Advertisement

ಯೋಗಿಯ ಆತ್ಮಕಥೆ ಓದಿ: ವಿರಾಟ್‌ ಕೊಹ್ಲಿ ಕರೆ

03:45 AM Feb 19, 2017 | |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಎಷ್ಟು ಹೆಸರುವಾಸಿಯೋ ಶಿಸ್ತಿಗೂ ಅಷ್ಟೇ ಹೆಸರುವಾಸಿ. ಇದೀಗ ಅವರು ಆಧ್ಯಾತ್ಮಿಕ ತುಡಿತಗಳ ಮೂಲಕ ಅಭಿಮಾನಿಗಳಿಗೆ ತಮ್ಮ ಹೊಸರೂಪವನ್ನು ಪರಿಚಯಿಸಿದ್ದಾರೆ. ಆಧ್ಯಾತ್ಮಿಕ ಜಗತ್ತಿನಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಯೋಗಿಯ ಆತ್ಮಕಥೆ (ಆಟೋ ಬಯೋಗ್ರಫಿ ಆಫ್ ಯೋಗಿ) ಪುಸ್ತಕವನ್ನು ಓದಿ ಎಂದು ಅಭಿಮಾನಿಗಳಿಗೆ ಟ್ವೀಟ್‌ ಮೂಲಕ ತಿಳಿಸಿದ್ದಾರೆ. 

Advertisement

“ಈ ಪುಸ್ತಕವನ್ನು ನಾನು ಬಹಳ ಇಷ್ಟಪಡುತ್ತೇನೆ. ತಮ್ಮ ಯೋಚನೆ ಮತ್ತು ಚಿಂತನೆಗಳಿಗೆ ಎದುರಾಗುವ ಸವಾಲುಗಳನ್ನು ನಿಭಾಯಿಸುವ ಧೈರ್ಯವಂತರೆಲ್ಲ ಈ ಪುಸ್ತಕವನ್ನು ಓದಲೇಬೇಕು’ ಎಂದು ಕೊಹ್ಲಿ ಹೇಳಿದ್ದಾರೆ.

ಯೋಗಿಯ ಆತ್ಮಕಥೆ ಪುಸ್ತಕ ಜಗತ್ತಿನ ಹಲವು ಭಾಷೆಗಳಿಗೆ ಅನುವಾದಗೊಂಡು ಲಕ್ಷಾಂತರ ಮುದ್ರಣ ಕಂಡಿದೆ. ಸದ್ಯ ಸಮಕಾಲೀನ ಕ್ರಿಕೆಟ್‌ನ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಎನಿಸಿಕೊಂಡಿರುವ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಈ ಕರೆ ನೀಡಿರುವುದರಿಂದ ಪುಸ್ತಕದ ಮುದ್ರಣದ ಸಂಖ್ಯೆ ಇನ್ನಷ್ಟು ಲಕ್ಷಕ್ಕೇರುವುದರಲ್ಲಿ ಅನುಮಾನವೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next