಸ್ ಆಟ ಆಡುತ್ತಿದ್ದೇನೆ ಎಂದು ಶಪೋವಲೋವ್ ಹೇಳಿದ್ದಾರೆ. ಗ್ರ್ಯಾನ್ ಸ್ಲಾಮ್ ಕೂಟದಲ್ಲಿ ಅವರಿಗೆ ಇದೇ ಮೊದಲ ಬಾರಿ ಶ್ರೇಯಾಂಕ ನೀಡಲಾಗಿದೆ.