Advertisement

ಗುಜರಾತ್‌ನಲ್ಲಿ ಬಿಜೆಪಿಗೇ ಜಯ

06:40 AM Nov 10, 2017 | Team Udayavani |

ಅಹ್ಮದಾಬಾದ್‌: ವಿಧಾನಸಭೆ ಚುನಾವಣೆಗೆ ಸಿದ್ಧವಾಗಿರುವ ಗುಜರಾತ್‌ನಲ್ಲಿ ಎಬಿಪಿ ನ್ಯೂಸ್‌-ಸಿಎಸ್‌ಡಿಎಸ್‌ ಸಂಸ್ಥೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಬಿಜೆಪಿಯೇ ಅಧಿಕಾರ ಉಳಿಸಿಕೊಳ್ಳಲಿದೆ ಎಂದಿದೆ. ಸಮೀಕ್ಷೆ ಪ್ರಕಾರ, ಬಿಜೆಪಿಗೆ 113-121, ಕಾಂಗ್ರೆಸ್‌ಗೆ 58-64 ಸ್ಥಾನಗಳು ಲಭಿಸಲಿವೆ. ಬಿಜೆಪಿಗೆ ಶೇ.47, ಕಾಂಗ್ರೆಸ್‌ಗೆ ಶೇ.41 ಮತ ದೊರೆಯಲಿವೆ.

Advertisement

ಪಿತ್ರೋಡಾ ಹೆಗಲಿಗೆ ಪŠಣಾಳಿಕೆ ಹೊಣೆ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಸಲಹೆಗಾರರಾಗಿದ್ದ, ಕಾಂಗ್ರೆಸ್‌ ಹಿತೈಷಿಯೆಂದೂ ಬಿಂಬಿತವಾಗಿರುವ ತಂತ್ರಜ್ಞಾನ ಉದ್ಯಮಿ ಸ್ಯಾಮ್‌ ಪಿತ್ರೋಡಾ ಅವರನ್ನು ಕಾಂಗ್ರೆಸ್‌ ಗುಜರಾತ್‌ ಚುನಾವಣಾ ಕಣಕ್ಕೆ ಎಳೆದು ತಂದಿದೆ. ಜನಪರ ಪ್ರಣಾಳಿಕೆ ಬಿಡುಗಡೆಗೆ ಉದ್ದೇಶಿರುವ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಇದರ ಹೊಣೆಯನ್ನು ಪಿತ್ರೋಡಾರಿಗೆ ವಹಿಸಿದ್ದಾರೆ. 

ರಾಹುಲ್‌ ಅನಿಸಿಕೆಯಂತೆ, ಜನರ ಬಳಿಗೇ ಹೋಗಿ ಅವರ ಬೇಕು-ಬೇಡಗಳನ್ನು ಸಂಗ್ರಹಿ ಸಲಿರುವ ಪಿತ್ರೋಡಾ, ಅದರ ಆಧಾರದ ಮೇಲೆ ಪ್ರಣಾಳಿಕೆ ಸಿದ್ಧಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ, 5 ದಿನ ಅಹ್ಮದಾಬಾದ್‌, ಸೂರತ್‌, ವಡೋದರಾ,  ಜಾಮ್‌ನಗರ್‌ಗಳಿಗೆ ತೆರಳಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next